ಮಂಗಳೂರು : ಕರಾವಳಿಯಲ್ಲಿ ಬಾರೀ ಸಂಚಲನ ಮೂಡಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಫರಂಗಿಪೇಟೆಯ ನಿವಾಸಿ ದಿಗಂತ್ (17 ವರ್ಷ) (Diganth missing) ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ದಿಗಂತ್ 12 ವರ್ಷಗಳ ಹಿಂದೆ ನಾಪತ್ತೆಯಾಗಿದ್ದು, ಇದೀಗ ಉಡುಪಿಯ ಡಿಮಾರ್ಟ್‌ನಲ್ಲಿ ದಿಗಂತ್ ಪತ್ತೆಯಾಗಿದ್ದಾನೆ. ಸದ್ಯ ಪೊಲೀಸರು ದಿಗಂತ್‌ನನ್ನು ನ್ಯಾಯಾಲಯಕ್ಕೆ ಒಪ್ಪಿಸಲಿದ್ದಾರೆ.
ಮಂಗಳೂರು ನಗರ ಕಾಲೇಜೊಂದರದಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸವನ್ನು ಮಾಡುತ್ತಿದ್ದ. ಆದರೆ ಫೆಬ್ರವತಿ 25ರಂದು ಮಂಗಳವಾರ ಸಂಜೆ ಮನೆಯಲ್ಲಿ ದೇವಸ್ಥಾನಕ್ಕೆ ತೆರಳುವುದಾಗಿ ತೆರಳಿದ್ದ. ಆದರೆ ರಾತ್ರಿಯಾದರೂ ದಿಗಂತ್ ಮನೆಗೆ ಬಾರದೆ ನಾಪತ್ತೆಯಾಗಿದ್ದ.
ಪರಿಶೀಲನೆಯನ್ನು ನಡೆಸಿದ್ರೆ ಆತ ದೇವಸ್ಥಾನಕ್ಕೆ ತೆರಳಿರಲಿಲ್ಲ. ಹುಡುಕಾಟ ನಡೆಸಿದ್ದಾಗ ರೈಲ್ವೇ ಹಳಿಯ ಬಳಿಯಲ್ಲಿ ದಿಗಂತ್ ಚೆಪ್ಪಲಿ ಹಾಗೂ ಮೊಬೈಲ್ ಪತ್ತೆಯಾಗಿತ್ತು. ಚಪ್ಪಲಿಯಲ್ಲಿ ರಕ್ತದ ಕಲೆಗಳು ಕಾಣಿಸಿಕೊಂಡಿದ್ದು, ಪೋಷಕರ ಆತಂಕಕ್ಕೆ ಕಾರಣವಾಗಿತ್ತು. ಈ ಕುರಿತು ಪೋಷಕರು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
Also Read : ಮಹಿಳಾ ಸಮೃದ್ಧಿ ಯೋಜನೆ : ಮಹಿಳೆಯರಿಗೆ ಪ್ರತೀ ತಿಂಗಳು ಸಿಗಲಿದೆ 2500 ರೂ.
ಒಂದು ದಿನದ ಹಿಂದೆಯಷ್ಟೇ ದಕ್ಷಿಣ ಕನ್ನಡ ಎಸ್ಪಿ ಯತೀಶ್ ಎನ್ ನೇತೃತ್ವದಲ್ಲಿ ಸುಮಾರು 150ಕ್ಕೂ ಅಧಿಕ ಪೋಲೀಸರ ತಂಡ ದಿಗಂತ್ ಹುಡುಕಾಟಕ್ಕಾಗಿ ಆತ ನಾಪತ್ತೆಯಾಗಿದ್ದ ಸ್ಥಳದಲ್ಲಿ ಕೂಂಬಿಂಗ್ ನಡೆಸಿದ್ದರು. ಡ್ರೋನ್, ಶ್ವಾನದಳ, ಅಗ್ನಿಶಾಮಕ ದಳದ ಜೊತೆಗೆ ಕಾರ್ಯಾಚರಣೆ ನಡೆಸಿದ್ದರು. ಆದರೆ ಯಾವುದೇ ಸುಳಿವು ಪತ್ತೆಯಾಗಿರಲಿಲ್ಲ.
ಪರೀಕ್ಷೆಗೆ ಹೆದರಿ ನಾಪತ್ತೆಯಾಗಿದ್ದ ದಿಗಂತ್..!
ದಿಗಂತ ನಾಪತ್ತೆಯ ಕುರಿತು ಸಾಕಷ್ಟು ಊಹಾಪೋಹಳು ಕೇಳಿಬಂದಿದ್ದವು. ದಿಗಂತ್ ತಂದೆ ಆತ ಪರೀಕ್ಷೆಗೆ ಹೆದರಿ ನಾಪತ್ತೆ ಆಗುವವ ಅಲ್ಲಾ ಎಂದಿದ್ದರು. ಆದ್ರೀಗ ಪೊಲೀಸರ ತನಿಖೆಯಲ್ಲಿ ದಿಗಂತ ನಾಪತ್ತೆಯ ಹಿಂದಿನ ಸತ್ಯಾಂಶ ಹೊರಬಿದ್ದಿದೆ. ದಿಗಂತ್ ಪಿಯುಸಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದು, ಈತ ಪರೀಕ್ಷೆಗೆ ಹೆದರಿ ನಾಫತ್ತೆಯಾಗಿದ್ದಾನೆ ಅನ್ನುವ ಕುರಿತು ಆತ ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಹೋಗಿದ್ದು ಎಲ್ಲಿಗೆ ದಿಗಂತ್ ?
ಫರಂಗಿಪೇಟೆಯಿಂದ ನಾಫತ್ತೆಯಾದ ದಿಗಂತ್ ಮೈಸೂರಿಗೆ ತೆರಳಿದ್ದಾನೆ. ನಂತರ ಅಲ್ಲಿಂದ ಬೆಂಗಳೂರು, ನಂದಿಬೆಟ್ಟ ಅಂತೆಲ್ಲಾ ಸುತ್ತಾಡಿದ್ದಾನೆ. ನಂತರದಲ್ಲಿ ಬೆಂಗಳೂರು ಹೊರವಲಯದ ರೆಸಾರ್ಟ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದು, ಮೂರು ದಿನಗಳ ಕಾಲ ಕೆಲಸ ಮಾಡಿದ್ದಾನೆ. ರೆಸಾರ್ಟ್ ಮಾಲೀಕರಿಂದ ಹಣವನ್ನು ಪಡೆದುಕೊಂಡು ಅಲ್ಲಿಂದ ಬಸ್ಸಿನ ಮೂಲಕ ಶಿವಮೊಗ್ಗಕ್ಕೆ ತೆರಳಿದ್ದಾನೆ.
ಶಿವಮೊಗ್ಗದಿಂದ ಮತ್ತೆ ಮೈಸೂರಿಗೆ ತೆರಳಿದ್ದ. ಮೈಸೂರಿನಿಂದ ಮುರ್ಡೇಶ್ವರ ನಂತರ ಅಲ್ಲಿಂದ ರೈಲು ಹತ್ತಿ ಉಡುಪಿಗೆ ಬಂದಿದ್ದಾನೆ. ಮುಂದೆ ಏನು ಮಾಡಬೇಕು ಅಂತಾ ತೋಚದೇ ಇದ್ದಾಗ ಆತ ನೇರವಾಗಿ ಉಡುಪಿ ನಗರದ ಕಲ್ಸಂಕ ಬಳಿಯಲ್ಲಿರುವ ಡಿಮಾರ್ಟ್‌ಗೆ ತೆರಳಿ ಬಿಸ್ಕೇಟ್ ಖರೀದಿಸಿದ್ದಾನೆ. ಈ ವೇಳೆಯಲ್ಲಿ ದಿಗಂತ ಡಿಮಾರ್ಟ್ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದಿದ್ದಾನೆ.
Also Read : ಕೋಟ : ಮೊಬೈಲ್ ನೀಡದಕ್ಕೆ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಡಿಮಾರ್ಟ್ ಸಿಬ್ಬಂದಿ ಆತನ ಗುರುತು ಪತ್ತೆ ಹಚ್ಚಿ, ವಿಚಾರಣೆ ನಡೆಸಿದ ವೇಳೆಯಲ್ಲಿ ಅಲ್ಲಿಂದ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ನಂತರ ಡಿಮಾರ್ಟ್ ಮ್ಯಾನೇಜರ್ ಆತನನ್ನು ಹಿಡಿದುಕೊಂಡು ಪೋಷಕರಿಗೆ ಕರೆ ಮಾಡಿ ಮಾತನಾಡಿದ್ದಾನೆ. ತನ್ನ ತಪ್ಪನ್ನು ಮುಚ್ಚಿ ಹಾಕಲು ಯಾರೋ ತನ್ನನ್ನು ಕರೆದೊಯ್ದಿದ್ದಾನೆ ಅಂತಾ ತನ್ನ ತಾಯಿಗೆ ಕಥೆ ಕಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ನ್ಯಾಯಾಲಯಕ್ಕೆ ದಿಗಂತ್ ಹಾಜರು ಪಡಿಸಿದ ಪೊಲೀಸರು
ದಿಗಂತ್ ನಾಪತ್ತೆಯಾಗಿ 12 ದಿನಗಳು ಕಳೆದಿದೆ. ಎಲ್ಲೆಡೆ ಶೋಧ ಕಾರ್ಯ ನಡೆಸಿದ್ದರೂ ಕೂಡ ದಿಗಂತ್ ಪತ್ತೆಯಾಗದೇ ಇರುವ ಹಿನ್ನೆಲೆಯಲ್ಲಿ ದಿಗಂತ್ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಪೊಲೀಸರಿಗೆ ದಿಗಂತ್ ಪತ್ತೆ ಮಾಡುವಂತೆ ಸೂಚಿಸಿತ್ತು. ಇದೀಗ ದಿಗಂತ್ ಪತ್ತೆಯಾದ ಬೆನ್ನಲ್ಲೇ ಆತನನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.
Mangalore Farangipet missing Diganth Found in Udupi Dmart for Disappearance due to fear of exams