Chikmagalur Murder : ಚಿಕ್ಕಮಗಳೂರು : ಪತ್ನಿ ಮನೆಬಿಟ್ಟು ಹೋಗಿದ್ದಾಳೆ ಅನ್ನೋ ಕಾರಣಕ್ಕೆ ಪತಿಯೋರ್ವ ತನ್ನ ಮಗಳು, ನಾದಿನಿ ಹಾಗೂ ಅತ್ತೆಗೆ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆಗೈದು, ನಂತರ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಫಿನಾಡು ಚಿಕ್ಕಮಗಳೂರಲ್ಲಿ ನಡೆದಿದೆ. ನಾದಿನಿಯ ಪತಿಗೂ ಗುಂಡೇಟು ತಗುಲಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಖಾಂಡ್ಯ ಹೋಬಳಿಯ ಮಾಗಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಅತ್ತೆ ಜ್ಯೋತಿ (50 ವರ್ಷ), ನಾದಿನಿ ಸಿಂಧೂ (26 ವರ್ಷ) ಹಾಗೂ ಮಗಳು ಮೌಲ್ಯ (7 ವರ್ಷ) ಎಂದು ಗುರುತಿಸಲಾಗಿದೆ. ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡವನನ್ನು ರತ್ನಾಕರ ಎಂದು ತಿಳಿದು ಬಂದಿದೆ.
Also Read : April 1 ರಿಂದ ಹಣಕಾಸಿಗೆ ಸಂಬಂಧಿಸಿದಂತೆ ಈ 10 ನಿಯಮಗಳಲ್ಲಿ ಬದಲಾವಣೆ
ಘಟನೆಯಲ್ಲಿ ಸಿಂಧೂ ಪತಿಯ ಕಾಲಿಗೂ ಗುಂಡೇಟು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ರತ್ನಾಕರ ಪತ್ನಿ ಕಳೆದ ಎರಡು ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದಾಳೆ. ಎಲ್ಲಿಯೂ ಪತ್ನಿ ಸಿಗದೇ ಇದ್ದಾಗ, ರತ್ನಾಕರ ಮನನೊಂದಿದ್ದ.
ರತ್ನಾಕರನ ಮಗಳು ಮೌಲ್ಯಾಳಿಗೆ ಶಾಲೆಯಲ್ಲಿ ಮಕ್ಕಳು ನಿನ್ನ ತಾಯಿ ಎಲ್ಲಿ ಎಂದು ಕೇಳಿದ್ದಾಳೆ. ನಂತರ ತನ್ನ ತಾಯಿಯ ಪೋಟೋವನ್ನು ತನ್ನ ಸ್ನೇಹಿತರಿಗೆ ಮೌಲ್ಯ ತೋರಿಸಿದ್ದಳು. ತಾಯಿಯ ವಿಚಾರದಲ್ಲಿ ತನ್ನ ನೋವನ್ನು ಮಗಳು ರತ್ನಾಕರನ ಬಳಿ ಹೇಳಿಕೊಂಡಿದ್ದಳು. ಇದರಿಂದ ರತ್ನಾಕರ ಕೂಡ ಮನನೊಂದಿದ್ದ.
Also Read : ಯುಗಾದಿ ದಿನವೇ ಚಿನ್ನದ ವ್ಯಾಪಾರಿ ಕುಟುಂಬ ಸಾಮೂಹಿಕ ಆತ್ಮಹತ್ಯೆ : ಸೈನೆಡ್ ಬಾಟಲಿ ಪತ್ತೆ
ಪತ್ನಿ ಹಾಗೂ ಮನೆಯವರು ತನಗೆ ಮೋಸ ಮಾಡಿದ್ದಾರೆ ಎಂದು ರತ್ನಾಕರ ಆರೋಪಿಸಿದ್ದಾನೆ. ಅಲ್ಲದೇ ಮನೆಯಲ್ಲಿದ್ದವರನ್ನು ಹತ್ಯೆ ಮಾಡಿದ ನಂತರ ವಿಡಿಯೋವೊಂದನ್ನು ಮಾಡಿದ್ದು, ಅದರಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾನೆ. ನಂತರ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯಿಂದಾಗಿ ಕಾಫಿನಾಡು ಚಿಕ್ಕಮಗಳೂರು ಬೆಚ್ಚಿ ಬಿದ್ದಿದೆ.
ಘಟನಾ ಸ್ಥಳಕ್ಕೆ ಬಾಳೆಹೊನ್ನೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಸ್ಥಳಕ್ಕೆ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಸದ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ಬಾಳೆಹೊನ್ನೂರು ಠಾಣೆಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
Chikmagalur Murder 3 death balehonnur Kannada News