ಉಡುಪಿ : ನಗರದ ದೊಡ್ಡಣಗುಡ್ಡೆಯಲ್ಲಿರುವ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಆಸ್ಪತ್ರೆಯಲ್ಲಿ ರೋಗಿಗಳು ಇಲ್ಲದ ಹಿನ್ನೆಲೆಯಲ್ಲಿ ಸಂಭವಿಸುತ್ತಿದ್ದ ದುರಂತವೊಂದು ತಪ್ಪಿದೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಿಂದ ಬೆಂಕಿಯನ್ನು ನಂದಿಸಲಾಗಿದೆ.

ದೊಡ್ಡಣಗುಡ್ಡೆಯ ಬಬ್ಬುಸ್ವಾಮಿ ಗುಡಿಯ ಬಳಿಯಲ್ಲಿರುವ ಆಯುರ್ವೇದ ಆಸ್ಪತ್ರೆಯಲ್ಲಿ (Ayurveda Hospital) ಕಟ್ಟಡದ ನವೀಕರಣ ಕಾರ್ಯ ನಡೆಯುತ್ತಿತ್ತು. ಅಡುಗೆ ಕೆಲಸದವರು ತಮ್ಮ ಕೆಲಸವನ್ನು ಆರಂಭಿಸುವ ವೇಳೆಯಲ್ಲಿ ಹಾಲ್‌ನಲ್ಲಿ ಶಬ್ದ ಕೇಳಿಬಂದಿದೆ. ಕೂಡಲೇ ಹೊರಗೆ ಓಡಿಬಂದು ನೋಡಿದಾಗಿ ಬೆಂಕಿ ಹೊತ್ತಿ ಉರಿಯುತ್ತಿತ್ತು.
ಅಡುಗೆ ಸಿಬ್ಬಂದಿಗಳು ಕೂಡಲೇ ವೈದ್ಯರಿಗೆ ಸುದ್ದಿ ಮುಟ್ಟಿಸಿದ್ದರು. ವೈದ್ಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿಗಳು ಎರಡು ಫೈರ್ ಇಂಜಿನ್ ಬಳಸಿಕೊಂಡು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. ಬೆಂಕಿ ಹೊತ್ತಿಕೊಂಡ ವೇಳೆಯಲ್ಲಿ ಮೊದಲ ಮಹಡಿಯಲ್ಲಿದ್ದ ಕೆಲಸಗಾರರು ಹೊರಗೆ ಓಡಿ ಬಂದಿದ್ದಾರೆ. ಇದರಿಂದಾಗಿ ಅನಾಹುತ ತಪ್ಪಿದಂತಾಗಿದೆ.

ಗಂಗೊಳ್ಳಿ : ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ದೇವಿಗೆ ಭಕ್ತರು ಸಮರ್ಪಣೆ ಮಾಡಿದ್ದ ಚಿನ್ನದ ಸರವನ್ನು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಗಂಗೊಳ್ಳಿ ಪೊಲೀಸರು ಯಶಸ್ವಿ ಆಗಿದ್ದಾರೆ. ಗಂಗೊಳ್ಳಿಯ ಶ್ರೀ ಮಹಾಂಕಾಳಿ ದೇವಸ್ಥಾನಕ್ಕೆ ಭಕ್ತರು ಸುಮಾರು 21 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ಅರ್ಪಣೆ ಮಾಡಿದ್ದಾರೆ. ಆದರೆ ದೇವಸ್ಥಾನದ ಅರ್ಚಕ ಶಿರಸಿಯ ಸಾಲಕಣಿ ಗ್ರಾಮದ ನರಸಿಂಹ್ ಭಟ್ ಎಂಬಾತ ಚಿನ್ನವನ್ನು ಕಳವು ಮಾಡಿದ್ದಾನೆ.
ಇದನ್ನೂ ಓದಿ : ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಕೆಎಂಎಫ್ ಮಹತ್ವದ ನಿರ್ಧಾರ : ತುಪ್ಪ ಸಾಗಿಸಲು ಜಿಪಿಎಸ್
ನವರಾತ್ರಿಯ ಹಿನ್ನೆಲೆಯಲ್ಲಿ ದೇವರ ಚಿನ್ನವನ್ನು ಶುದ್ದ ಮಾಡಲು ಕೇಳಿದಾಗ ಆತ ಚಿನ್ನವನ್ನು ನೀಡಿದ್ದಾನೆ. ಆದರೆ ದೇವಿಯ ಚಿನ್ನದ ಸರಕ್ಕೂ ಅರ್ಚಕ ನೀಡಿದ ಚಿನ್ನಕ್ಕೂ ವ್ಯತ್ಯಾಸ ಕಂಡು ಬಂದಿದೆ. ಈ ವೇಳೆ ಅನುಮಾನಗೊಂಡ ಆಡಳಿತ ಮಂಡಳಿಯವರು ಆತನನ್ನು ವಿಚಾರಿಸಿದಾಗ ತಾನು ಅಸಲಿ ಚಿನ್ನವನ್ನು ತೆಗೆದು ನಕಲಿ ಚಿನ್ನವನ್ನು ಇರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಪ್ರಕರಣ ದಾಖಲು ಮಾಡಿಕೊಂಡಿರುವ ಗಂಗೊಳ್ಳಿ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ :ತಾಯಿಯ ತಿಥಿಗೆ ಬಂದಿದ್ದ ಉದ್ಯಮಿಯ ಭೀಕರ ಹತ್ಯೆ : ಶೌಚಾಲಯದಲ್ಲಿದ್ದ ಪತ್ನಿಯೂ ಗಂಭೀರ
Udupi Dhanvantari Ayurveda Hospital fire Accident