ಬ್ರಹ್ಮಾವರ : ಶ್ರೀ ಕೃಷ್ಣ ಜನ್ಮಾಷ್ಟಮಿಯ (Krishna Janmashtami) ಪ್ರಯುಕ್ತ ಜಿಲ್ಲೆಯಾದ್ಯಂತ ಮುದ್ದು ಕೃಷ್ಣ ಹಾಗೂ ಮುದ್ದು ರಾಧೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅದರಂತೆ ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ (Shree Vidyesh Vidya Manya National English Medium School) ಹೇರಾಡಿ – ಬಾರಕೂರು (Heradi-Barakuru) ಇದರ ಸಂಯೋಜನೆಯಲ್ಲಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಬಾರಕೂರಿನ ಆಸು ಪಾಸಿನ 12 ಅಂಗನವಾಡಿ ವಿದ್ಯಾರ್ಥಿಗಳಿಗೋಸ್ಕರ (Muddu Krishna Competition) ಮುದ್ದು ಕೃಷ್ಣ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಮಕ್ಕಳನ್ನು ಹಾಗೆ ನೋಡುವುದೇ ಚಂದ, ಅದರಲ್ಲೂ ಕೃಷ್ಣ, ರಾಧೆ ವೇಷಭೂಷಣದಲ್ಲಿ ನೋಡುವುದಕ್ಕೇ ಎರಡು ಕಣ್ಣು ಸಾಲದು. ಇಲ್ಲಿ ಕೇವಲ ಮುದ್ದು ಕೃಷ್ಣ ಸ್ಪರ್ಧೆಯನ್ನು ಏರ್ಪಡಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪುಟ್ಟ ಮಕ್ಕಳು ಭಾಗಿಯಾಗಿದ್ದರು.
ಮುದ್ದು ಕೃಷ್ಣ ಸ್ಪರ್ಧೆಯ (Muddu Krishna Contest), ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್. ಶೇಡಿಕೊಡ್ಲು ವಿಠ್ಠಲ್ ಶೆಟ್ಟಿ , ಉಪಾಧ್ಯಕ್ಷರು, ಬಾರಕೂರು ವಿದ್ಯಾಭಿವರ್ದಿನಿ ಸಂಘ ( ರಿ ) ಬಾರಕೂರು ಇವರು ವಹಿಸಿದ್ದರು. Ln. ಶುಭಕರ್ ಶೆಟ್ಟಿ ಲಯನ್ಸ್ ಕ್ಲಬ್ ಬ್ರಹ್ಮಾವರ ಅವರು ದೀಪ ಬೆಳಗಿಸುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯನ್ನು ಶ್ರೀ ಬಿ. ಶಾಂತರಾಮ್ ಶೆಟ್ಟಿ, ಅಧ್ಯಕ್ಷರು ಬಾರಕೂರು ವಿದ್ಯಾಭಿವರ್ದಿನಿ ಸಂಘ (ರಿ )ಬಾರಕೂರು, ಶ್ರೀ ಕೃಷ್ಣ ಹೆಬ್ಬಾರ್, ಶ್ರೀ ಶಂಕರ ಶೆಟ್ಟಿ, ರೋ. ಸೀತಾರಾಮ್, ಎಸ್. ಶ್ರೀ ರಾಜ ಗೋಪಾಲ ನಂಬಿಯಾರ್, Ln. ಸಂತೋಷ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಲಿಖಿತಾ ಕೊಠಾರಿ ರವರು ಉಪಸ್ಥಿತರಿದ್ದರು.

ಈ ಮುದ್ದು ಕೃಷ್ಣ ಸ್ಪರ್ಧೆಗೆ ಸಹಕರಿಸಿದ ದಾನಿಗಳಿಗೆ ಮತ್ತು ಆಸು ಪಾಸಿನ ಅಂಗನವಾಡಿ ಶಾಲೆಯ ಶಿಕ್ಷಕಿಯರನ್ನು ಗುರುತಿಸಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಶಿಕ್ಷಕಿಯರಾದ ಶ್ರೀಮತಿ ಪವಿತ್ರ ಮತ್ತು ಶ್ರೀಮತಿ ರೇಣುಕಾ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಬ್ರಿಜಿತ ಗೋನ್ಸಾಲ್ವಿಸ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಜ್ಯೋತಿರವರು ವಂದಿಸಿದರು. ಹಾಗೆಯೇ ಚಿಣ್ಣರ ಈ ಕಾರ್ಯಕ್ರಮಕ್ಕೆ ಶಿಕ್ಷಕ -ಶಿಕ್ಷೇತರರು ಸಹಕರಿಸಿದರು.
ಇದನ್ನೂ ಓದಿ : ಕೆಸಿಇಟಿ 2023ರ ಎರಡನೇ ಸುತ್ತಿನ ಕೌನ್ಸೆಲಿಂಗ್ ಫಲಿತಾಂಶ ಪ್ರಕಟ : ಇಲ್ಲಿದೆ ಪ್ರಮುಖ ಮಾಹಿತಿ

ಮುದ್ದು ಕೃಷ್ಣ ಸ್ಪರ್ಧೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನೇಷನಲ್ ಜೂನಿಯರ್ ಕಾಲೇಜು ಬಾರಕೂರಿನ ಅಮೃತ ಮಹೋತ್ಸವದ ಅಧ್ಯಕ್ಷರಾದ ಶ್ರೀ ರಾಜಾರಾಮ್ ಶೆಟ್ಟಿ ರವರು ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ಬಿ. ಶಾಂತರಾಮ್ ಶೆಟ್ಟಿ, ಅಧ್ಯಕ್ಷರು ಬಾರಕೂರು ವಿದ್ಯಾಭಿ ವರ್ದಿನಿ ಸಂಘ (ರಿ ) ಬಾರಕೂರು, ಶ್ರೀ ರಾಜಗೋಪಾಲ್ ನಂಬಿಯಾರ್, ತೀರ್ಪುಗಾರ ರಾದ ಶ್ರೀಮತಿ ವನಿತಾ ಉಪಾಧ್ಯ, ಶ್ರೀಮತಿ ಭಾಗೀರಥಿ, ಶ್ರೀಮತಿ ಸುಜಾತಾ ಅಂದ್ರದೆ, ಶ್ರೀಮತಿ ಲಿಖಿತಾ ಕೊಠಾರಿ ರವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಗೆ ವರ್ಷದಲ್ಲಿ 3 ಬಾರಿ ಪರೀಕ್ಷೆ : ಸಚಿವ ಮಧು ಬಂಗಾರಪ್ಪ ಮಹತ್ವದ ಘೋಷಣೆ
ಈ ಕಾರ್ಯಕ್ರಮವನ್ನು ಶ್ರೀಮತಿ ಸುಜಾತಾ ಶೆಟ್ಟಿ ಮತ್ತು ಶ್ರೀಮತಿ ಮಧುಶ್ರೀ ರವರು ನಿರೂಪಿಸಿ, ಶಿಕ್ಷಕಿಯರಾದ ಶ್ರೀಮತಿ ಸುಜಾತಾ ಎಲ್. ರೈ ರವರು ಸ್ವಾಗತಿಸಿ, ಶ್ರೀಮತಿ ಅಪರ್ಣ ವಂದಿಸಿದರು. ಮುದ್ದು ಕೃಷ್ಣ ಸ್ಪರ್ಧೆಯನ್ನು ಶಿಕ್ಷಕಿಯರಾದ ಶ್ರೀಮತಿ ಸಬಿತಾ ಮಾಸ್ಕರೇನಸ್ ಮತ್ತು ಶ್ರೀಮತಿ ನಾಗರತ್ನ ಹೆಬ್ಬಾರ್, ಶಿಕ್ಷಕ ಶ್ರೀ ಪೂರ್ಣೇಶ್ ರವರು ನೆಡೆಸಿ ಕೊಟ್ಟರು. ಈ ಕಾರ್ಯಕ್ರಮ ವನ್ನು ಶಿಕ್ಷಕಿಯರಾದ ಶ್ರೀಮತಿ ಚಂದ್ರಕಲಾ, ಶ್ರೀಮತಿ ಶುಭ ರಾವ್, ಶ್ರೀಮತಿ ಕುಸುಮ ರವರು ಸಂಯೋಜನೆ ಮಾಡಿದರು, ಶಾಲಾ ಶಿಕ್ಷಕ – ಶಿಕ್ಷಕೇತರರು ಸಹಕರಿಸಿದರು.
Shree Krishna Janmashtami : Muddu Krishna Competition at Shree Vidyesh Vidya Manya National English Medium School