ಬೆಳ್ತಂಗಡಿ : ಧರ್ಮಸ್ಥಳದ ವಿರುದ್ದ ಹಾಗೂ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ವಿರುದ್ದ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ, ಸೌಜನ್ಯ ಸಾವಿನ ಪ್ರಕರಣದ (Soujanya case) ಮರುತನಿಖೆಗೆ ಆಗ್ರಹಿಸಿ ಉಜಿರೆಯಲ್ಲಿ ನಿನ್ನೆ ಬೃಹತ್ ಹಕ್ಕೊತ್ತಾಯ ಪ್ರತಿಭಟನೆ ನಡೆದಿದೆ. ಈ ವೇಳೆಯಲ್ಲಿ ಪ್ರತಿಭಟನಾ ವೇದಿಕೆಗೆ ಹತ್ತಲು ಮುಂದಾದ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಸಹೋದರನ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಲು ಮುಂದಾಗಿದ್ದ. ಇದೀಗ ಕುಮಾವತಿ ಅವರು ಧರ್ಮಸ್ಥಳ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.
ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದದ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಪ್ರತಿಭಟನಾ ಹಕ್ಕೊತ್ತಾಯದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಪ್ರತಿಭಟನೆಯ ಅಂತಿಮ ಹಂತದಲ್ಲ ಸೌಜನ್ಯ ತಾಯಿ, ಸಹೋದರ ಆಗಮಿಸಿದ್ದರು. ಈ ವೇಳೆಯಲ್ಲಿ ಪೊಲೀಸರು ಸೌಜನ್ಯ ತಾಯಿ ವೇದಿಕೆಗೆ ತೆರಳಲು ತಡೆಯೊಡ್ಡಿದ್ದಾರೆ. ಇದೇ ವೇಳೆಯಲ್ಲಿ ವ್ಯಕ್ತಿಯೋರ್ವ ಕುಸುಮಾವತಿ ಅವರ ಮೈಗೆ ಕೈ ಹಾಕಿ ಚೂಡಿದಾರದ ಶಾಲನ್ನು ಎಳೆದು ಮಾನಭಂಗ ಮಾಡಿದ್ದು, ಜಯರಾಮನ ಮೇಲೂ ಹಲ್ಲೆಗೂ ಯತ್ನಿಸಿದ್ದಾನೆ ಎಂದು ಧರ್ಮಸ್ಥಳ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ : Jammu & Kashmir Encounter : ಉಗ್ರರ ಎನ್ ಕೌಂಟರ್ ವೇಳೆ 3 ಯೋಧರು ಹುತಾತ್ಮ

ಸೌಜನ್ಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಧರ್ಮಸ್ಥಳ ಠಾಣೆಯ ಪೊಲೀಸರು ಆರೋಪಿಯ ವಿರುದ್ದ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆಯನ್ನು ಆರಂಭಿಸಿದ್ದಾರೆ.
Soujanya case : Dharamsthala devotees protest : Soujanya’s mother, brother assaulted, case registered