Horoscope Today February 14 : ದಿನಭವಿಷ್ಯ ಫೆಬ್ರವರಿ 14 ಶುಕ್ರವಾರ. ಕುಂಭರಾಶಿಯಲ್ಲಿ ಸೂರ್ಯನ ಸಂಚಾರ ಆರಂಭವಾಗಲಿದ್ದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಲವು ರಾಶಿಯವರಿಗೆ ಅನುಕೂಲಕರ. ಜೊತೆಗೆ ಶನಿ ದೇವರು ಕೂಡ ಇದೇ ರಾಶಿಯಲ್ಲಿಯೇ ಸಂಚಾರ ಮಾಡುತ್ತಿದ್ದಾರೆ. ಅಲ್ಲದೇ ಬುಧ ಕೂಡ ಕುಂಭರಾಶಿಯಲ್ಲಿ ಸಂಚರಿಸುತ್ತಿರುವುದರಿಂದ ತ್ರಿಗ್ರಹಿ ಯೋಗ ಉಂಟಾಗಲಿದೆ. ಹಣಕಾಸಿನ ವಿಚಾರದಲ್ಲಿ ಕೆಲವು ರಾಶಿಯವರಿಗೆ ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಇಂದಿನ ದ್ವಾದಶ ರಾಶಿಗಳ ದಿನಭವಿಷ್ಯ ಹೇಗಿದೆ ತಿಳಿಯೋಣಾ.
ಮೇಷರಾಶಿ ದಿನಭವಿಷ್ಯ
ಮೇಷರಾಶಿಯವರಿಗೆ ಸರಕಾರಿ ಕ್ಷೇತ್ರಗಳಲ್ಲಿ ಅತ್ಯುತ್ತಮ ಯಶಸ್ಸು ಸಾಧಿಸುತ್ತಾರೆ. ಉದ್ಯೋಗಿಗಳು ಶುಭ ಸಮಾಚಾರವನ್ನು ಕೇಳಲಿದ್ದಾರೆ. ಉದ್ಯಮಿಗಳಿಗೆ ಬಾರೀ ಲಾಭವಾಗುವ ಸಾಧ್ಯತೆಯಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ನಿರುದ್ಯೋಗಿಗಳು ಹೊಸ ಉದ್ಯೋಗದ ಅವಕಾಶ ದೊರೆಯಲಿದೆ.
ವೃಷಭರಾಶಿ ದಿನಭವಿಷ್ಯ
ಮಿಥುನರಾಶಿಯವರು ಅತೀ ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ. ಕೌಟುಂಬಿಕವಾಗಿ ಸಂತೋಷದ ದಿನವಾಗಿರುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಉದ್ಯೋಗಿಗಳಿಗೆ ಉತ್ತಮ ಅವಕಾಶ ದೊರೆಯಲಿದೆ. ವಿವಾಹಿತರಿಗೆ ಸಂಗಾತಿಯಿಂದ ಸಂಪೂರ್ಣ ಬೆಂಬಲ ದೊರೆಯಲಿದೆ.
ಮಿಥುನರಾಶಿ ದಿನಭವಿಷ್ಯ
ಕುಟುಂಬದ ಸದಸ್ಯರ ಜೊತೆಗೆ ಸಂತಸದ ಕ್ಷಣಗಳನ್ನು ಕಳೆಯುವಿರಿ. ಸಂಗಾತಿಯೊಂದಿಗೆ ನೋವಿನ ವಿಚಾರಗಳನ್ನು ಹಂಚಿಕೊಳ್ಳಬೇಡಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.
ಕರ್ಕಾಟಕರಾಶಿ ದಿನಭವಿಷ್ಯ
ಕೆಲವೊಂದು ವಿಚಾರದಲ್ಲಿ ನೀವು ಜಾಗರೂಕರಾಗಿ ಇರಬೇಕು. ಕೆಲಸದ ಸ್ಥಳದಲ್ಲಿ ಸಿಹಿ ಮಾತುಗಳನ್ನು ಆಡುವುದರಿಂದ ಅನುಕೂಲ. ಯಾವುದೇ ಕೆಲಸ ಕಾರ್ಯಗಳನ್ನು ಮಾಡುವುದರಿಂದ ನಿಮಗೆ ಯಶಸ್ಸು ದೊರೆಯಲಿದೆ.
ಸಿಂಹರಾಶಿರಾಶಿ ದಿನಭವಿಷ್ಯ
ಆರ್ಥಿಕವಾಗಿ ನೀವಿಂದು ಹೆಚ್ಚಿನ ಲಾಭವನ್ನು ಪಡೆಯುತ್ತೀರಿ. ಉದ್ಯಮಿಗಳಿಗೆ ಪ್ರಗತಿ ಕಂಡು ಬರಲಿದೆ. ವೈಯಕ್ತಿಕ ಜೀವನವು ಸಂತೋಷದಿಂದ ಕೂಡಿರುತ್ತದೆ. ವೃತ್ತಿ ಜೀವನದಲ್ಲಿ ಪ್ರಗತಿ ನಿಮಗೆ ಸಂತಸವನ್ನು ತರಲಿದೆ. ವೈವಾಹಿಕ ಜೀವದಲ್ಲಿ ನೆಮ್ಮದಿ. ಆರ್ಥಿಕ ಪರಿಸ್ಥಿತಿಯು ಸುಧಾರಣೆಯನ್ನು ಕಾಣಲಿದೆ.
ಕನ್ಯಾರಾಶಿ ದಿನಭವಿಷ್ಯ
ಸೂರ್ಯನ ಸಂಚಾರದಿಂದ ನಿಮ್ಮ ಆದಾಯದಲ್ಲಿ ಪ್ರಗತಿ ಕಂಡು ಬರಲಿದೆ. ಮಾಡುವ ಪ್ರತಿಯೊಂದು ಕಾರ್ಯದಲ್ಲಿಯೂ ಯಶಸ್ಸು ದೊರೆಯಲಿದೆ. ಉದ್ಯಮಿಗಳು ಆರ್ಥಿಕವಾಗಿ ಪ್ರಗತಿ ಸಾಧಿಸಲಿದ್ದಾರೆ. ಹೂಡಿಕೆಯಿಂದಲೂ ಅಧಿಕ ಲಾಭ ದೊರೆಯಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.
ಇದನ್ನೂ ಓದಿ : ISPL 2025 Qualifier 1 : ಐಎಸ್‌ಪಿಎಲ್ ಫೈನಲ್‌ಗೆ ಏರಿದ ಮಾಝಿ ಮುಂಬೈ
ತುಲಾರಾಶಿ ದಿನಭವಿಷ್ಯ
ಇಂದು ನೀವು ಹೆಚ್ಚಾಗಿ ಮೌನವಾಗಿ ಇರುವುದು ಒಳಿತು. ಸ್ನೇಹಿತರ ವಿಚಾರದಲ್ಲಿ ನೀವು ಇಂದು ಹೆಚ್ಚು ಎಚ್ಚರಿಕೆಯಿಂದ ಇರಬೇಖು. ಇತರರಿಂದ ಮೋಸ ಹೋಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಾರೆ.
ವೃಶ್ಚಿಕರಾಶಿ ದಿನಭವಿಷ್ಯ
ಮನೆಯಲ್ಲಿ ಕೆಲವೊಂದು ವಿಚಾರದಲ್ಲಿ ಭಿನ್ನಾಭಿಪ್ರಾಯ ಕಂಡು ಬರಲಿದೆ. ಸಂಜೆಯ ವೇಳೆಗೆ ನೀವು ಶುಭ ಸಮಾಚಾರವನ್ನು ಕೇಳಲಿದ್ದಾರೆ. ಕುಟುಂಬದ ಹಿರಿಯ ಸಹಾಯದಿಂದ ಕೆಲವೊಂದು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಿದ್ದಾರೆ. ವ್ಯವಹಾರ ಕ್ಷೇತ್ರದಲ್ಲಿ ನೀವು ಎಚ್ಚರಿಕೆಯಿಂದ ಇರುವುದು ಮುಖ್ಯ.
ಧನಸ್ಸುರಾಶಿ ದಿನಭವಿಷ್ಯ
ಸಹೋದ್ಯೋಗಿಗಳ ಜೊತೆಗೆ ಯಾವುದೇ ಕಾರಣಕ್ಕೂ ವಾದಕ್ಕೆ ಇಳಿಯ ಬೇಡಿ. ವ್ಯವಹಾರಿಕವಾಗಿ ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ. ಕೌಟುಂಬಿಕ ಜೀವನದಲ್ಲಿ ಗೌರವ ಪಡೆಯಲಿದ್ದೀರಿ. ಕೆಲಸದಲ್ಲಿ ನೀವು ಕೆಲವೊಂದು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : ಉಡುಪಿ : ಬಸ್ ಚಲಾಯಿಸುತ್ತಿದ್ದ ವೇಳೆ ಚಾಲಕನಿಗೆ ಎದೆನೋವು, ತಪ್ಪಿತು ಬಾರೀ ದುರಂತ
ಮಕರರಾಶಿ ದಿನಭವಿಷ್ಯ
ವ್ಯವಹಾರಿಕವಾಗಿ ಹೆಚ್ಚಿನ ಲಾಭವನ್ನು ಪಡೆಯಲಿದ್ದೀರಿ. ಉದ್ಯೋಗಿಗಳು ಹೊಸ ವ್ಯವಹಾರವನ್ನು ಆರಂಭಿಸಲು ಯೋಚಿಸುತ್ತಿದ್ದರೆ ಇದು ಸಕಾಲ. ಕುಟುಂಬದವರ ಜೊತೆಗೆ ತೀರ್ಥಕ್ಷೇತ್ರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಿದೆ.
ಕುಂಭರಾಶಿ ದಿನಭವಿಷ್ಯ
ಶತ್ರುಗಳು ನಿಮ್ಮ ಕೆಲಸವನ್ನು ಹಾಳು ಮಾಡಲು ಯತ್ನಿಸುತ್ತಾರೆ. ಪ್ರೀತಿಯ ಜೀವನವು ಸಂತೋಷದಿಂದ ಕೂಡಿರುತ್ತದೆ. ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೀರಿ. ಉದ್ಯೋಗಿಗಳಿಗೆ ಇಂದು ಮುಂಬಡ್ತಿ ದೊರೆಯುವ ಸಾಧ್ಯತೆಯಿದೆ.
ಮೀನರಾಶಿ ದಿನಭವಿಷ್ಯ
ಆರ್ಥಿಕವಾಗಿ ನಿಮಗೆ ಇಂದು ಅದ್ಬುತವಾದ ದಿನ. ವಿದ್ಯಾರ್ಥಿಗಳಿಗೆ ಇಂದು ಅನುಕೂಲಕರ. ಸಾಮಾಜಿಕವಾಗಿ ಗೌರವ ಸಿಗಲಿದೆ. ಆದಾಯವು ಹೆಚ್ಚಳವಾಗುವುದರಿಂದ ನೆಮ್ಮದಿ. ಹಿರಿಯರು ಹಾಗೂ ಅನುಭವಿಗಳ ಸಲಹೆಯನ್ನು ಪಡೆದು ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ನಿಮಗೆ ಯಶಸ್ಸು ದೊರೆಯಲಿದೆ.
Horoscope Today February 14 Zodiac Signs