ಭಾನುವಾರ, ಏಪ್ರಿಲ್ 27, 2025
HomeWorldಸೂರ್ಯ ಮುಳುಗದ ವಿಶ್ವದ 8 ದೇಶಗಳು ! ಇಲ್ಲಿ ದಿನದ 24 ಗಂಟೆಯೂ ಸೂರ್ಯನ ಬೆಳಕು

ಸೂರ್ಯ ಮುಳುಗದ ವಿಶ್ವದ 8 ದೇಶಗಳು ! ಇಲ್ಲಿ ದಿನದ 24 ಗಂಟೆಯೂ ಸೂರ್ಯನ ಬೆಳಕು

- Advertisement -

ನಮ್ಮ ಬದುಕಿನ ಜೊತೆಗೆ ಜಗತ್ತಿನಾದ್ಯಂತ ಸೂರ್ಯೋದಯ, ಸೂರ್ಯಾಸ್ತ ಸಾಮಾನ್ಯ. ಸೂರ್ಯ ಬೆಳಗುತ್ತಿದ್ದಂತೆಯೇ ಕತ್ತಲು ಸರಿದು ಬೆಳಕು ಹರಿಯುತ್ತದೆ. ಸೂರ್ಯ ಪಶ್ಚಿಮದಲ್ಲಿ ಅಸ್ತಂಗತ ಆಗುತ್ತಿದ್ದಂತೆಯೇ ಕತ್ತಲು ಆವರಿಸುತ್ತೆ. ಇದು ಪ್ರಕೃತಿಯ ನಿಯಮ. ದಿನದಲ್ಲಿ 12 ಗಂಟೆ ನಮಗೆ ಕತ್ತಲಾದ್ರೆ, ಇನ್ನು 12 ಗಂಟೆಗಳ ಕಾಲ ಬೆಳಕು ಇರುತ್ತೆ. ಭಾರತ ಮಾತ್ರವಲ್ಲ ವಿಶ್ವದ ಬಹುತೇಕ ರಾಷ್ಟ್ರಗಳ ಸ್ಥಿತಿ ಹೀಗೆಯೇ. ಆದರೆ ವಿಶ್ವದ 8 ದೇಶದ (8 contries Sun never Sets ) ಈ ಪ್ರದೇಶಗಳಲ್ಲಿ ಕತ್ತಲೇ (midnight sun) ಆಗೋದಿಲ್ಲ. ದಿನದ 24 ಗಂಟೆಗಳ ಕಾರ್ಯ ಸೂರ್ಯನ ಬೆಳಕು ಹರಿಯುತ್ತಿದೆ. ರಾತ್ರಿಯಿಲ್ಲದ ಇಲ್ಲಿನ ಜನರು ಹೇಗೆ ಎಂಜಾಯ್‌ ಮಾಡ್ತಾರೆ ಅನ್ನೋ ಸ್ಪೆಷಲ್‌ ರಿಪೋರ್ಟ್‌ ಇಲ್ಲಿದೆ.

ಭೂಮಿಯಲ್ಲಿ ಕತ್ತಲು, ಬೆಳಕು ಸಹಜ. ಆದರೆ ನಮ್ಮದೇ ಭೂಮಿಯಲ್ಲಿರುವ ವಿಶ್ವದ 8 ದೇಶಗಳಲ್ಲಿ ವರ್ಷದ ಕೆಲವು ತಿಂಗಳ ಕಾಲ ಕತ್ತಲು ಆಗುವುದೇ ಇಲ್ಲ. ಮೂರು ತಿಂಗಳಿಗೂ ಅಧಿಕ ಕಾಲ ಸೂರ್ಯ ಮುಳುಗುವುದೇ ಇಲ್ಲವಂತೆ. ಅದ್ರಲ್ಲಿ ಪ್ರಮುಖವಾಗಿರುವುದು ನಾರ್ವೆ (Norway), ಸ್ವೀಡನ್‌ (Sweeden), ಫಿನ್ಲ್ಯಾಂಡ್‌ (finland), ರಷ್ಯಾ (Russia) , ಐಸ್ಲ್ಯಾಂಡ್‌ (Iceland), ಕೆನಡಾ (Canada), ಅನಾಸ್ಕಾ (Alaska, ಗ್ರೀನ್ಲ್ಯಾಂಡ್‌ (greenland) ದೇಶಗಳಲ್ಲಿ ವರ್ಷದ ಕೆಲವು ತಿಂಗಳು ಕತ್ತಲು ಆವರಿಸೋದೆ ಇಲ್ಲ.

ಸಾಮಾನ್ಯವಾಗಿ ಪ್ರವಾಸಕ್ಕೆ ತೆರಳುವವರು ಆಯಾಯ ಪ್ರವಾಸಿ ತಾಣಗಳಲ್ಲಿನ ವೈಶಿಷ್ಟ್ಯತೆಯನ್ನು ಆಧರಿಸಿ ತಾಣಗಳನ್ನು ಆಯ್ಕೆ ಮಾಡುತ್ತಾರೆ. ಪ್ರವಾಸಕ್ಕೆ ತೆರಳುವವರಿಗೂ ಕೂಡ ಸೂರ್ಯ ಮುಳುಗದ ಈ ಎಂಟು ದೇಶಗಳು ಫೇವರೇಟ್‌ ಸ್ಪಾಟ್.‌ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭಾರತೀಯರು ಕೂಡ ಇಂತಹ ಪ್ರವಾಸಿತಾಣಗಳಿಗೆ ತೆರಳುತ್ತಾರೆ.

8 countries in the world where the sun does not set Here there is sunlight 24 hours a day
Image Credit to Original Source

ನಾರ್ವೆ ( ಉತ್ತರ ಯುರೋಪ್‌ ) :
ಉತ್ತರ ಯೂರೋಪ್‌ನ ಸ್ಕ್ಯಾಂಡಿನೇವಿಯ ದ್ವೀಪಕಲ್ಪದಲ್ಲಿರುವ ದೇಶ. ಸ್ವೀಡನ್‌, ಫಿನ್‌ಲ್ಯಾಂಡ್‌ ಮತ್ತು ರಷ್ಯಾ ದೇಶಗಳ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಈ ದೇಶದ ಉತ್ತರ ಭಾಗದಲ್ಲಿ ಅಟ್ಲಾಂಟಿಕ್‌ ಮಹಾಸಾಗರವಿದೆ. ಆದರೆ ಈ ಈ ನಾರ್ವೆ ದೇಶದ ವಿಶೇಷತೆಯೆಂದರೆ, ಇಲ್ಲಿ ವರ್ಷದ ಕೆಲವು ತಿಂಗಳು ಸೂರ್ಯ ಮುಳುಗುವುದೇ ಇಲ್ಲ.

ಮಧ್ಯರಾತ್ರಿಯ ಸೂರ್ಯನ ಭೂಮಿ ಅಂತಾ ಕರೆಯಿಸಿಕೊಳ್ಳುವ ನಾರ್ವೆಯಲ್ಲಿ. ವರ್ಷಂಪ್ರತಿ ಮೇ ಅಂತ್ಯದಿಂದ ಜುಲೈ ತಿಂಗಳ ವರೆಗೆ ಸೂರ್ಯ ಮುಳುಗುವುದೇ ಇಲ್ಲವಂತೆ. ಎಪ್ರಿಲ್‌ 10 ರಿಂದ ಅಗಸ್ಟ್‌ 23ರ ವರೆಗೆ ಸೂರ್ಯನ ಬೆಳಕು ದಿನ 24 ಗಂಟೆಗಳ ಕಾಲ ಕಂಡು ಬರುತ್ತದೆ. ಉತ್ತರ ಯುರೋಪಿ ನಲ್ಲಿರುವ ಪ್ರಮುಖ ಜನವಸತಿ ಪ್ರದೇಶವೂ ಹೌದು. ಇಲ್ಲಿನ ಜನರು ರಾತ್ರಿಯಿಲ್ಲದ ದಿನಗಳನ್ನು ಕಳೆಯುತ್ತಾರೆ. ವಿಶ್ವದ ನಾನಾ ದೇಶಗಳಿಂದಲೂ ಈ ಸಮಯದಲ್ಲಿ ಪ್ರವಾಸಿಗರು ನಾರ್ವೆಗೆ ಆಗಮಿಸುತ್ತಾರೆ.

8 countries in the world where the sun does not set Here there is sunlight 24 hours a day
Image Credit to Original Source

ಐಸ್ಲ್ಯಾಂಡ್ ( ಯುರೋಪ್‌ )
ಸೂರ್ಯ ಮುಳುಗದ ಇನ್ನೊಂದು ದೇಶ ಐಸ್ಲ್ಯಾಂಡ್.‌ ಯುರೋಪಿನ ಅತೀ ದೊಡ್ಡ ದ್ವೀಪ ಎನಿಸಿಕೊಂಡಿರುವ ಐಸ್ಲ್ಯಾಂಡ್‌ ಜೂನ್‌ ತಿಂಗಳು ಆರಂಭವಾದ್ರೆ ಸಾಕು ಸೂರ್ಯ ಅಸ್ತಂಗತನಾಗುವುದೇ ಇಲ್ಲ. ಉತ್ತರ ಯುರೋಪ್‌ನಲ್ಲಿರುವ ಐಸ್ಲ್ಯಾಂಡ್‌ ವಿಶ್ವದ ಪ್ರಮುಖ ಪ್ರವಾಸಿ ತಾಣವೂ ಹೌದು. ಸಾಮಾನ್ಯವಾಗಿ ಬೇಸಿಗೆಯ ಕಾಲದಲ್ಲಿ ಇಲ್ಲಿ ರಾತ್ರಿ, ಹಗಲು ಸಾಮಾನ್ಯವಾಗಿ ಇರುತ್ತದೆ. ಆದ್ರೆ ಜೂನ್‌ ತಿಂಗಳಿನಲ್ಲಿ ಇಲ್ಲಿನ ಜನರು ಕತ್ತಲೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಾರೆ. ನಡುರಾತ್ರಿಯಲ್ಲಿ ಸೂರ್ಯನ ವೈಭವ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೇ ಇಲ್ಲಿಗೆ ಆಗಮಿಸುತ್ತದೆ.

8 countries in the world where the sun does not set Here there is sunlight 24 hours a day
Image Credit to Original Source

ಅಲಾಸ್ಕಾ ( ಅಮೇರಿಕಾ)
ಉತ್ತರ ಅಮೇರಿಕಾದ ವಾಯುವ್ಯ ಭಾಗದಲ್ಲಿರುವ ಅಲಾಸ್ಕಾ ಅಮೇರಿಕಾ ಸಂಯುಕ್ತ ಸಂಸ್ಥಾನ ಅತೀ ದೊಡ್ಡ ರಾಜ್ಯ. ಕೆನಡಾ ಪಕ್ಕದಲ್ಲಿರುವ ಅಲಾಸ್ಕಾ ವಿಶ್ವದಲ್ಲಿಯೇ ವಿಶಿಷ್ಟವಾಗಿದೆ. ಇಲ್ಲಿನ ಜನರು ಮೀನುಗಾರಿಕೆ, ಪಶುಪಾಲನೆಯನ್ನೇ ನೆಚ್ಚಿಕೊಂಡಿದ್ದಾರೆ. ನಿಸರ್ಗ ಸೌಂದರ್ಯದಿಂದಲೇ ಕಂಗೊಳಿಸುವ ಅಲಾಸ್ಕಾ ಅತೀ ದೊಡ್ಡ ದೊಡ್ಡ ಹಾಗೂ ಅತೀ ಸಣ್ಣ ಹಗಲನ್ನು ಇಲ್ಲಿ ಕಾಣಬಹುದು. ಜೊತೆಗೆ ನಾರ್ದರ್ನ್‌ ಬೆಳಕು ಕಾಣಸಿಗುವ ಖ್ಯಾತಿಯೂ ಈ ಪ್ರದೇಶಕ್ಕಿದೆ. ಆಲಾಸ್ಕಾದ ಆಕರ್ಷಣೆಯೇ ಇಲ್ಲಿನ ಪ್ರವಾಸಿ ತಾಣಗಳು.

ಇಲ್ಲಿ ಮೇ ಅಂತ್ಯದಿಂದ ಜುಲೈ ಅಂತ್ಯದವರೆಗೆ ಇಲ್ಲಿನ ಜನರು ಕತ್ತಲೆ ಇಲ್ಲದ ರಾತ್ರಿಯನ್ನು ಕಳೆಯುತ್ತಾರೆ. ಅಷ್ಟೇ ಅಲ್ಲಾ ನವೆಂಬರ್‌ ತಿಂಗಳಿನಲ್ಲಿ ಮೂವತ್ತು ದಿನಗಳ ಕಾಲ ಇಲ್ಲಿ ಸೂರ್ಯ ಉದಯಿಸೋದೇ ಇಲ್ಲ. ಈ ಕಾಲವನ್ನು ಪೋಲಾರ್‌ ನೈಟ್ಸ್‌ ಎಂದು ಕರೆಯುತ್ತಾರೆ. ಕಠಿಣ ಚಳಿಗಾಲದಲ್ಲಿ ಆಲಾಸ್ಕಾ ಕತ್ತಲೆಯಲ್ಲಿರುತ್ತೆ. ಹಿಮನದಿಗಳಿಗೆ ಹೆಚ್ಚು ಪ್ರಖ್ಯಾತಿಯನ್ನು ಪಡೆದಿರುವ ಆಲಾಸ್ಕಾಕ್ಕೆ ಬೇಸಿಗೆ ಹಾಗೂ ಚಳಿಗಾಲದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ

8 countries in the world where the sun does not set Here there is sunlight 24 hours a day Canada
Image Credit To original Source

ನೂನಾವುಟ್ (ಕೆನಡಾ):
ವಿಶ್ವದಲ್ಲಿನ ಅತೀ ಕಡಿಮೆ ಜನಸಂಖ್ಯೆ ಹೊಂದಿರುವ ಪ್ರದೇಶಗಳ ಪೈಕಿ ಒಂದಾಗಿರುವ ನೂನಾವುಟ್‌ ಕೂಡ ಸೂರ್ಯ ಮುಳುಗದ ಪ್ರದೇಶ ಅನ್ನೋ ಖ್ಯಾತಿಗೆ ಪಾತ್ರವಾಗಿದೆ. ಕೆನಡಾದ ವಾಯುವ್ಯ ಪ್ರಾಂತ್ಯದಲ್ಲಿರುವ ನೂನಾವುಟ್‌ ನಲ್ಲಿ 3000 ಸಾವಿರದಷ್ಟು ಜನಸಂಖ್ಯೆಯಿದೆ. ವರ್ಷದ ಎರಡು ತಿಂಗಳ ಕಾಲ ದಿನದ 24 ಗಂಟೆಗಳ ಕಾಲವೂ ಸೂರ್ಯನ ಬೆಳಕನ್ನು ಕಾಣುತ್ತದೆ. ಆದರೆ ಚಳಿಗಾಲ ಆರಂಭವಾಗುತ್ತಿದ್ದಂತೆಯೇ ಬರೋಬ್ಬರಿ ಒಂದು ತಿಂಗಳ ಕಾಲ ಸಂಪೂರ್ಣವಾಗಿ ಕತ್ತಲೆಗೆ ಜಾರುತ್ತದೆ. ಚಳಿಗಾಲದಲ್ಲಿ ಕೆನಡಾ ಹೊಸ ಅನುಭವವನ್ನು ನೀಡುತ್ತದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

8 countries in the world where the sun does not set Here there is sunlight 24 hours a day sweeden
Image Credit to Original Source

ಸ್ವೀಡನ್ (ಯೂರೋಪ್ ) :
ಯುರೋಪಿನ ಸ್ಕ್ಯಾಂಡಿನೇವಿಯಾ ಜಂಬೂದ್ವೀಪದ ಪೂರ್ವ ಭಾಗದಲ್ಲಿರುವ ಒಂದು ನಾರ್ಡಿಕ್‌ ದೇಶ. ಉತ್ತರದಲ್ಲಿ ನಾರ್ವೆ ಮತ್ತು ಫಿನ್ಲಾಂಡ್‌ ಹಾಗೂ ದಕ್ಷಿಣದಲ್ಲಿ ಡೆನ್ಮಾಕ್‌ ಹೊಂದಿದೆ. ಐರೋಪ್ಯ ಒಕ್ಕೂಟದ ಮೂರನೇ ಅತೀ ದೊಡ್ಡ ದೇಶ ಅನ್ನೋ ಖ್ಯಾತಿಗೆ ಪಾತ್ರವಾಗಿದೆ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಶ್ರೀಮಂತಿಕೆಯನ್ನು ಉಳಿಸಿಕೊಂಡಿರುವ ಸ್ವೀಡನ್ ನಲ್ಲಿ ಮೇ ಆರಂಭದಿಂದ ಅಗಸ್ಟ್‌ ಅಂತ್ಯದ ವರೆಗೆ ಮಧ್ಯರಾತ್ರಿ ಸೂರ್ಯ ಅಸ್ತಂಗತನಾಗುತ್ತಾನೆ. ಆದರೆ ವರ್ಷದ ಆರು ತಿಂಗಳ ಕಾಲ ದಿನದ 24  ಗಂಟೆಗಳ ಕಾಲ ಬಿಸಿಲಿನ ಅವಧಿ ಇರುತ್ತೆ. ಸಾಹಸ, ಚಾರಣ ಸೇರಿದಂತೆ ಪ್ರವಾಸಿಗರ ಪಾಲಿನ ಹಾಟ್‌ ಸ್ಪಾಟ್‌ ಎನಿಸಿಕೊಂಡಿದೆ ಸ್ವೀಡನ್.‌

8 countries in the world where the sun does not set Here there is sunlight 24 hours a day finland
Image Credit To Original Source

ಫಿನ್ಲ್ಯಾಂಡ್ (ಉತ್ತರ ಯುರೋಪ್‌ ):
ಉತ್ತರ ಯುರೋಪ್‌ನಲ್ಲಿರುವ ಫಿನ್‌ಲ್ಯಾಂಡ್‌ ದೇಶ ಸರೋವರದಿಂದಲೇ ಸುತ್ತುವರಿದಿರುವ ದ್ವೀಪ. ಫಿನ್ಲ್ಯಾಂಡ್‌ ದೇಶದಲ್ಲಿ ವರ್ಷದಲ್ಲಿ 73 ದಿನಗಳ ಬಿರು ಬೇಸಿಗೆ ಇರುತ್ತದೆ. ಬಿರು ಬೇಸಿಗೆಯ ಅವಧಿಯಲ್ಲಿ ಸೂರ್ಯ ಅಸ್ತಂಗತನಾಗುವುದೇ ಇಲ್ಲ. ಆದರೆ ಚಳಿಗಾಲದ ಅವಧಿಯಲ್ಲಿ ಸೂರ್ಯೋದಯ ಆಗುವುದಿಲ್ಲ. ಈ ವೇಳೆಯಲ್ಲಿ ಇಲ್ಲಿನ ಜನರು ಅತೀ ಹೆಚ್ಚು ಅವಧಿಯಲ್ಲಿ ನಿದ್ರೆಯಲ್ಲಿರುತ್ತಾರೆ. ಈ ದೇಶದಲ್ಲಿನ ವೈಶಿಷ್ಟ್ಯತೆಯನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಬೇಸಿಗೆ ಹಾಗೂ ಚಳಿಗಾಲದ ಅವಧಿಯಲ್ಲಿ ಪ್ರವಾಸಿಗರ ದಂಡೇ ಆಗಮಿಸುತ್ತಿದೆ.

8 countries in the world where the sun does not set Here there is sunlight 24 hours a day finland, Sweden, Norway, Canada, Alaska, Iceland, nunavut

 

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular