ಭಾನುವಾರ, ಏಪ್ರಿಲ್ 27, 2025
Homehoroscopeದಿನಭವಿಷ್ಯ ಫೆಬ್ರವರಿ 13 2025 : ಮೇಷ, ಸಿಂಹ ರಾಶಿಗೆ ಅಧಿಕ ಲಾಭ

ದಿನಭವಿಷ್ಯ ಫೆಬ್ರವರಿ 13 2025 : ಮೇಷ, ಸಿಂಹ ರಾಶಿಗೆ ಅಧಿಕ ಲಾಭ

Soubhagya Yoga : ಮೇಷರಾಶಿ, ಸಿಂಹ ರಾಶಿ ಸೇರಿದಂತೆ ಐದು ರಾಶಿಗಳಿಗೆ ಆರ್ಥಿಕ ವಿಷಯದಲ್ಲಿ ಡಬಲ್‌ ಲಾಭ ಸಿಗಲಿದೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು ಹನ್ನೆರಡು ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

- Advertisement -

Horoscope Today February 13 : ದಿನಭವಿಷ್ಯ ಫೆಬ್ರವರಿ 13 2025 ಗುರುವಾರ. ಕುಂಭ ರಾಶಿಯಲ್ಲಿಂದು ಶನಿ, ಸೂರ್ಯ ಮತ್ತು ಬುಧನ ಸಂಯೋಗವಾಗಲಿದೆ. ಇದರಿಂದ ತ್ರಿಗ್ರಹಿ ಯೋಗ ಉಂಟಾಗಲಿದ್ದು, ಶೋಭನ ಯೋಗವು ಕೆಲವು ರಾಶಿಗಳಿಗೆ ಅಧಿಕ ಲಾಭವನ್ನು ತಂದುಕೊಡಲಿದೆ. ಮೇಷರಾಶಿ, ಸಿಂಹ ರಾಶಿ ಸೇರಿದಂತೆ ಐದು ರಾಶಿಗಳಿಗೆ ಆರ್ಥಿಕ ವಿಷಯದಲ್ಲಿ ಡಬಲ್‌ ಲಾಭ ಸಿಗಲಿದೆ. ಮೇಷರಾಶಿಯಿಂದ ಮೀನ ರಾಶಿಯ ವರೆಗೆ ಒಟ್ಟು ಹನ್ನೆರಡು ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷರಾಶಿ ದಿನಭವಿಷ್ಯ
ಶ್ರಮವಹಿಸಿ ಕೆಲಸ ಕಾರ್ಯಗಳನ್ನು ಮಾಡುವುದರಿಂದ ಉತ್ತಮ ಫಲಿತಾಂಶ ದೊರೆಯಲಿದೆ. ಮನಸಿಗೆ ಕೆಲವೊಂದು ವಿಚಾರಗಳು ಗೊಂದಲವನ್ನು ಉಂಟು ಮಾಡಲಿದೆ. ಹಣಕಾಸಿನ ವ್ಯವಹಾರದಲ್ಲಿ ನೀವಿಂದು ಲಾಭವನ್ನು ಪಡೆಯಲಿದ್ದೀರಿ. ಕುಟುಂಬದ ವಿಚಾರದಲ್ಲಿ ಎಚ್ಚರವಾಗಿ ಇರಬೇಕು.

ವೃಷಭರಾಶಿ ದಿನಭವಿಷ್ಯ
ಕುಟುಂಬದ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಎದುರಿಸಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಸಿಗಲಿದೆ. ಮೇಲಾಧಿಕಾರಿಗಳು ಇಂದು ನಿಮ್ಮ ಸಹಾಯಕ್ಕೆ ಇರಲಿದ್ದೀರಿ. ಕೆಲಸ ಕಾರ್ಯಗಳನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲಿದ್ದೀರಿ.

ಮಿಥುನರಾಶಿ ದಿನಭವಿಷ್ಯ
ಸಂಗಾತಿ ನಿಮಗೆ ಕಹಿಯ ವಿಷಯವನ್ನು ಹೇಳಲಿದ್ದಾರೆ. ಸ್ನೇಹಿತರು ಹಾಗೂ ಸಂಬಂಧಿಕರ ಜೊತೆಗೆ ಸಂತೋಷದ ಕ್ಷಣಗಳನ್ನು ಕಳೆಯಲಿದ್ದೀರಿ. ಸಂಜೆಯ ವೇಳೆಗೆ ಕುಟುಂಬ ಸದಸ್ಯರ ಜೊತೆಗೆ ಶುಭ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದೀರಿ. ದೂರದ ಬಂಧುಗಳ ಆಗಮನ ಮನಸಿಗೆ ಖುಷಿಯನ್ನು ತರಲಿದೆ.

ಕರ್ಕಾಟಕರಾಶಿ ದಿನಭವಿಷ್ಯ
ಕೆಲವು ವಿಚಾರಗಳಲ್ಲಿ ನೀವಿಂದು ಎಚ್ಚರವಾಗಿ ಇರಬೇಕು. ಸಣ್ಣ ವ್ಯವಹಾರ ಮಾಡುವವರು ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೂಡಿಕೆ ಮಾಡಿದ್ದು ನಿಮಗೆ ದೊಡ್ಡ ಮಟ್ಟದ ಲಾಭವನ್ನು ತಂದುಕೊಡಲಿದೆ. ಕೆಲಸದ ಸ್ಥಳದಲ್ಲಿ ನೀವಿಂದು ಸಿಹಿಯ ಮಾತುಗಳನ್ನು ಕೇಳಲಿದ್ದೀರಿ.

ಸಿಂಹರಾಶಿ ದಿನಭವಿಷ್ಯ
ತಾಯಿಯ ಆರೋಗ್ಯ ಇಂದು ಹದಗೆಡಲಿದೆ. ಕೆಲಸದಲ್ಲಿ ವಿರೋಧಿಗಳಿಂದ ಕಿರಿಕಿರಿ ಅನುಭವಿಸಲಿದ್ದೀರಿ. ವ್ಯಾಪಾರಿಗಳು ಇಂದು ಮಿಶ್ರ ಫಲಿತಾಂಶವನ್ನು ಪಡೆಯಲಿದ್ದೀರಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ.

ಇದನ್ನೂ ಓದಿ : Rohit Sharma Retirement : ಚಾಂಪಿಯನ್ಸ್ ಟ್ರೋಫಿಯಲ್ಲಿ ರೋಹಿತ್ ಶರ್ಮಾ ನಿವೃತ್ತಿ ? ಹೇಳಿದ್ದೇನು ಹಿಟ್‌ಮ್ಯಾನ್

ಕನ್ಯಾರಾಶಿ ದಿನಭವಿಷ್ಯ
ಹೊಸ ವ್ಯವಹಾರವನ್ನು ಆರಂಭಿಸುವ ಮೊದಲು ಹಲವು ಬಾರಿ ಯೋಚಿಸಿ. ಉದ್ಯೋಗವನ್ನು ಬದಲಾಯಿಸುವ ಯೋಚನೆಯಲ್ಲಿದ್ದರೆ ಇಂದು ಅನುಕೂಲಕರ. ಕುಟುಂಬದ ಖರ್ಚುಗಳನ್ನು ಪೂರೈಸಲು ಸಾಧ್ಯವಿಲ್ಲ. ಮಾನಸಿಕ ಒತ್ತಡವನ್ನು ಎದುರಿಸಲಿದ್ದೀರಿ.

ತುಲಾರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳಲ್ಲಿ ನೀವಿಂದು ಯಶಸ್ವಿ ಆಗುತ್ತೀರಿ. ಸ್ನೇಹಿತರಿಂದ ಮೋಸ ಹೋಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರವಾಗಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಲಿದ್ದೀರಿ. ತಂದೆಯ ಮಾರ್ಗದರ್ಶನದಲ್ಲಿ ಕೆಲಸ ಕಾರ್ಯಗಳಲ್ಲಿ ಯಶಸ್ವಿ ಆಗುತ್ತೀರಿ.

ವೃಶ್ಚಿಕರಾಶಿ ದಿನಭವಿಷ್ಯ
ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡುತ್ತೀರಿ. ಕುಟುಂಬದಲ್ಲಿ ಅಶಾಂತಿಯ ವಾತಾವರಣ ಇರಲಿದೆ. ಕುಟುಂಬದ ಹಿರಿಯ ಸದಸ್ಯರಿಂದ ಸಹಾಯ ದೊರೆಯಲಿದೆ. ವ್ಯವಹಾರದಲ್ಲಿ ಯಾವುದೇ ರಿಸ್ಕ್‌ ತೆಗೆದುಕೊಂಡರೆ ಅದು ನಿಮಗೆ ಪ್ರಯೋಜನಕ್ಕೆ ಬರಲಿದೆ.

ಇದನ್ನೂ ಓದಿ : Apple iPhone 16 Pro : ಆಪಲ್ ಐಫೋನ್ 16 ಪ್ರೊ ಬೆಲೆಯಲ್ಲಿ ಭಾರಿ ಇಳಿಕೆ

ಧನಸ್ಸುರಾಶಿ ದಿನಭವಿಷ್ಯ
ಕೆಲಸ ಕಾರ್ಯಗಳಲ್ಲಿ ತೊಂದರೆಯನ್ನು ಎದುರಿಸಲಿದ್ದೀರಿ. ಯಾವುದೇ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಆತುರ ಪಡಬೇಡಿ. ವ್ಯವಹಾರದಲ್ಲಿ ಅನಿರೀಕ್ಷಿತ ಫಲಿತಾಂಶವನ್ನು ಪಡೆಯಲಿದ್ದೀರಿ. ಪ್ರೇಮ ಜೀವನವು ಸಂತೋಷದಿಂದ ಕೂಡಿರುತ್ತದೆ.

ಮಕರರಾಶಿ ದಿನಭವಿಷ್ಯ
ವ್ಯವಹಾರ ಕ್ಷೇತ್ರದಲ್ಲಿ ಇತರರಿಗಿಂತ ಅಧಿಕ ಲಾಭವನ್ನು ಪಡೆಯುತ್ತೀರಿ. ಉದ್ಯೋಗಿಗಳು ಇತರ ವ್ಯವಹಾರವನ್ನು ಆರಂಭಿಸಲು ಯೋಚಿಸುತ್ತೀದ್ದರೆ ಅದು ನಿಮಗೆ ಲಾಭವನ್ನು ತಂದುಕೊಡಲಿದೆ. ಕುಟುಂಬಸ್ಥರ ಜೊತೆಗೆ ದೇವರ ದರ್ಶನ ಮಾಡುತ್ತೀರಿ.

ಕುಂಭರಾಶಿ ದಿನಭವಿಷ್ಯ
ಉದ್ಯೋಗಿಗಳಿಗೆ ಇಂದು ಬಡ್ತಿ ಸಿಗುವ ಸಾಧ್ಯತೆಯಿದೆ. ಶತ್ರುಗಳು ನಿಮ್ಮ ಕೆಲಸವನ್ನು ಹಾಳು ಮಾಡಲು ಪ್ರಯತ್ನಿಸಿ. ಬಿಡುವಿಲ್ಲದ ವೇಳಾಪಟ್ಟಿಯ ನಡುವಲ್ಲೂ ಪ್ರೇಮ ಜೀವನಕ್ಕೆ ಸಮಯ ಮೀಸಲಿಡುವಿರಿ. ಇದು ನಿಮಗೆ ಸಂತೋಷವನ್ನು ನೀಡುತ್ತದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಲಿದೆ.

ಮೀನರಾಶಿ ದಿನಭವಿಷ್ಯ
ಸಂಬಂಧಿಕರಿಂದ ಆರ್ಥಿಕ ಲಾಭ ದೊರೆಯಲಿದೆ. ವ್ಯವಹಾರದಲ್ಲಿನ ಹೊಸ ಸವಾಲುಗಳನ್ನು ಧೈರ್ಯದಿಂದ ಎದುರಿಸಿ. ಕೆಲಸದ ವೇಳೆಯಲ್ಲಿ ವಿಶ್ರಾಂತಿಯನ್ನು ಪಡೆಯುತ್ತೀರಿ. ದೈಹಿಕ ಆರೋಗ್ಯ ಸಮಸ್ಯೆ ನಿಮ್ಮನ್ನು ಇಂದು ಕಾಡಲಿದೆ.

Horoscope Today February 13 Zodiac Signs get Soubhagya Yoga

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular