ಶನಿವಾರ, ಏಪ್ರಿಲ್ 26, 2025
HometechnologyAirtel new recharge plan 2025 : ಜಿಯೋ ಬೆನ್ನಲ್ಲೇ ಕಡಿಮೆ ಬೆಲೆಯ ಹೊಸ ರಿಚಾರ್ಜ್‌...

Airtel new recharge plan 2025 : ಜಿಯೋ ಬೆನ್ನಲ್ಲೇ ಕಡಿಮೆ ಬೆಲೆಯ ಹೊಸ ರಿಚಾರ್ಜ್‌ ಫ್ಲ್ಯಾನ್‌ ಘೋಷಿಸಿದ ಏರ್‌ಟೆಲ್

- Advertisement -

Airtel new recharge plan 2025 : ಮೊಬೈಲ್‌ ಗ್ರಾಹಕರಿಗೆ ಮೊಬೈಲ್‌ ಕಂಪೆನಿಗಳು ಸಾಲು ಸಾಲು ಹೊಸ ಯೋಜನೆಗಳನ್ನು ಪರಿಚಯಿಸುತ್ತಿವೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ನಿರ್ದೇಶನದ ಬೆನ್ನಲ್ಲೇ ರಿಲಯನ್ಸ್ ಜಿಯೋ ನಂತರ, ಭಾರ್ತಿ ಏರ್‌ಟೆಲ್ ತನ್ನ ಬಳಕೆದಾರರಿಗಾಗಿ ರೂ.499 ಮತ್ತು ರೂ.1959ರೂ.ನ ಹೊಸ ಹೊಸ ಎರಡು ರೀಚಾರ್ಜ್ ಯೋಜನೆಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಟ್ರಾಯ್‌ ಆದೇಶಿಸಿರುವ ಹೊಸ ರೂಲ್ಸ್‌ ಪ್ರಕಾರ. ಡೇಟಾ ಅಗತ್ಯವಿಲ್ಲದ ವ್ಯಕ್ತಿಗಳಿಗೆ ಕೇವಲ ಸಂದೇಶ ಮತ್ತು ಧ್ವನಿ ಕರೆಗಳಿಗೆ ಮಾತ್ರವೇ ಲಭ್ಯವಿರುವ ರಿಚಾರ್ಜ್‌ ಫ್ಲ್ಯಾನ್‌ಗಳನ್ನು ಪರಿಚಯಿಸುವಂತೆ ಸೂಚಿಸಿತ್ತು. ಅಂತೆಯೇ ಇದೀಗ ಟೆಲಿಕಾಂ ಕಂಪೆನಿಗಳು ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ.

Airtel new recharge plan 2025 : ಏರ್‌ಟೆಲ್ ರೂ.499 ರೀಚಾರ್ಜ್ ಯೋಜನೆ :

ಏರ್‌ಟೆಲ್‌ನ ಆರಂಭಿಕ ಹಂತದ ಧ್ವನಿ ಮತ್ತು SMS ಮಾತ್ರ ಯೋಜನೆ ರೂ.499 ರಿಂದ ಪ್ರಾರಂಭವಾಗುತ್ತದೆ. ಈ ಯೋಜನೆಯು ಅನಿಯಮಿತ ಧ್ವನಿ ಕರೆಗಳು ಮತ್ತು 900 SMS ಜೊತೆಗೆ 84 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಅಲ್ಲದೇ ಈ ಯೋಜನೆಯಲ್ಲಿ 3 ತಿಂಗಳ ಉಚಿತ ಅಪೊಲೊ 24 ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಉಚಿತ ಹೆಲೋಟ್ಯೂನ್ಸ್ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ನೀವು ಏರ್‌ಟೆಲ್ ಸೈಟ್ ಅಥವಾ ಅಪ್ಲಿಕೇಶನ್‌ನಲ್ಲಿರುವ ರೀಚಾರ್ಜ್ ವಿಭಾಗದಲ್ಲಿ ಈ ಹೊಸ ಯೋಜನೆಗಳನ್ನು ಕಾಣಬಹುದು.

Airtel new recharge plan 2025 Airtel announces new low-cost recharge plan after Jio
Image Credit to Original SOurce

ಏರ್‌ಟೆಲ್ ರೂ. 1959 ರೀಚಾರ್ಜ್ ಯೋಜನೆಯ ವಿವರಗಳು:

ಏರ್‌ಟೆಲ್ ವಾರ್ಷಿಕ ಧ್ವನಿ ಮತ್ತು SMS ಮಾತ್ರ ಯೋಜನೆಯನ್ನು ಇದೀಗ ರೂ.1959 ಗೆ ಏರಿಕೆ ಮಾಡಲಾಗಿದೆ. ಈ ಏರ್‌ಟೆಲ್ ಯೋಜನೆಯಲ್ಲಿ 365 ದಿನಗಳ ಮಾನ್ಯತೆಯನ್ನು ಒಳಗೊಂಡಿದೆ. ಏರ್‌ಟೆಲ್‌ ಕಂಪೆನಿಯ ಈ ಹೊಸ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆಗಳು ಮತ್ತು 3600 SMS ಅನ್ನು ಪಡೆಯಲಿದ್ದೀರಿ. 3 ತಿಂಗಳ ಉಚಿತ ಅಪೊಲೊ 24 ಸಹ 7 ಸರ್ಕಲ್ ಮತ್ತು ಉಚಿತ ಹೆಲೋಟ್ಯೂನ್ಸ್ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ಪಡೆಯಲಿದ್ದೀರಿ.

ಇದನ್ನೂ ಓದಿ : Jiophone Prima 2: ಕೇವಲ 2799ರೂ.ಗೆ ಸಿಗಲಿದೆ 4G ಮೊಬೈಲ್‌

Airtel new recharge plan 2025 Airtel announces new low-cost recharge plan after Jio
Image Credit to Original SOurce

ರಿಲಯನ್ಸ್ ಜಿಯೋ ಹೊಸ ರೀಚಾರ್ಜ್ ಯೋಜನೆ:

ರಿಲಯನ್ಸ್ ಜಿಯೋ ಇದೇ ರೀತಿಯ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ಜಿಯೋ ರೂ. 458 ಯೋಜನೆಯನ್ನು ತಂದಿದೆ. ಆರಂಭಿಕ ಹಂತದ ಯೋಜನೆಯಾಗಿದ್ದು, ಇದರಲ್ಲಿ ಬಳಕೆದಾರರಿಗೆ ಅನಿಯಮಿತ ಧ್ವನಿ ಕರೆಗಳು ಮತ್ತು 1000 SMS ಸೌಲಭ್ಯವನ್ನು ನೀಡಲಾಗುತ್ತದೆ. ಈ ಯೋಜನೆಯ ಮಾನ್ಯತೆ 84 ದಿನಗಳು. ಜಿಯೋ ಪ್ಲಾನ್ 1958 ಅನ್ನು ಸಹ ತಂದಿದೆ. ಅಲ್ಲದೇ ಬರೋಬ್ಬರಿ 365 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ.

ಇದನ್ನೂ ಓದಿ : BSNL ಬಂಪರ್ ಆಫರ್: ಕೇವಲ 397 ರೂ.ಗೆ 5 ತಿಂಗಳು ಅನಿಯಮಿತ ಡೇಟಾ, ಕರೆ

ಈ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಅನಿಯಮಿತ ಧ್ವನಿ ಕರೆಗಳು ಮತ್ತು 3,600 SMS ಅನ್ನು ಸಹ ನೀಡಲಾಗುತ್ತದೆ. ಹೆಚ್ಚುವರಿಯಾಗಿ ಜಿಯೋ ಟಿವಿ, ಜಿಯೋ ಸಿನಿಮಾ (ಪ್ರೀಮಿಯಂ ಅಲ್ಲದ) ಮತ್ತು ಜಿಯೋಕ್ಲೌಡ್‌ನಂತಹ ಜಿಯೋ ಅಪ್ಲಿಕೇಶನ್‌ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

Airtel new recharge plan 2025 Airtel announces new low-cost recharge plan after Jio

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular