ನವದೆಹಲಿ : ಮನೆ ಕಟ್ಟಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಆದರೆ ಜನಸಾಮಾನ್ಯರಿಗೆ ಮನೆ ಕಟ್ಟುವುದು ಅಷ್ಟು ಸುಲಭದ ಮಾತಲ್ಲ. ದುಡಿಮೆಯಿಂದ ಒಂದಿಷ್ಟು ಹಣವನ್ನು ಕೂಡಿಟ್ಟರೂ ಕೂಡ ಬ್ಯಾಂಕ್ ಸಾಲದ (Bank loan) ಮೊರೆ ಹೋಗಬೇಕಾಗಿರುವುದು ಅನಿರ್ವಾಯ. ಆದರೆ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗೋದು ಕೂಡ ಕಷ್ಟವೇ ಸರಿ. ಆದ್ರೀಗ ಮನೆ ಖರೀದಿ ಮಾಡುವವರಿಗೆ ಕೇಂದ್ರ ಸರಕಾರ ಗುಡ್‌ನ್ಯೂಸ್ ಕೊಟ್ಟಿದೆ. ಅಲ್ಲದೇ ಸೆಪ್ಟೆಂಬರ್ 1 ರಿಂದಲೇ ಹೊಸ ಯೋಜನೆ ಜಾರಿಗೆ ಬರಲಿದೆ.
ಕೇಂದ್ರ ಸರಕಾರವು ಹೊಸ ಯೋಜನೆಯ ಬಡ ಹಾಗೂ ಮಧ್ಯಮ ವರ್ಗದವರಿಗೂ ಅನುಕೂಲಕರವಾಗಲಿದೆ. ಅದ್ರಲ್ಲೂ ಬಾಡಿಗೆ ಮನೆಗಳಲ್ಲಿ ವಾಸಿಸುವವರಿಗೆ ಅಗ್ಗದ ಮನೆಯ ಸಾಲ ವರದಾನವಾಗಲಿದೆ. ಕೇಂದ್ರ ಸರಕಾರದ ವಸತಿ ಸಚಿವಾಲಯ ಯೋಜನೆ ಜಾರಿಗೊಳಿಸಿದ್ದು, ಜನರು ಸಖತ್ ಖುಷಿಯಾಗಿದ್ದಾರೆ.
ಮನೆ ಸಾಲಕ್ಕೆ ಹೊಸ ಯೋಜನೆ ಜಾರಿ:
ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಪತ್ರಿಕಾಗೋಷ್ಠಿಯಲ್ಲಿ ಈ ಯೋಜನೆಯ ವಿಧಾನಗಳನ್ನು ರೂಪಿಸಲಾಗಿದೆ. ಸಪ್ಟೆಂಬರ್ ತಿಂಗಳಿನಿಂದಲೇ ಈ ಯೋಜನೆ ಜಾರಿಗೆ ಬರುತ್ತದೆ. ಸಾರ್ವಜನಿಕರಿಗೆ ಈ ಯೋಜನೆಯ ಕುರಿತು ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತಿದ್ದೇವೆ. ಶೀಘ್ರದಲ್ಲಿಯೇ ಯೋಜನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಪ್ರಕಟಿಸಲಿದ್ದೇವೆ ಎಂದಿದ್ದಾರೆ.

ಹೊಸ ಯೋಜನೆ ಮಧ್ಯಮ ವರ್ಗದವರಿಗೆ ಮಾತ್ರ ಲಭ್ಯ :
ನಗರಗಳಲ್ಲಿ ವಾಸಿಸುವ ಆದರೆ ಸ್ವಂತ ಮನೆ ಇಲ್ಲದ ಮಧ್ಯಮ ವರ್ಗದ ಕುಟುಂಬಗಳಿಗೆ ಈ ಹೊಸ ಯೋಜನೆ ಲಭ್ಯವಾಗಲಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಈ ಘೋಷಣೆಯನ್ನು ಮಾಡಿದ್ದಾರೆ. ಇನ್ನು ಸ್ವತಃ ಮನೆ ಕಟ್ಟಲು ಕನಸು ಕಾಣುತ್ತಿರುವವ ಕನಸು ಈ ಯೋಜನೆಯ ಮೂಲಕ ನನಸಾಗಲಿದೆ.

ಹೊಸ ಯೋಜನೆ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು ?
ಮಧ್ಯಮ ವರ್ಗದ ಕುಟುಂಬಗಳು ನಗರಗಳಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿವೆ. ಶೀಘ್ರದಲ್ಲಿಯೇ ಅವರಿಗಾಗಿ ಯೋಜನೆಯೊಂದನ್ನು ಆರಂಭಿಸಲಿದ್ದೇವೆ. ನಗರಗಳಲ್ಲಿನ ಬಾಡಿಗೆ ಮನೆಗಳು, ಅನಧಿಕೃತ ಕಾಲೋನಿಗಳು ಮತ್ತು ಗುಡಿಸಲುಗಳಲ್ಲಿ ವಾಸಿಸುವ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಿಸಲು ಲಕ್ಷ ರೂಪಾಯಿಗಳ ಸಹಾಯವನ್ನು ನೀಡುವ ಮೂಲಕ ಬ್ಯಾಂಕ್ ಸಾಲದ ಬಡ್ಡಿಯಲ್ಲಿ ಪರಿಹಾರ ನೀಡಲು ನಾವು ನಿರ್ಧರಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಇದನ್ನೂ ಓದಿ : ವಾಣಿಜ್ಯ ಸಿಲಿಂಡರ್ ಬೆಲೆ : ಎಲ್‌ಪಿಜಿ ಗ್ಯಾಸ್ ಬೆಲೆ 158 ರೂ.ಕಡಿತ : ನಿಮ್ಮೂರಲ್ಲಿ ಎಷ್ಟು ಬೆಲೆ ಪರಿಶೀಲಿಸಿ
ಹೊಸ ಯೋಜನೆಯು ಬಾಡಿಗೆ ಮನೆಗಳು, ಕೊಳೆಗೇರಿಗಳು ಅಥವಾ ಚಾಲ್‌ಗಳು ಮತ್ತು ಅನಧಿಕೃತ ಕಾಲೋನಿಗಳಲ್ಲಿ ನಗರಗಳಲ್ಲಿ ವಾಸಿಸುವ ಕುಟುಂಬಗಳಿಗೆ ಅನುಕೂಲಕರವಾಗಿದೆ.ಅವರು ತಮ್ಮ ಸ್ವಂತ ಮನೆಗಳನ್ನು ನಿರ್ಮಿಸಲು ಬಯಸಿದರೆ, ನಾವು ಅವರಿಗೆ ಬಡ್ಡಿದರದಲ್ಲಿ ಪರಿಹಾರ ಮತ್ತು ಬ್ಯಾಂಕ್‌ಗಳಿಂದ ಸಾಲದ ಸಹಾಯವನ್ನು ನೀಡುತ್ತೇವೆ ಅದು ಅವರಿಗೆ ಲಕ್ಷ ರೂಪಾಯಿಗಳನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಇನ್ನೂ ಬಂದಿಲ್ವಾ ? ಪಡಿತರ ಕಾರ್ಡ್ ತಿದ್ದುಪಡಿಗೆ ಹೊಸ ರೂಲ್ಸ್
ಮಾರ್ಚ್ 2022 ರಲ್ಲಿ ಕೊನೆಗೊಂಡ ಆರ್ಥಿಕವಾಗಿ ದುರ್ಬಲ ವರ್ಗಗಳು (EWS) ಅಥವಾ ಕಡಿಮೆ ಆದಾಯದ ಗುಂಪು (LIG) ಗಾಗಿ ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ ಯೋಜನೆ (CLSS) ಗೆ ಅನುಗುಣವಾಗಿ ಹೊಸ ಯೋಜನೆಯನ್ನು ಪ್ರಾರಂಭಿಸಲಾಗುವುದು. CLSS ನ ಭಾಗವಾಗಿ, ಕೇಂದ್ರವು 3-6.5% ಬಡ್ಡಿ ಸಬ್ಸಿಡಿ ಮೂಲಕ ತಲಾ ರೂ 2.67 ಲಕ್ಷದವರೆಗೆ ಪ್ರಯೋಜನವನ್ನು ಒದಗಿಸುತ್ತಿತ್ತು. ಪಿಎಂಎವೈ (ಯು) ಅಡಿಯಲ್ಲಿ ಮಂಜೂರಾದ 11 ಮಿಲಿಯನ್ ಮನೆಗಳಲ್ಲಿ 7.6 ಮಿಲಿಯನ್ ಪೂರ್ಣಗೊಂಡಿದೆ ಎಂದು ವಸತಿ ಸಚಿವಾಲಯ ಗುರುವಾರ ಅಪ್‌ಡೇಟ್ ಮಾಡಿದೆ.
Good News for house Buyers New Scheme Lounch till September Low Home Loan Intrest