ಭಾನುವಾರ, ಏಪ್ರಿಲ್ 27, 2025
HomeCrimeNew Mobile Sim Scam : ಮೊಬೈಲ್‌ಗೆ ಹೊಸ ಸಿಮ್‌ ಹಾಕಿದ ಟೆಕ್ಕಿ : ಖಾತೆಯಲ್ಲಿದ್ದ...

New Mobile Sim Scam : ಮೊಬೈಲ್‌ಗೆ ಹೊಸ ಸಿಮ್‌ ಹಾಕಿದ ಟೆಕ್ಕಿ : ಖಾತೆಯಲ್ಲಿದ್ದ 2.80 ಕೋಟಿ ಮಂಗಮಾಯ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಲೇ ಇರುತ್ತದೆ. ಬೆಂಗಳೂರು ಪೊಲೀಸರು ಮತ್ತೊಂದು ಕೇಸ್‌ನಲ್ಲಿ ಸೈಬರ್‌ ಡಿಜಿಟಲ್‌ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 11 ಕೋಟಿ ವಂಚಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

ಬೆಂಗಳೂರು : New Mobile Sim Scam : ಇತ್ತೀಚಿನ ವರ್ಷಗಳಗಳಲ್ಲಿ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅದ್ರಲ್ಲೂ ಸೈಬರ್‌ ಪೊಲೀಸ್‌ ಠಾಣೆಗಳಲ್ಲಿ ದಿನಕ್ಕೊಂದು ಪ್ರಕರಣಗಳು ದಾಖಲಾಗುತ್ತಿದೆ. ಆದರೆ ವಂಚಕರ ಮಾತ್ರ ಪೊಲೀಸರು ಬಲೆಗೆ ಬೀಳುತ್ತಿಲ್ಲ. ಅಷ್ಟೇ ಅಲ್ಲಾ ವಂಚಕರು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಲೇ ಇದ್ದಾರೆ. ಇದೀಗ ಬೆಂಗಳೂರಿನ ಸಾಫ್ಟ್‌ವೇರ್‌ ಇಂಜಿನಿಯರ್‌ ತನ್ನ ಮೊಬೈಲ್‌ಗೆ ಹೊಸ ಸಿಮ್‌ ಹಾಕಿದ ತಪ್ಪಿದೆ ಬ್ಯಾಂಕ್‌ ಖಾತೆಯಲ್ಲಿದ್ದ 2.80 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ವಾಸವಾಗಿದ್ದ ಟೆಕ್ಕಿಯೋರ್ವರಿಗೆ ಪಾರ್ಸೆಲ್‌ ಬಂದಿತ್ತು. ಅದನ್ನು ತೆಗೆದು ನೋಡಿದಾಗ ಅದ್ರಲ್ಲಿ ಒಂದು ಹೊಸ ಸಿಮ್‌ ಕಾರ್ಡ್‌ ಇತ್ತು. ಗಿಫ್ಟ್‌ ಸ್ವೀಕರಿಸಿದ ನಂತರ ಸಾಫ್ಟ್‌ವೇರ್‌ ಇಂಜಿನಿಯರ್‌ತನ್ನ ಮೊಬೈಲ್‌ ಗೆ ಸಿಮ್‌ ಅಳವಡಿಕೆ ಮಾಡಿದ್ದಾರೆ. ಕೂಡಲೇ ಟೆಕ್ಕಿಯ ಖಾತೆಯಲ್ಲಿದ್ದ 2.80 ಕೋಟಿ ರೂಪಾಯಿ ಬ್ಯಾಂಕ್‌ ಖಾತೆಯಿಂದ ವರ್ಗಾವಣೆ ಆಗಿದೆ.

ಇದನ್ನೂ ಒದಿ : Tirumala Vaikunta Ekadasi 2025: ತಿರುಪತಿಯಲ್ಲಿ ಕಾಲ್ತುಳಿತಕ್ಕೆ ನಾಲ್ವರು ಭಕ್ತರು ಬಲಿ : ವೈಕುಂಠ ದರ್ಶನಕ್ಕೆ ಟೋಕನ್‌ ಹಂಚಿಕೆ ವೇಳೆ ದುರಂತ

ಸೈಬರ್‌ ವಂಚಕರು ಮೊದಲೇ ಪ್ಲಾನ್‌ ಮಾಡಿಕೊಂಡು ಆತನಿಗೆ ಸಿಮ್‌ ಕಾರ್ಡ್‌ ಕಳುಹಿಸಿಕೊಟ್ಟಿದ್ದರು. ಸಿಮ್‌ ಕಾರ್ಡ್‌ ಹಾಕಿದ ನಂತರ ಕೆಲವು ಆಪ್‌ ಗಳನ್ನು ಬಳಸಿಕೊಂಡು ಆತನ ಎಲ್ಲಾ ಮಾಹಿತಿ ಪಡೆದುಕೊಂಡಿದ್ದಾರೆ. ಟೆಕ್ಕಿ ಎಫ್‌ ಡಿಯಲ್ಲಿ ಕೋಟ್ಯಾಂತರ ರೂಪಾಯಿ ಇಟ್ಟಿರುವುದನ್ನು ಖಚಿತ ಪಡಿಸಿಕೊಂಡು, ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.

ಇತ್ತ ಎಫ್‌ಡಿ ಖಾತೆಯಲ್ಲಿ ಇರಿಸಿದ ಹಣ ವರ್ಗಾವಣೆ ಆಗಿರುವ ಕುರಿತು ಮಾಹಿತಿ ಲಭ್ಯವಾಗುತ್ತಲೇ ಕೂಡಲೇ ಟೆಕ್ಕಿ ಬ್ಯಾಂಕ್‌ಗೆ ತೆರಳಿ ವಿಚಾರಿಸಿದ್ದಾನೆ. ಕೊನೆಗೆ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ ಇರುವ ಸೆನ್‌ ಠಾಣೆಗೆ ದೂರು ನೀಡಿದ್ದಾನೆ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Bangalore News Cyber Crime Software engineer Loses 2.8 crore in New Mobile Sim Scam
Image Credit to Original Source

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಲೇ ಇರುತ್ತದೆ. ಬೆಂಗಳೂರು ಪೊಲೀಸರು ಮತ್ತೊಂದು ಕೇಸ್‌ನಲ್ಲಿ ಸೈಬರ್‌ ಡಿಜಿಟಲ್‌ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 11 ಕೋಟಿ ವಂಚಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಟೆಕ್ಕಿ ವಿಜಯ್‌ ಕುಮಾರ್‌ ಎಂಬರವನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ಪೊಲೀಸರಿಗೆ ದೂರು ನೀಡುತ್ತಲೇ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ : HMPV virus : ಭಾರತದಲ್ಲಿ HMPV ವೈರಸ್ ಪ್ರಕರಣ ಹೆಚ್ಚಳ, ಜಾರಿಯಾಗುತ್ತಾ ಲಾಕ್‌ಡೌನ್‌ ?

ಆರೋಪಿಗಳಾದ ತರುಣ್‌ ನಟಾನಿ, ಕರಣ್‌, ಧವಲ್‌ ಷಾ ಟೆಕ್ಕಿ ವಿಜಯ್‌ ಕುಮಾರ್‌ ಆರಂಭದಲ್ಲಿ 2 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದರು. ಆದರೆ ಅಷ್ಟಕ್ಕೆ ಸುಮ್ಮನಾಗದೇ ಬಾರಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ವಿಜಯ ಕುಮಾರ್‌ ಅವರು ನೀಡಿದ ದೂರನ್ನು ಆಧರಿಸಿ ತನಿಖೆಗೆ ಇಳಿದ ಪೊಲೀಸರಿಗೆ ಗುಜರಾತ್‌ ನ ಚಿನ್ನದ ವ್ಯಾಪಾರಿಯ ಮಾಹಿತಿ ಲಭಿಸಿದೆ. ಆತನನ್ನು ವಿಚಾರಿಸಿದ ನಂತರ ಸೈಬರ್‌ ವಂಚಕರು ವಂಚಿಸಿದ ಹಣದಲ್ಲಿ ಚಿನ್ನಾಭರಣ ಖರೀದಿಸಿ ಎಸ್ಕೇಪ್‌ ಆಗಿರುವುದು ಬೆಳಕಿಗೆ ಬಂದಿದೆ.

Bangalore News Cyber Crime Software engineer Loses 2.8 crore in New Mobile Sim Scam

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular