ಭಾನುವಾರ, ಏಪ್ರಿಲ್ 27, 2025
Hometechnologyಟ್ರಾಯ್‌ನಿಂದ ಹೊಸ ರೂಲ್ಸ್‌ : 59 ಸಾವಿರ SIM Card ರದ್ದು ! ನೀವೂ ಮಾಡಬೇಡಿ...

ಟ್ರಾಯ್‌ನಿಂದ ಹೊಸ ರೂಲ್ಸ್‌ : 59 ಸಾವಿರ SIM Card ರದ್ದು ! ನೀವೂ ಮಾಡಬೇಡಿ ಈ ತಪ್ಪು

TRAI New Rules : ನವದೆಹಲಿ : ಭಾರತದಲ್ಲಿ ಸಿಮ್‌ ಕಾರ್ಡ್‌ ಬಳಕೆಗೆ ಸಂಬಂಧಿಸಿದಂತೆ ಭಾರತೀಯ ಟೆಲಿಕಾಂ ರೆಗ್ಯುಲೇಟರ್‌ ಅಥಾರಿಟಿ ಆಫ್‌ ಇಂಡಿಯಾ (TRAI) ಹೊಸ ರೂಲ್ಸ್‌ ಜಾರಿ ಮಾಡಿದೆ.

- Advertisement -

TRAI New Rules : ನವದೆಹಲಿ : ಭಾರತದಲ್ಲಿ ಸಿಮ್‌ ಕಾರ್ಡ್‌ ಬಳಕೆಗೆ ಸಂಬಂಧಿಸಿದಂತೆ ಭಾರತೀಯ ಟೆಲಿಕಾಂ ರೆಗ್ಯುಲೇಟರ್‌ ಅಥಾರಿಟಿ ಆಫ್‌ ಇಂಡಿಯಾ (TRAI) ಹೊಸ ರೂಲ್ಸ್‌ ಜಾರಿ ಮಾಡಿದೆ. ಅನಧಿಕೃತವಾಗಿ ಸಿಎಮ್‌ (SIM Card) ಬಳಕೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ 59 ಸಾವಿರ ಸಿಎಮ್‌ ಕಾರ್ಡ್‌ಗಳನ್ನು ಟ್ರಾಯ್‌ ರದ್ದು ಪಡಿಸಿದೆ.

New rules from TRAI 59 thousand SIM card canceled Don't make this mistake either
Image Credit to Original Source

ಯಾವುದೇ ಸಿಎಮ್‌ ಕಾರ್ಡ್‌ಗಳನ್ನು ಮೋಸದ ಬಳಕೆಗೆ ಅಥವಾ ಅನಧಿಕೃತವಾಗಿ ಮೊಬೈಲ್‌ ಸಿಮ್‌ ಕಾರ್ಡ್‌ ಬಳಕೆ ಮಾಡುವುದಕ್ಕೆ ಟ್ರಾಯ್‌ ನಿರ್ಬಂಧ ಹೇರಿದೆ. ಟೆಲಿಕಾಂ ಕ್ಷೇತ್ರದಲ್ಲಿ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲವೊಂದು ರೂಲ್ಸ್ ಗಳನ್ನು ಜಾರಿಗೆ ತರಲಾಗಿದೆ. ಅದ್ರಲ್ಲೂ ಸಿಎಮ್‌ ಕಾರ್ಡ್‌ನಿಂದ ಮಾಡುವ ಕರೆ ಹಾಗೂ ಎಸ್ಎಂಎಸ್‌ಗಳ ಮೇಲೆಯೂ ನಿರ್ಬಂಧ ಹೇರಲಾಗಿದೆ.

ಇದನ್ನೂ ಓದಿ : ಕೇವಲ 51 ರೂ.ಗೆ ಅನಿಯಮಿತ 5G ಡೇಟಾ : ರಿಲಯನ್ಸ್ ಜಿಯೋ ಹೊಸ ಯೋಜನೆ

ಇನ್ಮಂದೆ ಹೊಸ ಸಿಎಮ್‌ ಕಾರ್ಡ್‌ ಪಡೆಯುವ ವೇಳೆಯಲ್ಲಿ ಗ್ರಾಹಕರ ಗುರುತು, ಗುರುತಿನ ಚೀಟಿ, ವಿಳಾಸವನ್ನು ಸರಿಯಾಗಿ ಪರಿಶೀಲನೆ ನಡೆಸಬೇಕು ಎಂದು ತಿಳಿಸಲಾಗಿದೆ. ಗ್ರಾಹಕರು ತಪ್ಪಾಗಿರುವ ಮಾಹಿತಿಯನ್ನು ನೀಡಿ ಸಿಮ್‌ ಕಾರ್ಡ‌ ಪಡೆದುಕೊಂಡಿದ್ದರೆ ಅಂತಹ ಸಿಎಮ್‌ ಕಾರ್ಡ್‌ಗಳು ಇನ್ಮುಂದೆ ರದ್ದಾಗಲಿದೆ. ಅಷ್ಟೇ ಅಲ್ಲ ಒಬ್ಬ ವ್ಯಕ್ತಿ ಗರಿಷ್ಠ ಎಷ್ಟು ಸಿಮ್‌ ಕಾರ್ಡ್‌ಗಳನ್ನು ಹೊಂದಬಹುದು ಅನ್ನೋ ಮಿತಿಯ ಮೇಲೆಯೂ ನಿರ್ಬಂಧ ಹೇರಲಾಗಿದೆ.

New rules from TRAI 59 thousand SIM card canceled Don't make this mistake either
Image Credit to Original Source

ಇದನ್ನೂ ಓದಿ : ಹೊಸ ರೂಲ್ಸ್‌ : ಅತೀ ಹೆಚ್ಚು ಸಿಮ್‌ ಹೊಂದಿದ್ರೆ 3 ವರ್ಷ ಜೈಲು ಶಿಕ್ಷೆ, 2 ಲಕ್ಷ ದಂಡ

ಇತ್ತೀಚಿನ ದಿನಗಳಲ್ಲಿ ನಕಲಿ ಕರೆಗಳು, ಎಸ್‌ಎಂಎಸ್‌ಗಳ ಹಾವಳಿಯಿಂದಾಗಿ ಸಾಕಷ್ಟು ಮಂದಿ ವಂಚನೆಗೆ ಬಲಿಯಾಗುತ್ತಿದ್ದಾರೆ. ಇದನ್ನು ತಪ್ಪಿಸುವ ಸಲುವಾಗಿ ಪ್ರತಿನಿತ್ಯ ಗರಿಷ್ಠ 50 ಮೆಸೇಜ್‌ ಹಾಗೂ ಅಧಿಕ ಕರೆಗಳನ್ನು ಮಾಡುವವರ ಮೇಲೆ ಹದ್ದಿನಕಣ್ಣು ಇರಿಸಲಾಗುತ್ತದೆ. ನಕಲಿ ಸಂದಶ ಹಾಗೂ ನಕಲಿ ಕಾಲ್‌ಗಳಿಗೆ ಬಳಕೆ ಮಾಡುವ ಸಿಎಮ್‌ ಕಾರ್ಡ‌ಗಳನ್ನ ರದ್ದುಪಡಿಸಲಾಗುತ್ತದೆ.

ಇದನ್ನೂ ಓದಿ : Jio offer : ರಿಲಯನ್ಸ್ ಜಿಯೋ ಬಂಪರ್‌ ಆಫರ್‌ : ಕೇವಲ ರೂ 75 ಅನ್‌ಲಿಮಿಟೆಡ್‌ ರಿಚಾರ್ಜ್‌

ಭಾರತದಲ್ಲಿ ಈಗಾಗಲೇ 59 ಸಾವಿರಕ್ಕೂ ಅಧಿಕ ಸಿಎಮ್‌ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ. ಹೀಗಾಗಿ ನಕಲಿ ಸಂದೇಶಗಳನ್ನು ಫಾರ್ಮರ್ಡ್‌ ಮಾಡುವ ಮುನ್ನ ಎಚ್ಚರವಾಗಿ. ಒಂದೊಮ್ಮೆ ನೀವೇನಾದ್ರೂ ನಕಲಿ ಸಂದೇಶ ಅಥವಾ ನಕಲಿ ಕಾಲ್‌ ಮಾಡಿದ್ರೆ ನಿಮ್ಮ ಸಿಮ್‌ ಕಾರ್ಡ್‌ ಕೂಡ ರದ್ದಾಗಲಿದೆ.

New rules from TRAI: 59 thousand SIM card canceled! Don’t make this mistake either

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular