ಭಾನುವಾರ, ಏಪ್ರಿಲ್ 27, 2025
Homekarnatakaಸರಕಾರಿ ನೌಕರರಿಗೆ ದಸರಾ ಗಿಫ್ಟ್‌ : ಡಿಎ ಹೆಚ್ಚಿಸಿದ ರಾಜ್ಯ ಸರಕಾರ, ವೇತನದಲ್ಲಿ ಎಷ್ಟು ಏರಿಕೆ...

ಸರಕಾರಿ ನೌಕರರಿಗೆ ದಸರಾ ಗಿಫ್ಟ್‌ : ಡಿಎ ಹೆಚ್ಚಿಸಿದ ರಾಜ್ಯ ಸರಕಾರ, ವೇತನದಲ್ಲಿ ಎಷ್ಟು ಏರಿಕೆ ?

- Advertisement -

ಬೆಂಗಳೂರು : ರಾಜ್ಯ ಸರಕಾರಿ ನೌಕರರಿಗೆ ಸರಕಾರ ದಸರಾ ಹಬ್ಬದ (Dasara) ಹೊತ್ತಲ್ಲೇ ಭರ್ಜರಿ ಗಿಫ್ಟ್‌ ಕೊಟ್ಟಿದೆ. ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಶೇ. 35 ರಿಂದ ಶೇ. 38.75ಕ್ಕೆ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ನೌಕರರಿಗೆ ತುಟ್ಟಿಭತ್ಯೆ (Karnataka DA Hike) 01-07-2023 ಜಾರಿಗೆ ಬರಲಿದೆ. ಹಾಗಾದ್ರೆ ಸರಕಾರಿ ನೌಕರರ ವೇತನ ಎಷ್ಟು ಹೆಚ್ಚಳ ವಾಗಲಿದೆ ಅನ್ನೋ ಇಲ್ಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡಿರುವ ಕುರಿತು ಟ್ವೀಟ್‌ ಮಾಡಿದ್ದಾರೆ. ಸರಕಾರಿ ನೌಕರರ ತುಟ್ಟಿಭತ್ಯ 3.75 ರಷ್ಟು ಹೆಚ್ಚಳ ಮಾಡಲಾಗಿದೆ. ಯುಜಿಸಿ/ ಎಐಸಿಟಿ, ಐಸಿಎಆರ್‌ ವೇತನ ಶ್ರೇಣಿಗಳ ಬೋಧಕ ಸಿಬ್ಬಂದಿ ಹಾಗೂ ಎನ್‌ಜಿಪಿಸಿ ವೇತನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳ ತುಟ್ಟಿಭತ್ಯೆಯನ್ನು ಶೇ.4 ರಷ್ಟು ಹೆಚ್ಚಳ ಮಾಡಲಾಗಿದೆ.

ಇದರಿಂದಾಗಿ ತುಟ್ಟಿಭತ್ಯೆ ಶೇ.46ಕ್ಕೆ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಲಾಗಿದೆ. ತುಟ್ಟಿಭತ್ಯೆ ಏರಿಕೆಯಿಂದಾಗಿ ರಾಜ್ಯ ಸರಕಾರಕ್ಕೆ ವಾರ್ಷಿಕ 1,109 ಕೋಟಿ ರೂಪಾಯಿ ಹೆಚ್ಚುವರಿ ವೆಚ್ಚವಾಗಲಿದೆ. ರಾಜ್ಯ ಸರಕಾರಿ ನೌಕರರ ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಲಿದೆ ಎಂದು ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದಾರೆ.

ರಾಜ್ಯ ಸರಕಾರ ಮತ್ತು ಜಿಲ್ಲಾ ಪಂಚಾಯತ್‌ ಪೂರ್ಣವಧಿ ನೌಕರರಿಗೆ, ಕಾಲಿಕ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್‌ಚಾರ್ಜ್‌ ನೌಕರರಿಗೆ ಹಾಗೂ ಸರಕಾರದಿಂದ ಸಹಾಯಾನುಧಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿನ ಮತ್ತು ವಿಶ್ವವಿದ್ಯಾಲಯಗಳ ಕಾಲಿಕ ವೇತನ ಶ್ರೇಣಿಯಲ್ಲಿರುವ ಪೂರ್ಣಾವಧಿ ನೌಕರರಿಗೆ ಈ ಆದೇಶ ಅನ್ವಯವಾಗಲಿದೆ.

 ಸರಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳದಿಂದ ವೇತನದಲ್ಲಿ ಎಷ್ಟು ಹೆಚ್ಚಳ ?

ದಸರಾ ಹೊತ್ತಲ್ಲೇ ರಾಜ್ಯ ಸರಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳದಿಂದಾಗಿ ಸರಕಾರಿ ನೌಕರರ ವೇತನದಲ್ಲಿ ಬಾರೀ ಏರಿಕೆಯಾಗಲಿದೆ. ಹಾಗಾದ್ರೆ ಸರಕಾರಿ ನೌಕರರ ಮೂಲ ವೇತನ ಎಷ್ಟು ಹೆಚ್ಚಳವಾಗಲಿದೆ ಅನ್ನೋ ಮಾಹಿತಿ ಇಲ್ಲಿದೆ. 17,000 ರೂಪಾಯಿ ಮೂಲವೇತನವನ್ನು ಪಡೆಯುವ ನೌಕರರ ತುಟ್ಟಿಭತ್ಯೆ ಶೇ.3.75 ರಷ್ಟು ಏರಿಕೆಯಿಂದಾಗಿ ವೇತನದಲ್ಲಿ 638 ರೂಪಾಯಿ ಏರಿಕೆಯಾಗಲಿದೆ.Karnataka dasara gift state Government Employees increase in DA here is complete Dearness Allowance details

ಇನ್ನು ಗರಿಷ್ಟ ಮೂಲವೇತನ 150600 ಪಡೆಯುವ ನೌಕರರ ವೇತನದಲ್ಲಿ 5648 ರೂಪಾಯಿ ಏರಿಕೆಯಾಗಲಿದೆ. ಪ್ರಸ್ತುತ ತುಟ್ಟಿಭತ್ಯೆ 52,700 ರೂ. ಇದ್ದು, ತುಟ್ಟಿಭತ್ಯೆ ಏರಿಕೆಯಿಂದ 58,358 ರೂಪಾಯಿಗೆ ಏರಿಕೆಯಾಗಲಿದೆ. ಇನ್ನು ಜುಲೈ 1 ರಿಂದಲೇ ಆದೇಶ ಜಾರಿಯಾಗುವ ಹಿನ್ನೆಲೆ ಮೂರು ತಿಂಗಳ ಒಟ್ಟು 16943 ರೂಪಾಯಿ ತುಟ್ಟಿಭತ್ಯೆ ಖಾತೆಗೆ ಜಮೆ ಆಗಲಿದೆ.Karnataka dasara gift state Government Employees increase in DA here is complete Dearness Allowance details

ತುಟ್ಟಿಭತ್ಯೆ ಎಂದರೇನು ?

ತುಟ್ಟಿಭತ್ಯೆ ಎನ್ನುವುದು ಭಾರತ ದೇಶದಲ್ಲಿನ ಒಬ್ಬ ನೌಕರ ತನ್ನ ಸಂಬಳದ ಒಂದು ಭಾಗವೇ ತುಟ್ಟಿಭತ್ಯೆ. ಮೂಲ ವೇತನದ ಶೇಕಡಾವಾರು ಲೆಕ್ಕಾಚಾರ ದಲ್ಲಿ ತುಟ್ಟಿಭತ್ಯೆಯನ್ನು ಲೆಕ್ಕಾಚಾರ ಹಾಕಲಾಗುತ್ತದೆ. ತುಟ್ಟಿಭತ್ಯೆಯ ಜೊತೆಗೆ ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ವೇತನಕ್ಕೆ ಸೇರಿಸಿ ಒಟ್ಟು ವೇತನವನ್ನು ನೌಕರರು ಪಡೆಯುತ್ತಾರೆ.Karnataka dasara gift state Government Employees increase in DA here is complete Dearness Allowance details

ವರ್ಷದಲ್ಲಿ ಎರಡು ಬಾರಿ ಸರಕಾರ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುತ್ತದೆ. ವರ್ಷಂಪ್ರತಿ ದಸರಾ ಹೊತ್ತಲ್ಲೇ ಸರಕಾರಿ ನೌಕರರ ತುಟ್ಟಿಭತ್ಯೆಯನ್ನು ರಾಜ್ಯ ಸರಕಾರವೇ ಏರಿಸುತ್ತದೆ. ಅಲ್ಲದೇ ನೌಕರರ ವಾರ್ಷಿಕ ವೇತನ ಏರಿಕೆಯ ಹೊತ್ತಲ್ಲೂ ಕೂಡ ಸರಕಾರ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡುತ್ತದೆ.

Karnataka dasara gift state Government Employees increase in DA here is complete Dearness Allowance details

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular