ಭಾನುವಾರ, ಏಪ್ರಿಲ್ 27, 2025
HomebusinessCIBIL Score New Rules : ಸಿಬಿಲ್‌ ಸ್ಕೋರ್‌ ಹೊಸ ನಿಯಮ ಜಾರಿ, ಸಾಲಗಾರರಿಗೆ ಗುಡ್‌ನ್ಯೂಸ್‌...

CIBIL Score New Rules : ಸಿಬಿಲ್‌ ಸ್ಕೋರ್‌ ಹೊಸ ನಿಯಮ ಜಾರಿ, ಸಾಲಗಾರರಿಗೆ ಗುಡ್‌ನ್ಯೂಸ್‌ ಕೊಟ್ಟ RBI

- Advertisement -

ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಿಬಿಲ್‌ ಸ್ಕೋರ್‌ (CIBIL Score)ಗೆ ಸಂಬಂಧಿಸಿದಂತೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಕ್ರೆಡಿಟ್‌ ಸ್ಕೋರ್‌ಗೆ ಸಂಬಂಧಿಸಿದಂತೆ ಅನೇಕ ದೂರುಗಳು ಬಂದ ನಂತರದಲ್ಲಿ ಆರ್‌ಬಿಐ ಹಲವು ನಿರ್ದೇಶನಗಳನ್ನು ನೀಡಿದೆ. ಇದರಿಂದಾಗಿ ಗ್ರಾಹಕರಿಕೆ, ಸಾಲಗಾರರಿಗೆ ಹಾಗೂ ಸಾಲ ಪಡೆಯಲು ಇಚ್ಚಿಸುವವರಿಗೆ ಲಾಭವೋ ? ಇಲ್ಲಾ ನಷ್ಟವೋ ಎಂಬ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

ಅರ್‌ಬಿಐ ರೂಪಿಸಿರುವ ಹೊಸ ನಿಯಮದ ಪ್ರಕಾರ, ಕ್ರೆಡಿಟ್‌ ಬ್ಯರೋದ ನಿಯಮದಲ್ಲಿನ ಡೇಟಾವನ್ನು ಸರಿಪಡಿಸದ ಕಾರಣವನ್ನು ಸಹ ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಕ್ರೆಡಿಟ್‌ ಬ್ಯೂರೋ ವೆಬ್‌ಸೈಟ್‌ನಲ್ಲಿ ದೂರುಗಳ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕಾಗಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ರೂಪಿಸಿರುವ ಹಲವು ನಿಯಮಗಳು 26 ಏಪ್ರಿಲ್ 2024 ರಿಂದ ಜಾರಿಗೆ ಬರಲಿವೆ.

CIBIL Score New 5 Rules Implementation, RBI Gives Good News to Borrowers
Image Credit to Original Source

ಕಳೆದ ಎಪ್ರೀಲ್‌ ತಿಂಗಳಿನಲ್ಲಿಯೇ ಇಂತಹ ನಿಯಮಗಳ ಅನುಷ್ಟಾನದ ಬಗ್ಗೆ ಆರ್‌ಬಿಐ ಎಚ್ಚರಿಕೆಯನ್ನು ನೀಡಿತ್ತು. ಗ್ರಾಹಕರು ಸಾಲಕ್ಕಾಗಿ ಅರ್ಜಿ ಸಲ್ಲಿಕೆ ಮಾಡದ ಕೂಡಲೇ ಬ್ಯಾಂಕುಗಳು ಸಾಲ ಪಡೆಯುವವರ ಸಿಬಿಲ್‌ ಸ್ಕೋರ್‌ ಪರಿಶೀಲನೆ ನಡೆಸುತ್ತವೆ. ಈ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಒಟ್ಟು 5 ನಿಯಮಗಳನ್ನು ಜಾರಿಗೆ ತಂದಿದೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಕ್ಕಿಲ್ವಾ ? ಇಂದೇ ಈ ಕೆಲಸ ಮಾಡಿದ್ರೆ ನಿಮ್ಮ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗೋದು ಗ್ಯಾರಂಟಿ

CIBIL Score New Rules : ಸಿಬಿಲ್‌ ಸ್ಕೋರ್‌ 5 ಹೊಸ ರೂಲ್ಸ್‌

1. ಗ್ರಾಹಕರಿಗೆ ಸಿಬಿಲ್‌ ಚೆಕ್‌ ಬಗ್ಗೆ ಮಾಹಿತಿ ಕಳುಹಿಸುವುದು ಕಡ್ಡಾಯ

ಬ್ಯಾಂಕುಗಳ ಅಥವಾ ಎನ್‌ಬಿಎಫ್‌ಸಿ ( NBFC) ಗ್ರಾಹಕರ ಕ್ರೆಡಿಟ್ ಸ್ಕೋರ್‌ ಪರಿಶೀಲನೆ ನಡೆಸಿದಾಗ ಆ ಮಾಹಿತಿಯನ್ನು ಗ್ರಾಹಕರಿಗೆ ಕಡ್ಡಾಯವಾಗಿ ಕಳುಹಿಸಬೇಕು ಎಂದು ಆರ್‌ಬಿಐ ಹೇಳಿದೆ. ಅಲ್ಲದೇ ಮಾಹಿತಿಯನ್ನು ಎಸ್‌ಎಂಎಸ್‌ ಅಥವಾ ಈ ಮೇಲ್‌ ಮೂಲಕ ಕಳುಹಿಸಬಹುದಾಗಿದೆ. ಈ ಹಿಂದೆ ಕ್ರೆಡಿಟ್‌ ಸ್ಕೋರ್‌ಗಳ ಬಗ್ಗೆ ಅನೇಕ ದೂರುಗಳು ಇದ್ದವು. ಈ ಕಾರಣದಿಂದಲೇ ಆರ್‌ಬಿಐ ಈ ರೂಲ್ಸ್‌ ಜಾರಿಗೆ ತಂದಿದೆ.

CIBIL Score New 5 Rules Implementation, RBI Gives Good News to Borrowers
Image Credit to Original Source

2. ಗ್ರಾಹಕರಿಗೆ ವಿನಂತಿ ತಿರಸ್ಕಾರದ ಕಾರಣ ತಿಳಿಸುವು ಅತ್ಯವಶ್ಯಕ
ಭಾರತೀಯ ರಿಸರ್ವ್ ಬ್ಯಾಂಕ್ ರೂಪಿಸಿರುವ ಹೊಸ ನಿಯಮದ ಪ್ರಕಾರ, ಬ್ಯಾಂಕ್‌ ಗ್ರಾಹಕರ ಯಾವುದೇ ವಿನಂತಿಯನ್ನು ತಿರಸ್ಕಾರ ಮಾಡಿದ್ರೆ ಅದಕ್ಕೆ ಸೂಕ್ತ ಕಾರಣವನ್ನು ಗ್ರಾಹಕರಿಗೆ ತಿಳಿಸುವುದು ಅತ್ಯವಶ್ಯಕ. ಯಾವ ಕಾರಣಕ್ಕೆ ವಿನಂತಿ ತಿರಸ್ಕರಿಸಲಾಗಿದೆ ಎಂಬ ಕುರಿತ ಮಾಹಿತಿಯನ್ನು ಸಿದ್ದಪಡಿಸಿ ಕೊಳ್ಳಬೇಕು ಎಂದು ಕ್ರೆಡಿಟ್‌ ಸಂಸ್ಥೆಗಳಿಗೆ ತಿಳಿಸಿದೆ.

ಇದನ್ನೂ ಓದಿ : ಗೃಹ ಲಕ್ಷ್ಮಿ ಯೋಜನೆ : ಮುಂದಿನ ಕಂತಿನ ಹಣ ಪಡೆಯಲು ಈ 4 ದಾಖಲೆಗಳ ಸಲ್ಲಿಕೆ ಕಡ್ಡಾಯ

3. ಉಚಿತವಾಗಿ ಗ್ರಾಹಕರಿಗೆ ವರ್ಷಕ್ಕೊಮ್ಮೆ ಸಂಪೂರ್ಣ ಕ್ರೆಡಿಟ್ ವರದಿ ನೀಡಲೇ ಬೇಕು

ಕ್ರೆಡಿಟ್‌ ಕಂಪೆನಿಗಳು ವರ್ಷಕ್ಕೆ ಒಮ್ಮೆಯಾದ್ರೂ ತಮ್ಮ ಗ್ರಾಹಕರಿಗೆ ಉಚಿತವಾಗಿ ಕ್ರೆಡಿಟ್‌ ಸ್ಕೋರ್‌ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು. ಇದಕ್ಕಾಗಿ ಕ್ರೆಡಿಟ್‌ ಕಂಪೆನಿಯು ತನ್ನ ವೆಬ್‌ಸೈಟ್‌ನಲ್ಲಿ ಲಿಂಕ್‌ ಅನ್ನು ಪ್ರದರ್ಶಿಸುವ ಅಗತ್ಯವಿದೆ. ಇದರಿಂದಾಗಿ ಗ್ರಾಹಕರು ಉಚಿತವಾಗಿ ಸಂಪೂರ್ಣ ಕ್ರೆಡಿಟ್‌ ವರದಿಯನ್ನು ಪರಿಶೀಲನೆ ನಡೆಸಬಹುದಾಗಿದೆ. ಇದರಿಂದ ವರ್ಷಕ್ಕೊಮ್ಮೆಯಾದ್ರೆ ಗ್ರಾಹಕರು ತಮ್ಮ ಸಿಬಿಲ್ ಸ್ಕೋರ್‌ ಸಂಪೂರ್ಣ ಮಾಹಿತಿ ಪಡೆಯಬುದಾಗಿದೆ.

CIBIL Score New 5 Rules Implementation, RBI Gives Good News to Borrowers
Image Credit to Original Source

4. ಡೀಫಾಲ್ಟ್ ಕುರಿತು ವರದಿ ಮಾಡುವ ಮೊದಲು ಗ್ರಾಹಕರಿಗೆ ಮಾಹಿತಿ ನೀಡುವುದು ಕಡ್ಡಾಯ

ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿರುವ ಹೊಸ ರೂಲ್ಸ್‌ ಪ್ರಕಾರ, ಯಾವುದೇ ಗ್ರಾಹಕರ ಕುರಿತು ಡಿಫಾಲ್ಟ್‌ ವರದಿ ಮಾಡುವ ಮೊದಲು ಈ ಕುರಿತು ಗ್ರಾಹಕರಿಗೆ ಕಡ್ಡಾಯವಾಗಿ ಮಾಹಿತಿಯನ್ನು ತಿಳಿಸಬೇಕು. ಸಾಲ ನೀಡುವ ಸಂಸ್ಥೆಗಳು SMS/ಇ-ಮೇಲ್ ಕಳುಹಿಸುವ ಮೂಲಕ ಎಲ್ಲಾ ಮಾಹಿತಿಯನ್ನು ಹಂಚಿಕೊಳ್ಳಬೇಕು. ಅಲ್ಲದೇ ಬ್ಯಾಂಕು ಅಥವಾ ಸಾಲ ನೀಡುವ ಸಂಸ್ಥೆಗಳು ನೋಡಲ್‌ ಅಧಿಕಾರಿ ಓರ್ವರನನು ನೇಮಕ ಮಾಡಬೇಕು. ಈ ಅಧಿಕಾರಿಗಳು ಕ್ರೆಡಿಟ್‌ ಸ್ಕೋರ್‌ಗೆ ಸಂಬಂಧಿಸಿದ ಸಮಸ್ಯೆಯನ್ನು ಪರಿಹರಿಸಬೇಕು.

CIBIL Score New 5 Rules Implementation, RBI Gives Good News to Borrowers
Image Credit to Original Source

ಇದನ್ನೂ ಓದಿ : 10 ಲಕ್ಷ ಮಹಿಳೆಯರಿಗೆ ಇಲ್ಲ ಗೃಹಲಕ್ಷ್ಮೀ ಭಾಗ್ಯ

5. ದೂರನ್ನು 30 ದಿನಗಳಲ್ಲಿ ಪರಿಹಾರ ಮಾಡದಿದ್ರೆ, ದಿನಕ್ಕೆ ರೂ 100 ದಂಡ

ಯಾವುದೇ ಕ್ರೆಡಿಟ್‌ ಕಂಪೆನಿಗಳು ಗ್ರಾಹರು ನೀಡುವ ದೂರನ್ನು 30 ದಿನಗಳ ಒಳಗಾಗಿ ಪರಿಹಾರ ಮಾಡಬೇಕು. ಒಂದೊಮ್ಮೆ 30 ದಿನಗಳ ಒಳಗೆ ಪರಿಹಾರ ಮಾಡದಿದ್ರೆ, ನಂತರದಲ್ಲಿ ಪ್ರತೀ ದಿನಕ್ಕೆ 100 ರೂಪಾಯಿಗಳ ದಂಡ ಪಾವತಿಸಬೇಕು. ಸಾಲ ವಿತರಣಾ ಏಜೆನ್ಸಿಗೆ 21 ದಿನಗಳು ಮತ್ತು ಕ್ರೆಡಿಟ್ ಬ್ಯೂರೋಗೆ 9 ದಿನಗಳ ಅವಧಿಯನ್ನು ಕಾಯ್ದಿರಿಸಲಾಗಿದೆ.

ಇನ್ನು 21 ದಿನಗಳಲ್ಲಿ ಬ್ಯಾಂಕ್ ಕ್ರೆಡಿಟ್ ಬ್ಯೂರೋ ಮಾಹಿತಿಯನ್ನು ನೀಡದೇ ಇದ್ದಲ್ಲಿ ಬ್ಯಾಂಕ್‌ ಪರಿಹಾರವನ್ನು ಕಡ್ಡಾಯವಾಗಿ ಪಾವತಿ ಮಾಡಬೇಕು. ಅಲ್ಲದೇ ಬ್ಯಾಂಕಿನಿಂದ 9 ದಿನಗಳ ಅಧಿಸೂಚನೆ ಬೆನ್ನಲ್ಲೇ ದೂರನ್ನು ಪರಿಹಾರ ಮಾಡಬೇಕು. ಇಲ್ಲವಾದ್ರೆ ಕ್ರೆಡಿಟ್‌ ಬ್ಯೂರೋ ಹಾನಿ ಪಾವತಿಸಬೇಕು.

CIBIL Score New 5 Rules Implementation, RBI Gives Good News to Borrowers

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular