LIC Plans : ಲೈಫ್ ಇನ್ಸೂರೆನ್ಸ್ ಸಂಸ್ಥೆ ಆಫ್ ಇಂಡಿಯಾ (ಎಲ್ಐಸಿ) ಕೆಲವು ಪ್ರಸಿದ್ದ ಇನ್ಸೂರೆನ್ಸ್ ಪಾಲಿಸಿಗಳು ಇನ್ನು ಮುಂದೆ ಲಭ್ಯ ಇರೋದಿಲ್ಲ. ಯಾಕೆಂದ್ರೆ ಸೆಪ್ಟೆಂಬರ್ 30, 2024 ರ ನಂತರ ಎಲ್‌ಐಸಿ ಕೆಲವು ಯೋಜನೆಗಳನ್ನು ಬಂದ್ ಮಾಡಲು ನಿರ್ಧರಿಸಿದೆ. ಹಾಗಾದ್ರೆ ಆ ಯೋಜನೆಗಳು ಯಾವುವು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಭಾರತ ಸರಕಾರ ಪ್ರಮುಖ ವಿಮಾ ಕಂಪೆನಿಗಳಲ್ಲಿ ಒಂದಾಗಿರುವ ಎಲ್‌ಐಸಿ ಹಲವು ದಶಕಗಳಿಂದಲೂ ಗ್ರಾಹಕರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದೆ. ಅದ್ರಲ್ಲೂ ಹಲವು ಯೋಜನೆಗಳ ಮೂಲಕ ಗ್ರಾಹಕರನ್ನು ಜೀವವಿಮೆ ಮಾಡಿಸಲು ಆಕರ್ಷಿಸಿತ್ತು. ಆದರೆ ಇದೀಗ ಕೆಲವು ಯೋಜನೆಗಳನ್ನು ಎಲ್‌ಐಸಿ ವಾಪಾಸ್ ಪಡೆಯಲಿದೆ. ಅದ್ರಲ್ಲೂ ಗ್ರಾಹಕರಿಗೆ ಉತ್ತಮ ಲಾಭವನ್ನು ತಂದುಕೊಡುತ್ತಿದ್ದ ಯೋಜನೆಗಳೇ ಸ್ಥಗಿತವಾಗಲಿದೆ.
ಇದನ್ನೂ ಓದಿ : ಕರ್ನಾಟಕದಲ್ಲಿ20 ಲಕ್ಷ ಬಿಪಿಎಲ್ ಕಾರ್ಡ್ ರದ್ದು ! ಜಾರಿಯಾಯ್ತು ಹೊಸ ರೂಲ್ಸ್
ಸೆಪ್ಟೆಂಬರ್ 30, 2024 ನಂತರ ಎಲ್ಐಸಿ ಒಟ್ಟು 9 ಯೋಜನೆಗಳು ಸ್ಥಗಿತಗೊಳ್ಳಲಿದೆ. ಜೀವನ್ ಲ್ಯಾಬ್ (ಪ್ಲಾನ್ ನಂಬರ್ 936), ಜೀವನ್ ಉಮಾಂಗ್ (ಪ್ಲಾನ್ ನಂಬರ್ 945), ಜೀವನ್ ಆನಂದ್ (ಪ್ಲಾನ್ ನಂಬರ್ 915), ಜೀವನ್ ಉತ್ಸವ (ಪ್ಲಾನ್ ನಂಬರ್ 871), ಜೀವನ್ ಗುರಿಯಾ (ಪ್ಲಾನ್ ನಂಬರ್ 933), ಎಂಡೋಮೆಂಟ್ ಪ್ಲಾನ್ (ಪ್ಲಾನ್ ನಂಬರ್ 914) , ಜೀವನ್ ತರುಣ್ (ಪ್ಲಾನ್ ಸಂಖ್ಯೆ 934), ಮನೀ ಬ್ಯಾಕ್ ಯೋಜನೆಗಳು (ಪ್ಲಾನ್ ಸಂಖ್ಯೆ 920, 921), ಚಿಲ್ಡ್ರನ್ ಮ್ಯಾನಿ ಬ್ಯಾಕ್ ಪ್ಲಾನ್ (ಪ್ಲಾನ್ ಸಂಖ್ಯೆ 932) ಯೋಜನೆಗಳು ಇನ್ಮುಂದೆ ಇರೋದಿಲ್ವಂತೆ.
ಇದನ್ನೂ ಓದಿ : Ration Card e-KYC : ರೇಷನ್ ಕಾರ್ಡ್‌ಗೆ ಇಕೆವೈಸಿ ಕಡ್ಡಾಯ, ತಪ್ಪಿದ್ರೆ ರದ್ದಾಗುತ್ತೆ ಕಾರ್ಡ್
ಜೀವನ್ ಲ್ಯಾಬ್ ಯೋಜನೆ ಒಂದು ನಾನ್ ಲಿಂಕ್ಡ್, ಲಿಮಿಟೆಡ್ ಪ್ರೀಮಿಯಂ ಪೇಮೆಂಟ್ ಯೋಜನೆ. ಇದರಲ್ಲಿ ವಿಮಾ ರಕ್ಷಣೆಯೊಂದಿಗೆ ಸೇವೆಗಳನ್ನು ಸಹ ಒಳಗೊಂಡಿದೆ. ಇದರ ಮೂಲಕ ಡೆತ್ ಬೆನಿಫಿಟ್ಸ್ ಜೊತೆಗೆ ಮೆಚ್ಯುರಿಟಿ ಬೆನಿಫಿಟ್ಸ್ ಇರುತ್ತದೆ. ಇದರಲ್ಲಿ ರೈಡರ್ ಆಯ್ಕೆಗಳು, ಕಾರ್ಪೊರೇಷನ್ ಪ್ರಾಫಿಟ್ ಸ್ಟೇಟ್ಸ್ ಇವೆ.

ಇನ್ನು ಜೀವನ್ ಉಮಾಂಗ್ ಎಂಬುದು ಲೈಫ್ ಇನ್ಸೂರೆನ್ಸ್ ಯೋಜನೆ. ಇದರಲ್ಲಿ ಯಾನ್ಯುವಲ್ ಸರ್ವೈವಲ್ ಬೆನಿಫಿಟ್ಸ್, ಲ್ಯಾಂಪ್ ಸ್ಯಾಮ್ ಮೆಚ್ಯುರಿಟಿ ಬೆನಿಫಿಟ್ಸ್ ಇವೆ. ಇದರಲ್ಲಿ ಜೀವನಾತಂ ಕವರೇಜಿ ಲಭ್ಯವಿದೆ. ಹಾಗೆಯೇ ಜೀವನಾ೦ತ ಆದಾಯ ಸಿಗುತ್ತದೆ. ಜೀವನ್ ಆನಂದ್ ಸಹ ವಿಮೆಯೊಂದಿಗೆ ಸೇವೆಗಳನ್ನು ಒದಗಿಸುತ್ತದೆ.
ಇದನ್ನೂ ಓದಿ : ಭಾಗ್ಯಲಕ್ಷ್ಮಿ ಯೋಜನೆ ಗುಡ್‌ನ್ಯೂಸ್ : ಫಲಾನುಭವಿಗಳ ಖಾತೆಗೆ ಮೆಚ್ಯುರಿಟಿ ಹಣ
ಇನ್ನು ಜೀವನ್ ಉತ್ಸವ ಎಂಬುದು ಎಂಡೋಮೆಂಟ್ ಆಶ್ಯೂರೆನ್ಸ್ ಯೋಜನೆ. ಇದರಲ್ಲಿನೂ ಸೇವಿಂಗ್ಸ್ ಪ್ರೊಟಕ್ಷನ್ಸ್ ಇರುತ್ತವೆ. ಇನ್ನು ಜೀವನ್ ಗುರಿ ಯೋಜನೆ ಎಂಬುದು ಒಂದು ಸೀಮಿತ ಪ್ರೀಮಿಯಂ ಪೇಯಿಂಗ್, ನ್ಯಾನ್ ಲಿಂಕ್ಡ್, ಪ್ರಾವಿಫ್ಟ್ಸ್ ಎಂಡೋಮೆಂಟ್ ಯೋಜನೆ. ಜೀವನ್ ತರುಣ್ ಎಂಬುದು ಮಕ್ಕಳಿಗಾಗಿ ವಿನ್ಯಾಸಗೊಳಿಸಿದ ಯೋಜನೆ.
LIC Plans: All these LIC policies end on September 30