ಸೋಮವಾರ, ಏಪ್ರಿಲ್ 28, 2025
HomehoroscopeSun Transit in Virgo : ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಈ 5 ರಾಶಿಯವರಿಗೆ...

Sun Transit in Virgo : ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಈ 5 ರಾಶಿಯವರಿಗೆ ದಿಢೀರ್ ಧನಲಾಭ..!

- Advertisement -

Sun Transit in Virgo : ನವಗ್ರಹಗಳಲ್ಲಿ ಸೂರ್ಯನನ್ನು ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸೂರ್ಯನ ಸಂಚಾರ ಹೆಚ್ಚು ಪ್ರಾಮುಖ್ಯತೆ ಯನ್ನು ಪಡೆದುಕೊಳ್ಳುತ್ತದೆ. ಇದೀಗ ಸೂರ್ಯ (Sun)ತನ್ನ ಸ್ವಂತ ರಾಶಿಯಾದ ಸಿಂಹರಾಶಿಯಿಂದ ಕನ್ಯಾರಾಶಿಗೆ (Virgo)ಸಂಚಾರ ಮಾಡಲಿದ್ದಾರೆ. ಇದೇ ಸೆಪ್ಟೆಂಬರ್ 17ನೇ 2023 ಭಾನುವಾರ ಬೆಳಗ್ಗೆ 7:11ಕ್ಕೆ ಸೂರ್ಯನ ಸಂಚಾರವಾಗಿದೆ.

ಇನ್ನು ಕನ್ಯಾರಾಶಿಗೆ ಸೂರ್ಯನ ಪ್ರವೇಶವನ್ನು ಅಶ್ವಿನಿ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ಬೆಳವಣಿಗೆ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಕೆಲವು ರಾಶಿಯವರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಸೂರ್ಯನ ಸ್ಥಾನ ಬದಲಾವಣೆ ಮಾಡುವುದರಿಂದ ಮುಂದಿನ ಐದು ತಿಂಗಳ ಕಾಲ ದಿಢೀರ್‌ ಆರ್ಥಕ ಲಾಭವಾಗಲಿದೆ.

ಸೂರ್ಯ ಕನ್ಯಾರಾಶಿಗೆ ಸಂಚಾರ ಮಾಡುವುದರಿಂದ ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮವುಂಟಾಗಲಿದೆ. ಆದರೆ ಸೂರ್ಯನ ಸಂಚಾರದಿಂದ ಹೆಚ್ಚು ಲಾಭವನ್ನು ಪಡೆಯುವ ರಾಶಿಗಳು ಯಾವುವುದು ಎಂದು ನೋಡುವುದಾದ್ರೆ.

ಇದನ್ನೂ ಓದಿ : ಗಣೇಶ ಚತುರ್ಥಿಯಂದು ಗಣೇಶ ವಿಗ್ರಹ ಕೂರಿಸಲು ಅರ್ಜಿ ಸಲ್ಲಿಕೆ ಕಡ್ಡಾಯ : ಬಿಬಿಎಂಪಿ ಹೊಸ ರೂಲ್ಸ್‌

Sun Transit in Virgo in 17th september 2023 5 zodiax signs are Lucky in Kannada Leo Gemini
Image Credit : Hindhustan Times

ಮಿಥುನ ರಾಶಿ (Gemini)
ಸೂರ್ಯನು ನಾಲ್ಕನೇ ಮನೆಯಿಂದ ಸಾಗುತ್ತಾನೆ. ಈ ಸಮಯದಲ್ಲಿ ಸೂರ್ಯನ ಪ್ರಭಾವದಿಂದ ನೀವು ಸರ್ಕಾರಿ ಕ್ಷೇತ್ರಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಕುಟುಂಬ ಸದಸ್ಯರ ನಡುವೆ ಸಾಮರಸ್ಯ ಇರುತ್ತದೆ. ಆದರೆ ಈ ಅವಧಿಯಲ್ಲಿ ನೀವು ತಾಯಿಯ ಆರೋಗ್ಯದ ಬಗ್ಗೆ ಸ್ವಲ್ಪ ಜಾಗರೂಕರಾಗಿ ಇರಬೇಕು. ಉದ್ಯೋಗಿಗಳಿಗೆ ಕೆಲಸದ ಪರಿಸ್ಥಿತಿ ಸುಧಾರಿಸುತ್ತದೆ. ನಿಮ್ಮ ಆತ್ಮಸ್ಥೈರ್ಯ ಹೆಚ್ಚುತ್ತದೆ ಮತ್ತು ಬಡ್ತಿ ಅವಕಾಶ ಬರುತ್ತದೆ. ಈ ಅವಧಿಯಲ್ಲಿ ನೀವು ಹೊಸ ವಾಹನ ಅಥವಾ ಯಾವುದೇ ಆಸ್ತಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ, ನಿಮ್ಮ ಕನಸು ನನಸಾಗಬಹುದು.

Sun Transit in Virgo in 17th september 2023 5 zodiax signs are Lucky in Kannada Leo
Image Credit : Hindhustan Times

ಸಿಂಹರಾಶಿ (Leo)
ಸೂರ್ಯನು ಎರಡನೇ ಸ್ಥಾನದಿಂದ ಸಾಗುತ್ತಾನೆ. ಈ ಸಮಯದಲ್ಲಿ, ಸಿಂಹ ರಾಶಿಯವರು ತಮ್ಮ ಪೂರ್ವಜರಿಂದ ಆಸ್ತಿ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ನೀವು ಉತ್ತಮ ಲಾಭವನ್ನು ಪಡೆಯಬಹುದು. ಈ ಅವಧಿಯಲ್ಲಿ ನೀವು ಒಳ್ಳೆಯ ಕಾರ್ಯಗಳನ್ನು ಮಾಡುವುದರಿಂದ ನಿಮ್ಮ ಕುಟುಂಬದ ಸದಸ್ಯರ ಖ್ಯಾತಿ ಹೆಚ್ಚಾಗುತ್ತದೆ. ಈ ಅವಧಿಯಲ್ಲಿ ತಂದೆಯ ಸಲಹೆ ಪಡೆದು ಸ್ವಂತ ಉದ್ಯಮ ಆರಂಭಿಸಬಹುದು. ನೀವು ಮಾತಿನಲ್ಲಿ ಸಂಯಮವನ್ನು ರೂಢಿಸಿಕೊಳ್ಳಬೇಕು.

ಇದನ್ನೂ ಓದಿ :ರಕ್ಷಾ ಬಂಧನ : ಈ ಬಣ್ಣದ ರಾಖಿಯನ್ನು ತಪ್ಪಿಯೂ ನಿಮ್ಮ ಸಹೋದರನ ಕೈಗೆ ಕಟ್ಟಲೇ ಬೇಡಿ

Sun Transit in Virgo in 17th september 2023 5 zodiax signs are Lucky in Kannada Virgo
Image Credit : Hindusthan Times

ಕನ್ಯಾರಾಶಿ (Virgo)
ಸೂರ್ಯನ ಸಂಚಾರವು ಕನ್ಯಾ ರಾಶಿಯವರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಈ ಅವಧಿಯಲ್ಲಿ ನೀವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ನಿಮ್ಮ ವೈವಾಹಿಕ ಜೀವನ ಸುಖಮಯವಾಗಿ ಇರುತ್ತದೆ. ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ. ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಪಡೆಯುವ ಸಾಧ್ಯತೆಗಳು ಹೆಚ್ಚು. ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ನೀವು ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಪ್ರೀತಿಯ ಜೀವನದಲ್ಲಿ ನೀವು ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಸಿಂಗಲ್ಸ್ ವಿಶೇಷ ವ್ಯಕ್ತಿಗಳನ್ನು ಭೇಟಿ ಮಾಡಬಹುದು.

Sun Transit in Virgo in 17th september 2023 5 zodiax signs are Lucky in Kannada Scorpio
Image Credit : Hindusthan Times

ವೃಶ್ಚಿಕ ರಾಶಿ (Scorpio)
ಸೂರ್ಯನು ಈ ರಾಶಿಯಿಂದ ಲಾಭದಾಯಕ ಸ್ಥಾನದಲ್ಲಿ ಇರುವುದರಿಂದ ಉತ್ತಮ ಲಾಭವನ್ನು ಪಡೆಯುತ್ತಾನೆ. ವಿಶೇಷವಾಗಿ ವ್ಯಾಪಾರಿಗಳು ಮುಂಬರುವ ತಿಂಗಳುಗಳಲ್ಲಿ ಗಮನಾರ್ಹ ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಆದರೆ ನಿಮ್ಮ ಪ್ರೀತಿಯ ಜೀವನದಲ್ಲಿ ಬಹಳ ಜಾಗರೂಕರಾಗಿರಿ. ಈ ಅವಧಿಯಲ್ಲಿ ಭವಿಷ್ಯದ ಯೋಜನೆಗಳು ನಿಮಗೆ ಅನಿರೀಕ್ಷಿತ ಯಶಸ್ಸನ್ನು ತರುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನೀವು ನಷ್ಟವನ್ನು ಲಾಭವಾಗಿ ಪರಿವರ್ತಿಸಬಹುದು.

Sun Transit in Virgo in 17th september 2023 5 zodiax signs are Lucky in Kannada

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular