ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಭಾರತದಲ್ಲಿ ಸದ್ಯ 4G ಸೇವೆಯನ್ನು ಒದಗಿಸುತ್ತಿದೆ. ತಾಂತ್ರಿಕವಾಗಿಯೂ ಅತ್ಯಾಧುನಿಕ ಟೆಕ್ನಾಲಜಿಯನ್ನು ಬಳಸಲು ಮುಂದಾಗುತ್ತಿದೆ. ಇದೀಗ ಬಿಎಸ್ಎನ್‌ಎಲ್ ಹೊಸ ಯೋಜನೆಯೊಂದನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ ಈ ಯೋಜನೆಯ ಮೂಲಕ ಕೇವಲ 6 ರೂಪಾಯಿಗಳಿಗೆ 1.5 GB ಡೇಟಾ, ಅನಿಯಮಿತ ಕರೆಯ ಸೌಲಭ್ಯವನ್ನು ಪಡೆಯಬಹುದಾಗಿದೆ. ಅಲ್ಲದೇ 82 ದಿನಗಳ ವ್ಯಾಲಿಡಿಟಿ ಪ್ಲಾನ್ ಇದಾಗಿದೆ.

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಹಾಗೂ ಖಾಸಗಿ ಕಂಪೆನಿಗಳಾದ ಏರ್‌ಟೆಲ್, ಜಿಯೋ, ಐಡಿಯಾ ವೊಡಪೋನ್ ಕಂಪೆನಿಗಳ ಜೊತೆಗೆ ಭರ್ಜರಿ ಫೈಪೋಟಿ ಏರ್ಪಟ್ಟಿದೆ. ಯಾವ ಕಂಪೆನಿ ಹೆಚ್ಚು ಆಫರ್ ನೀಡುತ್ತೋ ಅಂತಹ ಕಂಪೆನಿಗಳಿಗೆ ಗ್ರಾಹಕರು ಪೋರ್ಟ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಬಿಎಸ್‌ಎನ್‌ಎಲ್ ಗ್ರಾಹಕರನ್ನು ಸೆಳೆಯುವ ಸಲುವಾಗಿ ಹೊಸ ಯೋಜನೆಯೊಂದನ್ನು ಗ್ರಾಹಕರಿಗೆ ಪರಿಚಯಿಸಿದೆ.
ಇದನ್ನೂ ಓದಿ : ಕೇವಲ ರೂ.10,999ಕ್ಕೆ 5G ಸ್ಮಾರ್ಟ್‌ಪೋನ್ : ಭಾರತದಲ್ಲಿ ಬಿಡುಗಡೆ ಆಯ್ತು Realme Narzo 70 5G, Narzo 70x 5G
ಬಿಎಸ್‌ಎನ್ಎಲ್ ( BSNL) 2 ದಿನಗಳ ಕಡಿಮೆ ಬೆಲೆಯ ಯೋಜನೆಯನ್ನು ಪ್ರಕಟಿಸಿದೆ. ಈ ಯೋಜನೆಯ ಮೂಲಕ ದಿನಕ್ಕೆ 1.5 GB ಡೇಟಾ, ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ಸೌಲಭ್ಯದ ಜೊತೆಗೆ ದಿನಕ್ಕೆ 100 SMS ಪ್ರಯೋಜನ ದೊರೆಯಲಿದೆ. ಈ ಹೊಸ ಯೋಜನೆಯು 82 ದಿನಗಳ ವ್ಯಾಲಿಡಿಟಿಯೂ ದೊರೆಯಲಿದೆ. ಈ ಯೋಜನೆಯನ್ನು ಪಡೆಯಲು ನಿತ್ಯವೂ ನೀವು 6 ರೂಪಾಯಿ ವಿನಿಯೋಗಿಸಬೇಕಾಗಿದೆ. ಈ ಯೋಜನೆಯನ್ನು ಪಡೆಯಬೇಕಾದ್ರೆ ನೀವು 485 ರೂ. ರಿಚಾರ್ಜ್ ಮಾಡಿಸಬೇಕಾಗಿದೆ.

82 ದಿನಗಳವರೆಗೆ ಲೆಕ್ಕ ಹಾಕಿದರೆ BSNL ಹೊಸ ಯೋಜನೆ ದಿನಕ್ಕೆ 6 ರೂ. ಹೀಗಾಗಿ ಇಷ್ಟು ಕಡಿಮೆ ಬೆಲೆಯಲ್ಲಿ ಡೇಟಾ, ಕರೆ, ಎಸ್ ಎಂಎಸ್ ಸೌಲಭ್ಯ ಇತರೆ ಟೆಲಿಕಾಂಗಳ ಯೋಜನೆಯ ಮೂಲಕ ಪಡೆಯಲು ಸಾಧ್ಯವಿಲ್ಲ. SNL ಗ್ರಾಹಕರು ಈ ಯೋಜನೆಯನ್ನು ಅಧಿಕೃತ ಸ್ವಯಂ-ಆರೈಕೆ ಅಪ್ಲಿಕೇಶನ್ ಮೂಲಕ ರೀಚಾರ್ಜ್ ಮಾಡಬಹುದು. ಒಮ್ಮೆ ರೀಚಾರ್ಜ್ ಮಾಡಿದರೆ 82 ದಿನಗಳವರೆಗೆ ತಲೆನೋವು ಇರುವುದಿಲ್ಲ.
ಇದನ್ನೂ ಓದಿ: ಏರ್‌ಟೆಲ್ ಬಿಗ್ ಆಫರ್ : 6 ತಿಂಗಳು ಗ್ರಾಹಕರು ರಿಚಾರ್ಜ್ ಮಾಡೋದೇ ಬೇಡಾ..!
ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು ಬಿಎಸ್‌ಎನ್‌ಎಲ್ ಮೊಬೈಲ್ ಸಂಖ್ಯೆಯ ಮೂಲಕ ನೋಂದಣಿ ಮಾಡಬೇಕು. OTP ನಮೂದಿಸಿ ಮತ್ತು 82 ದಿನಗಳ ಟೆನ್ಶನ್ ಮುಕ್ತ ಹೊಸ ಯೋಜನೆಯನ್ನು ಆಯ್ಕೆಮಾಡಿ. BSNL ಈಗ ಇತರ ಟೆಲಿಕಾಂ ಕ್ಷೇತ್ರಗಳೊಂದಿಗೆ ಸ್ಪರ್ಧಿಸಲು ಮತ್ತು ಲಾಭದಾಯಕ ಕಂಪನಿಯನ್ನಾಗಿ ಮಾಡಲು ಹೊಸ ವಿಧಾನವನ್ನು ಅನುಸರಿಸುತ್ತಿದೆ.
ಇದನ್ನೂ ಓದಿ: Jiophone Prima 2: ಕೇವಲ 2799ರೂ.ಗೆ ಸಿಗಲಿದೆ 4G ಮೊಬೈಲ್
BSNL 5G ನೆಟ್‌ವರ್ಕ್ ಅನ್ನು ಪರೀಕ್ಷಿಸುತ್ತಿದೆ, ಇತ್ತೀಚೆಗೆ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ 5G ನೆಟ್‌ವರ್ಕ್ ಅನ್ನು ಪರೀಕ್ಷಿಸಿದ್ದರು. BSNL 5G ನೆಟ್‌ವರ್ಕ್ ಮೂಲಕ ವೀಡಿಯೊ ಕರೆ ಮಾಡುವ ಮೂಲಕ ಪರೀಕ್ಷಿಸಲಾಗಿದೆ. ಶೀಘ್ರದಲ್ಲೇ BSNL ಸಾರ್ವಜನಿಕರಿಗೆ 5G ಸೇವೆಯನ್ನು ತೆರೆಯುತ್ತದೆ. ಇದರಿಂದ ಇತರೆ ಟೆಲಿಕಾಂ ಸೇವಾ ಕಂಪನಿಗಳಿಗೆ ನಡುಕ ಶುರುವಾಗಿದೆ. ದೇಶದ ಮೂಲೆ ಮೂಲೆಯಲ್ಲಿ ಬಿಎಸ್‌ಎನ್‌ಎಲ್ ಟವರ್ ಮತ್ತು ನೆಟ್‌ವರ್ಕ್ ಸಂಪರ್ಕವಿದೆ.
ಹೀಗಾಗಿ BSNL 5G ಸೇವೆಗಳು ದೇಶದ ಮೂಲೆ ಮೂಲೆಗಳಲ್ಲಿ ಲಭ್ಯವಿರುತ್ತವೆ ಮತ್ತು 5G ಸೇವೆ ಪ್ರಾರಂಭವಾಗುತ್ತಿದ್ದಂತೆ ಹೊಸ ಯೋಜನೆಯನ್ನು ಘೋಷಿಸುತ್ತದೆ. ಇತ್ತೀಚೆಗೆ ಅನೇಕ ಜನರು ಇತರ ನೆಟ್‌ವರ್ಕ್‌ಗಳಿಂದ BSNL ಗೆ ಪೋರ್ಟ್ ಮಾಡಿದ್ದಾರೆ. ದುಬಾರಿ ರಿಚಾರ್ಜ್ ಪ್ಲಾನ್, ನೆಟ್ ವರ್ಕ್ ಮತ್ತಿತರ ಸಮಸ್ಯೆಗಳಿಂದ ಕಂಗೆಟ್ಟಿರುವ ಗ್ರಾಹಕರು ಬಿಎಸ್ ಎನ್ ಎಲ್ ಗೆ ಬರುತ್ತಿದ್ದಾರೆ.
BSNL Big offer 1.5 GB data unlimited calling for just Rs 6