ಸೋಮವಾರ, ಏಪ್ರಿಲ್ 28, 2025
HomeCoastal NewsSaligrama News : ಸಾಲಿಗ್ರಾಮ : ಗುರುನರಸಿಂಹ ದೇವರ ಪವಾಡ ತಪ್ಪಿದ ಬಾರೀ ದುರಂತ

Saligrama News : ಸಾಲಿಗ್ರಾಮ : ಗುರುನರಸಿಂಹ ದೇವರ ಪವಾಡ ತಪ್ಪಿದ ಬಾರೀ ದುರಂತ

- Advertisement -

ಉಡುಪಿ : Saligrama News : ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ಸೊಂದು ಸ್ಟೇರಿಂಗ್‌ ಲಾಕ್‌ ಆಗಿ ಡಿವೈಡರ್‌ (Bus accident) ಮೇಲೆ ಹತ್ತಿದೆ. ಆದರೆ ಚಾಲಕನ ಸಮಯಪ್ರಜ್ಞೆಯಿಂದ ಬಾರೀ ಅನಾಹುತವೊಂದು ತಪ್ಪಿದೆ.

ಮಂಗಳೂರಿನಿಂದ ಮುಂಬೈಗೆ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಮರ್ಸಿ ಟ್ರಾವೆಲ್ಸ್ ಹೆಸರಿನ ಖಾಸಗಿ ಬಸ್ ಸಾರಿಗೆ ಬಸ್ಸೊಂದು ಉಡುಪಿ ಜಿಲ್ಲೆ, ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಎಂಬಲ್ಲಿ ಬಸ್ಸ್‌ನ ಸ್ಟೇರಿಂಗ್‌ ಲಾಕ್‌ನಿಂದ ಟೈಯರ್‌ ಬ್ಲಾಸ್ಟ್‌ ಆಗಿದ್ದರಿಂದ ರಸ್ತೆ ಮೇಲೆ ಚಲಿಸುತ್ತಿದ್ದ ಬಸ್‌ ಏಕಾಏಕಿಯಾಗಿ ಡಿವೈಡರ್‌ ಮೇಲೆ ಹತ್ತಿದೆ. ಇದ್ದರಿಂದಾಗಿ ಸುಮಾರು ಹತ್ತರಿಂದ ಇಪ್ಪತ್ತು ನಿಮಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಆದರೆ ಚಾಲಕನ ಸಮಯಪ್ರಜ್ಞೆಯಿಂದ ಯಾವುದೇ ಅಪಾಯ ಸಂಭವಿಸಿರುವುದಿಲ್ಲ ಎಂದು ಹೇಳಲಾಗಿದೆ.

ಇದನ್ನೂ ಓದಿ : Power Cut : ಉಡುಪಿ : ಅಗಸ್ಟ್‌ 22, 23 ರಂದು ವಿದ್ಯುತ್ ವ್ಯತ್ಯಯ : ಎಲ್ಲೆಲ್ಲಿ ವಿದ್ಯುತ್‌ ಕಡಿತ, ಇಲ್ಲಿದೆ ಸಂಪೂರ್ಣ ಮಾಹಿತಿ

ಘಟನೆ ನಡೆದ ಕೂಡಲೇ ಸ್ಥಳೀಯರು ದೌಡಾಯಿಸಿದ್ದಾರೆ‌. ಸದ್ಯ ಭಾರೀ ಅಪಾಯ ತಪ್ಪಿದ್ದನ್ನು ಕಂಡು ಸಾಲಿಗ್ರಾಮ ಗುರುನರಸಿಂಹ ಹಾಗೂ ಆಂಜನೇಯ ದೇವರ ಪವಾಡ ಎಂದು ಹೇಳಿದ್ದಾರೆ.

Saligrama News : Bus accident: Saligrama: Bus steering locked and tire burst was a big risk

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular