ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಂದ ಗೃಹಲಕ್ಷ್ಮೀ ಯೋಜನೆಯಡಿ (Gruhalakshmi Scheme) ಈಗಾಗಲೇ ಗೃಹಿಣಿಯರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇನ್ನು ಕೆಲವರು ಈ ಯೋಜನೆಯಡಿಯಲ್ಲಿ ನೋಂದಾಯಿತರಾಗಿ ಇರುವುದಿಲ್ಲ. ಹೀಗಾಗಿ ಫಲಾನುಭವಿಗಳ ಖಾತೆಗೆ 2000 ರೂ. ಜಮೆ ಮಾಡುವ ಪ್ರಕ್ರಿಯೆಯಲ್ಲಿ ಅಡಚಣೆ ಆಗದಿರಲೆಂದು, ನೋಂದಾಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಹಾಗೆಯೇ ಶೀಘ್ರದಲ್ಲೇ ಈ ಯೋಜನೆಯಡಿ ನೋಂದಾಣಿ ಪುನರಾಂಭಗೊಳ್ಳಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಟ್ವಿಟರ್‌ನಲ್ಲಿ ತಿಳಿಸಿದೆ.
ಕಳೆದ ವಾರ ಆಗಸ್ಟ್ 30 ರಂದು ಮೈಸೂರನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಗೃಹ ಲಕ್ಷ್ಮಿ ಯೋಜನೆಗೆ (Gruha Lakshmi Yojana) ಕಾಂಗ್ರೆಸ್ ಮುಖಂಡರು ಸೇರಿ ಚಾಲನೆ ನೀಡಿದ್ದರು. ಯೋಜನೆಯ ಪ್ರಕಾರ, ರಾಜ್ಯದಲ್ಲಿ ವಾಸಿಸುವ ಕುಟುಂಬದ ಮೊದಲ ಮಹಿಳಾ ಸದಸ್ಯೆಯ ಬ್ಯಾಂಕ್ ಖಾತೆಗೆ (Bank Account) ಸರಕಾರದಿಂದ ಪ್ರತಿ ತಿಂಗಳಿಗೆ 2,000 ರೂ. ಜಮೆ ಮಾಡಲಾಗುತ್ತದೆ. ಸದ್ಯ ಈ ಯೋಜನೆಯಲ್ಲಿ ಮಹತ್ತರ ಬದಲಾವಣೆಯನ್ನು ತಂದಿದ್ದಾರೆ. ರೇಷನ್ ಕಾರ್ಡ್‌ನಲ್ಲಿ ಮೊದಲ ಸದಸ್ಯೆ ಮನೆಯ ಯಜಮಾನಿ ಆಗಿದ್ದರೆ ಮಾತ್ರ ಈ ಯೋಜನೆಯ ಪ್ರಯೋಜನೆಯನ್ನು ಪಡೆಯುತ್ತಾರೆ. ಅದರ ಬದಲು ರೇಷನ್ ಕಾರ್ಡ್‌ನಲ್ಲಿ ಮೊದಲ ಹೆಸರು ಮನೆ ಯಜಮಾನದ್ದು ಇದ್ದರೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಗೃಹಲಕ್ಷ್ಮೀ ಯೋಜನೆಯಡಿ ಹಣ ಬಾರದೇ ಇದ್ದಲ್ಲಿ ಹೀಗೆ ಮಾಡಿ
ಗೃಹಲಕ್ಷ್ಮೀ ಯೋಜನೆಯ ಹಣ ಬಂದಿರೋದಿಕ್ಕೆ ಮಹಿಳೆಯರು ಖುಷಿ ಆಗಿದ್ದರೇ, ಲಕ್ಷಾಂತರ ಮಹಿಳೆಯರು ಹಣ ಬಾರದೇ ಬೇಸರದಲ್ಲಿದ್ದಾರೆ. ಹೀಗಾಗಿ ಮಹಿಳೆಯರ ಅರ್ಜಿಯ ಸ್ಟೇಟಸ್ ಪರಿಶೀಲಿಸಲು ಸಹಾಯವಾಣಿ ನಂಬರ್ ನೀಡಲಾಗಿದೆ. 8147500500 ಈ ನಂಬರ್ ಗೆ ನಿಮ್ಮ ರಜಿಸ್ಟರ್ಡ್ ಮೊಬೈಲ್ ನಂಬರ್ ನಿಂದ ಒಂದು ಮೆಸೆಜ್ ಕಳುಹಿಸಿ. 8147500500 ನಂಬರ್ ಗೆ ನಿಮ್ಮ ರೇಷನ್ ಕಾರ್ಡ್ ನಂಬರ್ ನ್ನು ಮೆಸೆಜ್ ಮಾಡಿ. ಹೀಗೆ ಮೆಸೆಜ್ ಮಾಡಿದ ತಕ್ಷಣ ನಿಮ್ಮ ಪಡಿತರ ಚೀಟಿ ಸಂಖ್ಯೆ ಆಧರಿಸಿ ನಿಮ್ಮ ಗೃಹಲಕ್ಷ್ಮೀ ಯೋಜನೆಯ ಭವಿಷ್ಯ ಏನಾಗಿದೆ ಎಂಬ ಮಾಹಿತಿಯ ಸಂದೇಶ ಬರಲಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಹಣ ಇನ್ನೂ ಬಂದಿಲ್ವಾ ? ಸರಕಾರದ ಈ ನಂಬರ್‌ಗೆ ಮೆಸೇಜ್ ಮಾಡಿದ್ರೆ ಜಮೆ ಆಗುತ್ತೆ ಹಣ
ಅಲ್ಲದೇ ನಿಮ್ಮ ಗೃಹಲಕ್ಷ್ಮೀ ಯೋಜನೆಯ ಅರ್ಜಿಯ ಸ್ಥಿತಿ ಏನಾಗಿದೆ ? ಯಾವುದಾದರೂ ಗೊಂದಲವಿದ್ಯಾ ? ಅಥವಾ ನೀವು ಕೊಟ್ಟ ಮಾಹಿತಿಗಳಲ್ಲಿ ಏನಾದ್ರು ತಪ್ಪುಗಳಿದ್ಯಾ ಎಂಬುದರ ಬಗ್ಗೆಯೂ ಈ ನಂಬರ್ ಮೆಸೆಜ್ ನಲ್ಲಿ ಮಾಹಿತಿ ಸಿಗಲಿದೆ. ನಿಮ್ಮ ಅರ್ಜಿ ಅಸ್ವೀಕೃತವಾಗಿದ್ದರೇ, ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆಯೂ ಮಾಹಿತಿ ಬರಲಿದೆ.
ಇದನ್ನೂ ಓದಿ : ಶ್ರೀ ಕೃಷ್ಣ ಜನ್ಮಾಷ್ಟಮಿ : ಶ್ರೀ ವಿಧ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುದ್ದು ಕೃಷ್ಣ ಸ್ಪರ್ಧೆ
ರಾಜ್ಯದಲ್ಲಿ ಒಟ್ಟು 1.28 ಫಲಾನುವಿಗಳಿದ್ದಾರೆ ಎಂದು ಅಂದಾಜಿಸಲಾಗಿದ್ದು, ಈ ಪೈಕಿ 1.11 ಕೋಟಿ ಮಹಿಳೆಯರು ಮಾತ್ರ ನೋಂದಣಿಯನ್ನು ಮಾಡಿಸಿ ಕೊಂಡಿದ್ದಾರೆ. ಹೀಗಾಗಿ ಸರ್ಕಾರ ಗೃಹಲಕ್ಷ್ಮೀ ನೋಂದಣಿಗೆ ಯಾವುದೇ ಡೆಡ್ ಲೈನ್ ನೀಡಿಲ್ಲ. ಮಹಿಳೆಯರು ಅಗತ್ಯ ದಾಖಲೆಗಳೊಂದಿಗೆ ಯಾವಾಗ ಬೇಕಾದರೂ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇನ್ನೊಂದೆಡೆ ಹಲವರು ಮನೆ ಯಜಮಾನಿ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಪಡಿತರ ಚೀಟಿಯಲ್ಲಿ ಮನೆ ಯಜಮಾನಿ ಹೆಸರನ್ನು ತಿದ್ದುಪಡಿ ತರಲು ಸಪ್ಟೆಂಬರ್ 1 ರಿಂದ 10 ರವರೆಗೆ ಅವಕಾಶ ನೀಡಲಾಗಿತ್ತು. ಈಗ ಅವಧಿಯನ್ನು ಸಪ್ಟೆಂಬರ್ 14 ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಅವಧಿ ಮುಗಿಯುವ ಮುನ್ನ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾಗಿದೆ.
Gruha Lakshmi Yojana: The government has temporarily suspended the registration of Gruha Lakshmi Yojana