ಭಾನುವಾರ, ಏಪ್ರಿಲ್ 27, 2025
Homekarnatakaಬಿಜೆಪಿ ರಾಜ್ಯಾಧ್ಯಕ್ಷರಾಗ್ತಾರಾ ಬಿ ವೈ ವಿಜಯೇಂದ್ರ : ಪುತ್ರನ ಅಧಿಕಾರಕ್ಕಾಗಿ ಬಿಎಸ್ ಯಡಿಯೂರಪ್ಪ ಮಾಸ್ಟರ್ ಪ್ಲ್ಯಾನ್

ಬಿಜೆಪಿ ರಾಜ್ಯಾಧ್ಯಕ್ಷರಾಗ್ತಾರಾ ಬಿ ವೈ ವಿಜಯೇಂದ್ರ : ಪುತ್ರನ ಅಧಿಕಾರಕ್ಕಾಗಿ ಬಿಎಸ್ ಯಡಿಯೂರಪ್ಪ ಮಾಸ್ಟರ್ ಪ್ಲ್ಯಾನ್

- Advertisement -

ಬೆಂಗಳೂರು : ರಾಜ್ಯ ಬಿಜೆಪಿ ಯಲ್ಲಿ ನಾಯಕತ್ವಕ್ಕಾಗಿ ಸರ್ಕಸ್ ನಡೆಯುತ್ತಲೇ ಇದೆ. ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಹೀಗೆ ಎರಡೂ ಸ್ಥಾನವನ್ನು ತುಂಬಬೇಕಿರುವ ಬಿಜೆಪಿ ಲೋಕಸಭಾ ಚುನಾವಣೆ (Lok Sabha Election) ಸಮೀಪಿಸುತ್ತಿದ್ದರೂ ಇನ್ನೂ ಲೆಕ್ಕಾಚಾರದಲ್ಲೇ ಇದೆ. ಈ ಮಧ್ಯೆ ಪಕ್ಷವನ್ನು ಕಟ್ಟಿ ಬೆಳೆಸಿದ ಬಿಎಸ್ ಯಡಿಯೂರಪ್ಪ (B. S. Yediyurappa) ಮಾತ್ರ ತಮ್ಮ ನಾಯಕತ್ವ ಮುಂದುವರೆಸಲು ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರೆ.

ಬಿಜೆಪಿಯ ರಾಜಾಹುಲಿ ಎಂದೇ ಕರೆಸಿಕೊಂಡ ಬಿಎಸ್ವೈ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದರೂ ಎಂಬುದರಲ್ಲಿ ಯಾವುದೇ ಸಂಶಯ ಸ್ವತಃ ಬಿಜೆಪಿ ನಾಯಕರಿಗೂ ಇಲ್ಲ. ಆದರೆ ಅದ್ಯಾವುದೋ ಗಳಿಗೆಯಲ್ಲಿ ಬಿಜೆಪಿ ನಾಯಕರು ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಕ್ಕಿಳಿಸುವ ನಿರ್ಧಾರ ಮಾಡಿದ್ದರು. ಆದರೆ ಆ ನಿರ್ಧಾರ ಬಿಜೆಪಿಗೆ ಅತ್ಯಂತ ಹೆಚ್ಚಿನ ಬೆಲೆ ತೆರುವಂತೆ ಮಾಡಿತು ಅನ್ನೋದಕ್ಕೆ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಸಾಕ್ಷಿ.

BJP State President B Y Vijayendra: BS Yeddyurappa's Master Plan for Son's Power
Image Credit To Original Source

ಆದರೆ ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನುವಂತೆ ಬಿಎಸ್ವೈ ಅಧಿಕೃತವಾಗಿ ಸ್ಥಾನ ಕಳೆದುಕೊಂಡಿದ್ದರೂ ಬಿಜೆಪಿ ಮೇಲಿನ ಹಿಡಿತ ಬಿಟ್ಟಿಲ್ಲ. ಶತಾಯ ಗತಾಯ ಮಗನನ್ನು ರಾಜ್ಯಾಧ್ಯಕ್ಷ ಪಟ್ಟಕ್ಕೆ ಏರಿಸಲೇಬೇಕೆಂದು ಪಣ ತೊಟ್ಟಿರೋ ಬಿಎಸ್ವೈ ಇದಕ್ಕಾಗಿ ನಾಯಕತ್ವದ ಆಯ್ಕೆ ವಿಳಂಬವಾಗ್ತಿರೋದನ್ನೇ ಲಾಭವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಬಿಎಸ್ವೈ, ತಮ್ಮನ್ನು ಅಧಿಕಾರದಿಂದ ಇಳಿಸಿ, ಪಕ್ಷ ಚುನಾವಣೆಯಲ್ಲಿ ಸೋತ ಬಳಿಕವೂ ಪಕ್ಷದ ಮುಖಂಡರ ಜೊತೆ ಸಕ್ರಿಯ ಸಂಪರ್ಕದಲ್ಲೇ ಮುಂದುವರೆದಿದ್ದಾರೆ.

BJP State President B Y Vijayendra: BS Yeddyurappa's Master Plan for Son's Power
Image Credit To Original Source

ಚುನಾವಣೆಯಲ್ಲಿ ಸೋತವರು ಮತ್ತು ಪಕ್ಷದಲ್ಲಿ ನಿಷ್ಠೆ ಹೊಂದಿದವರ ಜೊತೆ ಸಂಪರ್ಕ ನಡೆಸ್ತಿರೋ ಬಿಎಸ್ವೈ, ನಿಮಗೆ ಆಗಿರುವ ಅನ್ಯಾಯ ಸರಿಪಡಿಸೋದ್ರ ಜೊತೆಗೆ ನಿಮ್ಮ ಜೊತೆ ನಾವಿದ್ದೇವೆ ಎಂಬ ಅಭಯವನ್ನು ನೀಡಿದ್ದಾರಂತೆ. ಆ ಮೂಲಕ ಪರೋಕ್ಷವಾಗಿ ಪುತ್ರನ ನಾಯಕತ್ವಕ್ಕೆ ಸಹಕಾರ ಕೋರುತ್ತಿರೋ ಬಿಎಸ್ವೈ, ಒಂದೊಮ್ಮೆ ವರಿಷ್ಠರು ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯ ಕೋರಿದಲ್ಲಿ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ್ (B. Y. Vijayendra) ಪರ ನಾಯಕರು ಮತ ನೀಡುವಂತೆ ಅಥವಾ ಒಲವು ತೋರುವಂತೆ ಎಲ್ಲರನ್ನೂ ಪ್ರಭಾವಿಸಿದ್ದಾರಂತೆ. ಇದನ್ನೂ ಓದಿ : ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು

ಇನ್ನೂ ಬಿಜೆಪಿಯಲ್ಲಿ ಆಂತರಿಕವಾಗಿಯೂ ಬಿಎಸ್ವೈ ಹಾಗೂ ಅವರ ಪುತ್ರನ ಬಗ್ಗೆ ನಾಯಕರಿಗೆ ಸಾಪ್ಟ್ ಕಾರ್ನರ್ ಇದ್ದು, ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಈ ಹಿಂದೆಯೇ ಬಿಎಸ್ವೈ ಪುತ್ರನನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೇರಿಸಬೇಕೆಂದು ಆಗ್ರಹಿಸಿದ್ದರು. ಇದರ ಚೆನ್ನಲ್ಲೇ ಈಗ,ಮಾಜಿ ಸಚಿವ ರಾಜುಗೌಡ ರಿಂದ ಬಿಎಸ್ವೈ ಪರ ಬ್ಯಾಟಿಂಗ ನಡೆದಿದ್ದು, ಪಕ್ಷ ಸೋತವರನ್ನು ನಡೆಸಿಕೊಳ್ತಿರೋ ಬಗ್ಗೆ ಅಸಮಧಾನ ವ್ಯಕ್ತ ಪಡಿಸಿದ್ದಾರೆ.‌ಮಾತ್ರವಲ್ಲದೇ ಬಿಎಸ್ವೈ ರನ್ನು ಕೂಡ ನೆನಪಿಸಿಕೊಂಡಿದ್ದು , ಆದಷ್ಟು ಬೇಗ ಸೂಕ್ತರಿಗೆ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ : ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಅನರ್ಹ : ಚುನಾವಣೆಗೆ ಸ್ಪರ್ಧೆ ಮಾಡುವಂತಿಲ್ಲವೇ ?

ಇನ್ನು ಸ್ವತಃ ತಮ್ಮ ಪುತ್ರ ಬಿ.ವೈ.ವಿಜಯೇಂದ್ರಗಾಗಿ ಕಣಕ್ಕಿಳಿದಿರುವ ಬಿಎಸ್ವೈ, ಈಗಾಗಲೇ ನೇರವಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಪುತ್ರನನ್ನು ಪರಿಗಣಿಸುವಂತೆ ಮನವಿ ಮಾಡಿದ್ದಾರಂತೆ. ಬಹುತೇಕ ಒಳಜಗಳ,ಅಸಮಧಾನ ಹಾಗೂ ತೀವ್ರ ಒತ್ತಡಗಳು ವ್ಯಕ್ತವಾಗಿರೋ ಹಿನ್ನೆಲೆಯಲ್ಲಿ ಸದ್ಯ ಎರಡೂ ವಿವಾದಿತ ಹಾಗೂ ಬಹು ಆಕಾಂಕ್ಷಿತ ಹುದ್ದೆಗಳ ನೇಮಕವನ್ನು ಬಿಜೆಪಿ ಕೈಬಿಟ್ಟಿದೆ ಎನ್ನಲಾಗ್ತಿದೆ. ಆದರೆ ಬಿಎಸ್ವೈ ಮಾತ್ರ ಯಾವಾಗಲಾದರೂ ನೇಮಿಸಿ ಆದರೆ ನನ್ನ ಸಾಧನೆ , ನನ್ನ ಪರಿಶ್ರಮವನ್ನು ಪರಿಗಣಿಸಿ ನನ್ನ ಮಗನಿಗೆ ಸೂಕ್ತ ಸ್ಥಾನಮಾನ ನೀಡಿ ಎಂದು ಒತ್ತಾಯಿಸಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ರಾಜ್ಯದ್ಯಕ್ಷ ಹಾಗೂವಿರೋಧ ಪಕ್ಷದ ನಾಯಕ ಸ್ಥಾನದ ನೇಮಕದಿಂದ ಸದ್ಯ ಬಿಜೆಪಿ ನಾಯಕರಿಗೆ ಲಾಭಕ್ಕಿಂತ ನಷ್ಟವೇ ಎಂದು ಅಂದಾಜಿಸಲಾಗುತ್ತಿದೆ. ಲೋಕಸಭೆ ಚುನಾವಣೆ ಎದುರಿನಲ್ಲಿ ಈ ನೇಮಕಾಂತಿಯಿನಮರ ಮುನಿಸು ಹಾಗೂ ಅಸಮಧಾನ ಹೆಚ್ಚಾಗೋ ಸಾಧ್ಯತೆ ಇರೋದರಿಂರ ಬಿಜೆಲಿ ತಟಸ್ಥವಾಗಿದೆ ಎನ್ನಲಾಗ್ತಿದೆ.

BJP State President B Y Vijayendra: BS Yeddyurappa’s Master Plan for Son’s Power

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular