Darshan- Vijayalakshmi : ಒಂದೆಡೆ ದರ್ಶನ್ ಜೈಲ್ ನಲ್ಲೂ ಸುಮ್ಮನಿರಲಾರದೇ ರೌಡಿಗಳ ಸಹವಾಸ ಮಾಡಿ ಕೆಟ್ಟಿದ್ದಾರೆ. ರೌಡಿಶೀಟರ್ ಗಳ ಜೊತೆ ದರ್ಶನ್ ಜಾಲಿ ಟೈಂ ಸ್ಪೆಂಡ್ ಮಾಡ್ತಿರೋ ಪೋಟೋ ವೈರಲ್ ಆಗ್ತಿದಂತೆ ಇರೋ ಕೊಲೆ ಕೇಸ್ ಜೊತೆ ದರ್ಶನ್ ಮೇಲೆ ಮತ್ತೆ ಮೂರು ಪ್ರಕರಣ ದಾಖಲಾಗಿದೆ. ಇದಲ್ಲದೇ ಸ್ವತಃ ಸಿಎಂ ಸೂಚನೆ ಮೇರೆಗೆ ದರ್ಶನ್ ಪರಪ್ಪನ ಅಗ್ರಹಾರದಿಂದ ಹಿಂಡಲಗಾ ಜೈಲಿಗೆ ರವಾನೆಯಾಗಲಿದ್ದಾರೆ. ಇದೆಲ್ಲದರ ಮಧ್ಯೆ ಪತಿಯನ್ನು ಬಿಡಿಸಲು ಶತಯಾ ಗತಾಯ ಸರ್ಕಸ್ ನಡೆಸ್ತಿರೋ ಪತ್ನಿ ವಿಜಯ್ ಲಕ್ಷ್ಮೀ ದರ್ಶನ್ ಈ ವರ್ತನೆಯಿಂದ ನೊಂದಿದ್ದು ಆಪ್ತರ ಬಳಿ ಕಣ್ಣೀರಿಟ್ಟು ತಮ್ಮ ನೋವು ತೋಡಿಕೊಂಡಿದ್ದಾರಂತೆ.

ನಟ ದರ್ಶನ್ ಪತ್ನಿಯ ಮೇಲೆ ಎಷ್ಟು ಪ್ರೀತಿ ಹೊಂದಿದ್ದಾರೋ ಗೊತ್ತಿಲ್ಲ. ಆದರೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಾತ್ರ ಪತಿಯೇ ಪರದೈವ ಅನ್ನೋ ಹಾಗಿದ್ದಾರೆ. ಪತಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೂ ಸ್ವಲ್ಪವೂ ಬೇಸರಿಸಿಕೊಳ್ಳದೇ ಅವರಿಗಾಗಿ ದೇವಸ್ಥಾನ,ಜೈಲು, ರಾಜಕಾರಣಿಗಳ ಮನೆ ಬಾಗಿಲಿಗೆ ತಿರುಗುತ್ತಿದ್ದಾರೆ.
ಇತ್ತೀಚೆಗಷ್ಟೇ ನಟಿ ವಿಜಯ್ ಲಕ್ಷ್ಮೀ ಪತಿಯ ಸುರಕ್ಷಿತ ಬಿಡುಗಡೆಗಾಗಿ ಕೊಲ್ಲೂರು ಮೂಕಾಂಬಿಕಾ ದೇಗುಲದಲ್ಲಿ ಪಾರಾಯಣ ಸಹಿತ ಚಂಡಿಕಾ ಹೋಮ ನೆರವೇರಿಸಿದ್ದರು. ಮನೆಯಲ್ಲೂ ಪೂಜೆ ಪುನಸ್ಕಾರ ನಡೆಸುತ್ತಿದ್ದಾರೆ. ಮಾತ್ರವಲ್ಲ ವಾರಕ್ಕೆರಡು ಭಾರಿ ಜೈಲಿಗೆ ಹೋಗಿ ದರ್ಶನ್ ಭೇಟಿ ಮಾಡಿ ಮಗನನ್ನು ತೋರಿಸಿಕೊಂಡು ಸಮಾಧಾನ ಮಾಡಿ ಬರ್ತಿದ್ದಾರೆ.
ಇದೆಲದಕ್ಕಿಂತ ಮುಖ್ಯವಾಗಿ ವಿಜಯಲಕ್ಷ್ಮಿ ಸಿ.ಎನ್.ನಾಗೇಶ್, ಸಿ.ಎಚ್.ಹನುಂಮತರಾಯಪ್ಪನವರಂತಹ ಹಿರಿಯ ಕ್ರಿಮಿನಲ್ ವಕೀಲರನ್ನು ಸಂಪರ್ಕಿಸಿ ಪತಿಯ ಪರ ವಾದ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಇತ್ತೀಚಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮನೆಗೂ ಭೇಟಿ ನೀಡಿದ್ದ ವಿಜಯಲಕ್ಷ್ಮಿ, ದರ್ಶನ್ ವಿಚಾರದ ಬಗ್ಗೆಯೇ ಮಾತನಾಡಿದ್ದರು ಎನ್ನಲಾಗಿದೆ.

ಆದರೆ ಪತ್ಬಿ ವಿಜಯಲಕ್ಷ್ಮಿಯ ಈ ಎಲ್ಲ ಪ್ರಯತ್ನಗಳ ಮೇಲೆ ದರ್ಶನ್ ನೀರೆರೆಚಿದ್ದಾರೆ. ಜೈಲಿನಲ್ಲಿ ಪಶ್ಚಾತಾಪದ ದಿನಗಳನ್ನು ಕಳೆಯಬೇಕಿದ್ದ ದರ್ಶನ್ ರೆಸಾರ್ಟ್ ನಲ್ಲಿರೋ ಪ್ರವಾಸಿಗರ ತರ ಎಂಜಾಯ್ ಮಾಡ್ತಿದ್ದಾರೆ. ಟೀ,ಕಾಫಿ ಮಗ್,ಸಿಗರೇಟು ಹೀಗೆ ಶೋಕಿ ಮಾಡ್ಕೊಂಡು ದರ್ಶನ್ ಹಾಯಾಗಿದ್ದಾರೆ. ಆದರೆ ವೈರಲ್ ಆಗಿರೋ ದರ್ಶನ್ ಪೋಟೋ ಮಾತ್ರ ಈಗ ವಿಜಯಲಕ್ಷ್ಮಿ ನಿದ್ದೆಗೆಡಿಸಿದೆ. ದರ್ಶನ್ ಅವತಾರ ಹಾಗೂ ಪೋಟೋ ವೈರಲ್ ಆದ ಮೇಲೆ ಸೃಷ್ಟಿಯಾಗಿರೋ ಪರಿಸ್ಥಿತಿ ಗಮನಿಸಿದ ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಕೆಂಡಾಮಂಡಲರಾಗಿದ್ದಾರಂತೆ.
ಇದನ್ನೂ ಓದಿ : ಕನಸೊಂದು ನನಸಾಯಿತು ಎಂದ ಶಿವಣ್ಣಪುತ್ರಿ: ನಿವೇದಿತಾ ಪೋಸ್ಟ್ ವೈರಲ್
ದರ್ಶನ್ ಆಪ್ತರ ಬಳಿ ಗೋಳು ತೋಡಿಕೊಂಡಿರೋ ವಿಜಯಲಕ್ಷ್ಮಿ, ಈಗಾಗಲೇ ಕೊಲೆ ಪ್ರಕರಣವೇ ತುಂಬಾ ಪ್ರಬಲವಾಗಿದೆ. ಆ ಕೇಸ್ ನಿಂದ ಹೊರಗೆ ತರೋದಿಕ್ಕೆ ಪರದಾಡುವಂತಾಗಿದೆ. ಹೀಗಿರುವಾಗ ದರ್ಶನ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಯಾಕೆ ಹೀಗೆ ಮಾಡ್ತಾರೆ ಅರ್ಥ ಆಗ್ತಿಲ್ಲ. ಅವರಿಗೆ ಮಗನ ಬಗ್ಗೆಯೂ ಚಿಂತೆ ಇಲ್ಲವೇ? ಈಗ ಮತ್ತೆ FIR ಆದರೆ ಹಾಗೂ ಕೋರ್ಟ್ ಈ ಪೋಟೋಗಳನ್ನು ಗಂಭೀರವಾಗಿ ಪರಿಗಣಿಸಿದ್ರೇ ಜಾಮೀನು ಸಿಗೋ ಸಾಧ್ಯತೆಯೂ ಕ್ಷೀಣಿಸುತ್ತದೆ ಎಂದು ಕಣ್ಣೀರಿಟ್ಟಿದ್ದಾರಂತೆ.
ಇದನ್ನೂ ಓದಿ : ದರ್ಶನ್‌ಗೆ ಜೈಲಿನಲ್ಲಿ ರಾಜಾತಿ್ಥ್ಯ : ಬಳ್ಳಾರಿಗೆ ಡಿಬಾಸ್, ಯಾರು ಯಾವ ಜೈಲಿಗೆ ಶಿಫ್ಟ್ ? ಇಲ್ಲಿದೆ ಕಂಪ್ಲೀ್ಟ್ ಡಿಟೇಲ್ಸ್
ವಯಸ್ಸಾದ ತಾಯಿ, ಮಗ ಎಲ್ಲರೂ ಅವರನ್ನು ಕಾಯುತ್ತಿದ್ದಾರೆ. ಮಗ ಅವಮಾನವಾಗ್ತಿದೆ ಅನ್ನೋ ಕಾರಣಕ್ಕೆ ಸ್ಕೂಲ್ ಗೆ ಹೋಗದೆ ಕೂತಿದ್ದಾನೆ. ಆದರೆ ದರ್ಶನ್ ಗೆ ಮಾತ್ರ ಸ್ವಲ್ಪವೂ ಅರ್ಥ ಆಗ್ತಿಲ್ಲ. ಯಾಕೆ ಒಂದಾದ ಮೇಲೊಂದು ವಿವಾದ ಮಾಡಿಕೊಳ್ಳುತ್ತಲೇ ಇದ್ದಾರೆ. ನನಗಂತೂ ತಲೆ ಎತ್ತದ ಹಾಗಾಗಿದೆ. ಜೈಲಿನತ್ತ ಹೋಗಲು ಮನಸ್ಸಿಲ್ಲ ಎಂದು ವಿಜಯಲಕ್ಷ್ಮಿ ತಮ್ಮ ಅಸಮಧಾನ ಹೊರಹಾಕಿದ್ದಾರಂತೆ. ಕೇವಲ ವಿಜಯಲಕ್ಷ್ಮಿ ಮಾತ್ರವಲ್ಲ ಈ ಪೋಟೋ ಹಾಗೂ ವಿಡಿಯೋ ಕಾರಣಕ್ಕೆ ದರ್ಶನ್ ಸಹೋದರ ದಿನಕರ ತೂಗುದೀಪ , ತಾಯಿ ಮೀನಾ ತೂಗುದೀಪ ಕೂಡ ಬೇಸರ ವ್ಯಕ್ತಪಡಿಸಿದ್ದಾರಂತೆ.
Darshan Photo Viral Wife Vijayalakshmi Crying