ಬೆಂಗಳೂರು : ಕೊರೊನಾ ವೈರಸ್ ಸೋಂಕಿನಿಂದಾಗಿ ಕಿರುತೆರೆ ಹಾಗೂ ಕನ್ನಡ ಸಿನಿಮಾ ರಂಗ ಸಂಕಷ್ಟಕ್ಕೆ ಸಿಲುಕಿದೆ. ಸಮಸ್ಯೆಗಳನ್ನು ನಿವಾರಿಸಿ ಚಲನಚಿತ್ರೋದ್ಯಮ ಪುನಶ್ಚೇತನದ ಕುರಿತು ಸ್ಯಾಂಡಲ್ ವುಡ್ ಸ್ಟಾರ್ ನಟರು, ನಟ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಸಭೆ ನಡೆಸಿ ಚರ್ಚೆ ನಡೆಸಿದರು.

ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಸಿಟಿ ರವಿ ಪಾಲ್ಗೊಂಡಿದ್ದರು. ಚಿತ್ರಮಂದಿರ ಓಪನ್ ಮಾಡುವುದು, ತೆರಿಗೆ ವಿನಾಯಿತಿಯ ಕುರಿತು ಕಲಾವಿದರು ಹಾಗೂ ನಿರ್ಮಾಪಕರು ಸಚಿವರಲ್ಲಿ ಮನವಿ ಮಾಡಿದ್ದಾರೆ.

ಹಿರಿಯ ನಟರಾದ ರವಿಚಂದ್ರನ್, ನಟ ಪುನೀತ್ ರಾಜ್‍ಕುಮಾರ್, ಉಪೇಂದ್ರ, ದುನಿಯಾ ವಿಜಯ್, ರಕ್ಷಿತ್ ಶೆಟ್ಟಿ, ಯಶ್, ರಮೇಶ್ ಅರವಿಂದ್, ಶ್ರೀಮುರಳಿ, ಗಣೇಶ್ ಹಾಗೂ ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಕಾರ್ತಿಕ್ ಗೌಡ, ಸೂರಪ್ಪ ಬಾಬು ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಕುರಿತು ಮಾತನಾಡಿದ ಸಚಿವ ಸಿ.ಟಿ.ರವಿ, ಜಿಮ್ ಮತ್ತು ಚಿತ್ರಮಂದಿರ ಪುನರಾರಂಭದ ಕುರಿತು ಕೇಂದ್ರ ಸರ್ಕಾರದ ನಿರ್ಧಾರ ಕೈಗೊಳ್ಳಲಿದೆ. ಈಗಾಗಳೇ ಚಿತ್ರಮಂದಿರದ ಮಾಲೀಕರೊಂದಿಗೆ ಮಾತನಾಡಿದ್ದು, ಈ ಕುರಿತಂತೆ ಸಿಎಂ ಬಳಿ ಚರ್ಚಿಸಿದ್ದೇನೆ. ಕನ್ನಡ ಚಿತ್ರರಂಗದ ಬಗ್ಗೆ ನನಗೂ ಕಾಳಜಿ ಇದೆ ಎಂದು ಹೇಳಿದ್ದಾರೆ.