ಭಾನುವಾರ, ಮೇ 11, 2025
HomeSportsCricketKarnataka Cricket: ರಾಜ್ಯ ಕ್ರಿಕೆಟ್’ನಲ್ಲಿ ಕಡೆಗಣಿಸಿದವರಿಗೆ ಆಟದಿಂದಲೇ ಉತ್ತರಿಸುತ್ತಿದ್ದಾರೆ ತ್ರಿಮೂರ್ತಿಗಳು

Karnataka Cricket: ರಾಜ್ಯ ಕ್ರಿಕೆಟ್’ನಲ್ಲಿ ಕಡೆಗಣಿಸಿದವರಿಗೆ ಆಟದಿಂದಲೇ ಉತ್ತರಿಸುತ್ತಿದ್ದಾರೆ ತ್ರಿಮೂರ್ತಿಗಳು

- Advertisement -

ಬೆಂಗಳೂರು: Karnataka Cricket : ಟೆಸ್ಟ್ ಕ್ರಿಕೆಟ್ ತ್ರಿಶತಕವೀರ ಕರುಣ್ ನಾಯರ್ (Karun Nair), ಕರ್ನಾಟಕದ ಸ್ಟಾರ್ ಆಲ್ರೌಂಡರ್ ಶ್ರೇಯಸ್ ಗೋಪಾಲ್ (Shreyas Gopal) ಮತ್ತು ಭರವಸೆಯ ಬ್ಯಾಟ್ಸ್’ಮನ್ ಕೆ.ವಿ ಸಿದ್ಧಾರ್ಥ್ (KV Siddharth) ಈ ಸಾಲಿನ ದೇಶೀಯ ಕ್ರಿಕೆಟ್’ನಲ್ಲಿ ಕರ್ನಾಟಕ ತಂಡವನ್ನು ತೊರೆದು ಬೇರೆ ರಾಜ್ಯಗಳ ಪರ ಆಡಲು ಸಜ್ಜಾಗಿದ್ದಾರೆ.

ಕರ್ನಾಟಕ ತಂಡದಲ್ಲಿ ಅವಕಾಶದ ಕೊರತೆಯ ಹಿನ್ನೆಲೆಯಲ್ಲಿ ಈ ಮೂವರೂ ಆಟಗಾರರು ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ತೊರೆಯಲು ನಿರ್ಧರಿಸಿದ್ದಾರೆ. ಕರುಣ್ ನಾಯರ್ ವಿದರ್ಭ ತಂಡದ ಪರ ಆಡಲಿದ್ದರೆ, ಶ್ರೇಯಸ್ ಗೋಪಾಲ್ ಕೇರಳ ಮತ್ತು ಕೆ.ವಿ ಸಿದ್ಧಾರ್ಥ್ ಗೋವಾ ತಂಡದ ಪರ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಕರ್ನಾಟಕವನ್ನು ತೊರೆಯಲು ನಿರ್ಧರಿಸಿರುವ ಕರುಣ್ ನಾಯರ್, ಶ್ರೇಯಸ್ ಗೋಪಾಲ್ ಮತ್ತು ಕೆ.ವಿ ಸಿದ್ಧಾರ್ಥ್ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸಿರುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ತೋರುತ್ತಿದ್ದಾರೆ. ಈ ಮೂಲಕ ತಮ್ಮನ್ನು ಕಡೆಗಣಿಸಿದ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಆಟದಿಂದಲೇ ಉತ್ತರ ಕೊಡುತ್ತಿದ್ದಾರೆ. ಮಂಗಳೂರು ಡ್ರಾಗನ್ಸ್ ತಂಡದ ಪರ ಆಡುತ್ತಿರುವ ಕೆ.ವಿ ಸಿದ್ಧರ್ಥ್, ಶುಕ್ರವಾರ ನಡೆದ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸಿದ್ದರು. 64 ಎಸೆತಗಳನ್ನೆದುರಿಸಿದ ಸಿದ್ಧಾರ್ಥ್ 9 ಬೌಂಡರಿ ಹಾಗೂ 4 ಸಿಕ್ಸರ್’ಗಳ ನೆರವಿನಿಂದ ಅಜೇಯ 100 ರನ್ ಸಿಡಿಸಿದ್ದರು.

ಟೂರ್ನಿಯಲ್ಲಿ ಇದುವರೆಗೆ ಆಡಿದ ನಾಲ್ಕು ಪಂದ್ಯಗಳಿಂದ ಒಂದು ಶತಕ ಸಹಿತ 207 ರನ್ ಗಳಿಸಿರುವ ಸಿದ್ಧಾರ್ಥ್ ಆರೆಂಜ್ ಕ್ಯಾಪ್ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ : Virat Kohli complets 15 years : ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕರಿಯರ್’ಗೆ 15 ವರ್ಷ, ಕ್ರಿಕೆಟ್ ಪಿಚ್’ನಲ್ಲಿ 500 ಕಿ.ಮೀ ಓಡಿದ್ದಾರೆ ರನ್ ಮಷಿನ್

ಮೈಸೂರು ವಾರಿಯರ್ಸ್ ತಂಡದ ನಾಯಕ ಕರುಣ್ ನಾಯರ್ ಕಳೆದ ಮೂರೂ ಪಂದ್ಯಗಳಲ್ಲಿ ಅಮೋಘ ಅರ್ಧಶತಕಗಳನ್ನು (77 ರನ್, 57 ರನ್, 60 ರನ್) ಬಾರಿಸಿದ್ದಾರೆ. ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಿಂದ 3 ಅರ್ಧಶತಗಳ ಸಹಿತ 201 ರನ್ ಗಳಿಸಿದ್ದಾರೆ. ಇನ್ನು ಶಿವಮೊಗ್ಗ ಲಯನ್ಸ್ ತಂಡದ ನಾಯಕರಾಗಿರುವ ಶ್ರೇಯಸ್ ಗೋಪಾಲ್ 4 ಪಂದ್ಯಗಳಿಂದ 124 ರನ್ ಹಾಗೂ 4 ವಿಕೆಟ್’ಗಳನ್ನು ಕಬಳಿಸಿದ್ದಾರೆ.

Karnataka Cricket: The trinity is answering those who have been neglected in the state cricket through the game itself

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular