ಭಾನುವಾರ, ಏಪ್ರಿಲ್ 27, 2025
HomeNationalYogi Adityanath : 2026ಕ್ಕೆ ಭಾರತದ ಪ್ರಧಾನಿ ಆಗ್ತಾರಾ ಯೋಗಿ ಆದಿತ್ಯನಾಥ್‌ ?

Yogi Adityanath : 2026ಕ್ಕೆ ಭಾರತದ ಪ್ರಧಾನಿ ಆಗ್ತಾರಾ ಯೋಗಿ ಆದಿತ್ಯನಾಥ್‌ ?

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೇ ಸೆಪ್ಟೆಂಬರ್‌ ತಿಂಗಳಿನಲ್ಲಿ 75ನೇ ವರ್ಷ ತುಂಬಲಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಆಗುತ್ತಲೇ ಬಿಜೆಪಿ ನಾಯಕರು 75 ವರ್ಷಕ್ಕೆ ನಿವೃತ್ತಿ ಪಡೆಯುವಂತೆ ಸೂಚಿಸಿದ್ದರು.

- Advertisement -

Yogi Adityanath : ಭಾರತದ ರಾಜಕಾರಣದಲ್ಲಿ ಸದ್ಯ ಅಗ್ರಪಂಥಿಯಲ್ಲಿ ಕೇಳಿಬರ್ತಾ ಇರೋ ಹೆಸರು ಯೋಗಿ ಆದಿತ್ಯನಾಥ್. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್‌ ನಡೆಸಿದ ಅಧಿಕಾರ ದೇಶವನ್ನಾಳುತ್ತಿರುವ ಪ್ರತೀ ಮುಖ್ಯಮಂತ್ರಿಗಳಿಗೂ ಮಾದರಿ. ಸದ್ಯ ಯೋಗಿ ಅವರ ಹೆಸರು ಪ್ರಧಾನಿ ಹುದ್ದೆಗೆ ಕೇಳಿಬಂದಿದೆ. 2026ಕ್ಕೆ ಯೋಗಿ ಆದಿತ್ಯನಾಥ್‌ ಅವರು ಭಾರತದ ಪ್ರಧಾನಿ ಆಗೋದು ಖಚಿತ ಎನ್ನಲಾಗುತ್ತಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುಗಾದಿಯ ದಿನದಂದೇ ನಾಗ್ಪುರದಲ್ಲಿನ ಆರ್‌ಎಸ್‌ಎಸ್‌ ಕಚೇರಿಗೆ ಭೇಟಿ ಕೊಟ್ಟಿದ್ದಾರೆ. ಭಾರತದ ಪ್ರಧಾನ ಮಂತ್ರಿಯಾದ ನಂತರ ನರೇಂದ್ರ ಮೋದಿ ಅವರು ಆರ್‌ಎಸ್‌ಎಸ್‌ ಕೇಂದ್ರ ಕಚೇರಿಗೆ ಭೇಟಿ ಕೊಟ್ಟಿರುವುದು ಇದೇ ಮೊದಲು. ಭಾರತೀಯ ಜನತಾ ಪಕ್ಷದಿಂದ ಪ್ರಧಾನಿ ಆಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರು ಡಾ.ಹೆಡಗೇವಾರ್‌ ಸ್ಮೃತಿ ಮಂದಿರಕ್ಕೆ 2000ನೇ ಇಸವಿಯ ಅಗಸ್ಟ್‌27ರಂದು ಭೇಟಿ ನೀಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಅವಧಿ ಪೂರ್ಣಗೊಳಿಸಿದ್ದು, ಇದೀಗ ಮೂರನೇ ಅವಧಿಗೆ ಪ್ರಧಾನಿ ಆಗಿ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ಆರ್‌ಎಸ್‌ಎಸ್‌ ಕಚೇರಿಗೆ ಭೇಟಿ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗ್ಪುರದಲ್ಲಿ ಅದ್ದೂರಿ ಸ್ವಾಗತಕೋರಲಾಗಿದೆ. ಆರ್‌ಎಸ್‌ಎಸ್‌ ಮುಖ್ಯಸ್ಥರಾದ ಮೋಹನ್‌ ಜೀ ಭಾಗವತ್‌, ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಶ್‌ ಭಯ್ಯಾಜಿ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಕೇಂದ್ರ ಸಚಿವ ನಿತಿನ್‌ ಗಡ್ಕರಿ ಜೊತೆಯಲಿದ್ದರು.

Also Read : ಮನೆಬಿಟ್ಟು ಹೋದ ಪತ್ನಿ : ಮಗಳು, ಅತ್ತೆ, ನಾದಿನಿಗೆ ಗುಂಡು ಹಾರಿಸಿ ಹತ್ಯೆಗೈದ ಪತಿ ..!

ಆರ್‌ಎಸ್‌ಎಸ್‌ ಕಚೇರಿಯ ರಶೀಮ್‌ಭಾಗ್‌ನಲ್ಲಿರುವ ಡಾ.ಹೆಡಗೇವಾರ್‌ ಸ್ಮೃತಿ ಮಂದಿರಕ್ಕೆ ಭೇಟಿ ನೀಡಿ, ಆರ್‌ಎಸ್‌ಎಸ್‌ ಸಂಸ್ಥಾಪಕ ಡಾ.ಕೇಶವ ಬಲಿರಾಮ್‌ ಹೆಡಗೇವಾರ್‌ ಹಾಗೂ ಸಂಘದ ಎರಡನೇ ಸರಸಂಘ ಚಾಲಕರಾದ ಎಂ.ಎಸ್.ಗೋಲ್ವಾಲ್ಕರ್‌ ಅವರ ಸ್ಮಾರಕಗಳಿಗೆ ಗೌರವ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೇ ಸೆಪ್ಟೆಂಬರ್‌ ತಿಂಗಳಿನಲ್ಲಿ 75ನೇ ವರ್ಷ ತುಂಬಲಿದೆ. ನರೇಂದ್ರ ಮೋದಿ ಅವರು ಪ್ರಧಾನಿ ಆಗುತ್ತಲೇ ಬಿಜೆಪಿ ನಾಯಕರು 75 ವರ್ಷಕ್ಕೆ ನಿವೃತ್ತಿ ಪಡೆಯುವಂತೆ ಸೂಚಿಸಿದ್ದರು.ಇದೇ ಮಾನದಂಡದ ಅಡಿಯಲ್ಲಿ ಈಗಾಗಲೇ ಹಲವು ನಾಯಕರು 75 ವರ್ಷ ತುಂಬುತ್ತಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಇದೀಗ ನರೇಂದ್ರ ಮೋದಿ ಅವರಿಗೆ ಕೂಡ 75 ವರ್ಷ ತುಂಬಲಿದ್ದು, ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡ್ತಾರಾ ಅನ್ನೋ ಕುತೂಹಲ ಮೂಡಿಸಿದೆ. ಆರ್‌ಎಸ್‌ಎಸ್‌ ಕಚೇರಿಗೆ ಭೇಟಿ ನೀಡಿದ ಹೊತ್ತಲ್ಲೇ ನರೇಂದ್ರ ಮೋದಿ ಹಾಗೂ ಆರ್‌ಎಸ್‌ಎಸ್‌ ಮುಖ್ಯಸ್ಥರಾದ ಮೋಹನ್‌ ಭಾಗವತ್‌ ಜೀ ಅವರು ಇದೇ ವಿಚಾರದ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗುತ್ತಿದೆ.

Also Read : ಯುಗಾದಿ ದಿನವೇ ಚಿನ್ನದ ವ್ಯಾಪಾರಿ ಕುಟುಂಬ ಸಾಮೂಹಿಕ ಆತ್ಮಹತ್ಯೆ : ಸೈನೆಡ್‌ ಬಾಟಲಿ ಪತ್ತೆ

2029ಕ್ಕೆ ಲೋಕಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಬಿಜೆಪಿ ಈಗಿನಿಂದಲೇ ಸಿದ್ದತೆ ಆರಂಭಿಸಿದೆ. ಕಳೆದ ಚುನಾವಣೆಯಲ್ಲಿ ಆರ್‌ಎಸ್‌ಎಸ್‌ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದು, ಆರ್‌ಎಸ್‌ಎಸ್‌ ನಿರ್ಧಾರ ಬಿಜೆಪಿಗೆ ಬಾರಿ ಹೊಡೆತ ಕೊಟ್ಟಿತ್ತು. ಆದ್ರೆ ಮುಂಬರುವ ಚುನಾವಣೆಗೂ ಮೊದಲೇ ಆರ್‌ಎಸ್‌ಎಸ್‌ ಜೊತೆಗೆ ಉತ್ತಮ ಬಾಂಧವ್ಯ ಉಳಿಸಿಕೊಳ್ಳುವುದು ಬಿಜೆಪಿಗೆ ಮುಖ್ಯ.

ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ಹೊಸ ಪ್ರಧಾನಿ ಅಭ್ಯರ್ಥಿಯೊಂದಿಗೆ ಕಣಕ್ಕೆ ಇಳಿಯಬೇಕಾಗಿದೆ. ಮತ್ತೊಂದೆಡೆಯಲ್ಲಿ ತಾವೇ ಜಾರಿಗೆ ತಂದಿರುವ ನಿಯಮವನ್ನು ಪ್ರಧಾನಿ ಮೋದಿ ಮುರಿಯುತ್ತಾರಾ ಅನ್ನೋದು ಕುತೂಹಲ ಮೂಡಿಸಿದೆ. ಒಂದೊಮ್ಮೆ ನರೇಂದ್ರ ಮೋದಿ ಅವರು 75 ವರ್ಷಕ್ಕೆ ಸಕ್ರೀಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸುವ ಸಾಧ್ಯತೆಯೂ ಇದೆ.

ಚುನಾವಣೆಗೆ 2 ವರ್ಷ ಬಾಕಿ ಇರುವಾಗಲೇ ಹೊಸ ಅಭ್ಯರ್ಥಿಯನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸಿದ್ರೆ ಮುಂದಿನ ಚುನಾವಣೆಗೆ ಅನುಕೂಲ ಆಗಲಿದೆ ಅನ್ನೋ ಲೆಕ್ಕಾಚಾರವೂ ನಡೆಯುತ್ತಿದೆ. ಸದ್ಯ ಭಾರತದಲ್ಲಿ ಬಿಜೆಪಿ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ. ಆರ್‌ಎಸ್‌ಎಸ್‌ ಅನ್ನೋ ಶಕ್ತಿ ಬಿಜೆಪಿಯ ಜೊತೆಗೆ ಇರುವವರೆಗೂ ಭಾರತೀಯ ಜನತಾ ಪಾರ್ಟಿಯನ್ನು ಅಲುಗಾಡಿಸೋದಕ್ಕೆ ಯಾರಿಂದಲೂ ಸಾಧ್ಯವೇ ಇಲ್ಲ.

ನರೇಂದ್ರ ಮೋದಿ ಅವರು ಒಂದೊಮ್ಮೆ ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿದ್ರೆ ಬಿಜೆಪಿಯಿಂದ ಯಾರು ಪ್ರಧಾನಿ ಆಗ್ತಾರೆ ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ಒಂದೆಡೆ ಗೃಹ ಸಚಿವ ಅಮಿತ್‌ ಶಾ ಅವರ ಹೆಸರು ಬಿಜೆಪಿ ವಲಯದಲ್ಲಿ ಕೇಳಿಬರುತ್ತಾ ಇದೆ.

ಆದರೆ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್‌ (Yogi Adityanath) ಅವರು ನಡೆಸುತ್ತಿರುವ ಅಧಿಕಾರ ಸಂಘ ಪರಿವಾರದ ನಾಯಕರಿಗೆ ಖುಷಿ ಕೊಟ್ಟಿದೆ.

ಆರ್‌ಎಸ್‌ಎಸ್‌ ಮುಖ್ಯಸ್ಥರಾಗಿರುವ ಮೋಹನ್‌ ಭಾಗವತ್‌ ಅವರು ತಮ್ಮ ಹುದ್ದೆಯಲ್ಲಿ ಇರುವಾಗಲೇ ಯೋಗಿ ಆದಿತ್ಯನಾಥ್‌ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಕಾಣುವುದಕ್ಕೆ ಕಾತರರಾಗಿದ್ದಾರಂತೆ. ಈಗಾಗಲೇ ಆರ್‌ಎಸ್‌ಎಸ್‌ ಭಾರತದ ಮುಂದಿನ ಪ್ರಧಾನಿ ಯೋಗಿ ಆದಿತ್ಯನಾಥ್‌ ಅನ್ನೋದನ್ನು ಖಚಿತ ಪಡಿಸಿದಂತಿದೆ. ಆದರೆ ಬಿಜೆಪಿ ಪಕ್ಷದಿಂದ ಅಂತಿಮವಾಗೋದು ಮಾತ್ರವೇ ಬಾಕಿ ಉಳಿದಿದೆ.

ಭಾರತದ ಮುಂದಿನ ಪ್ರಧಾನಿ ಯಾರು ಅಗಬೇಕು ಅನ್ನೋದು ಆರ್‌ಎಸ್‌ಎಸ್‌ ನಿರ್ಧಾರವೇ ಅಂತಿಮವಾಗಲಿದೆ. ಈ ಹಿಂದೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸಿದ್ದು ಕೂಡ ಆರ್‌ಎಸ್‌ಎಸ್.‌ ಈಗಾಗಲೇ ಗುಜರಾತ್‌ನಿಂದ ನರೇಂದ್ರ ಮೋದಿ ಅವರು 11 ವರ್ಷಗಳ ಕಾಲ ಪ್ರಧಾನಿ ಆಗಿ ಸೇವೆ ಸಲ್ಲಿಸಿದ್ದಾರೆ.

ಮತ್ತೆ ಗುಜರಾತ್‌ನ ಅಮಿತ್‌ ಶಾ ಅವರಿಗೆ ಪ್ರಧಾನಿ ಹುದ್ದೆ ನೀಡುವುದಕ್ಕೆ ಆರ್‌ಎಸ್‌ಎಸ್‌ ಮನಸ್ಸು ಮಾಡುತ್ತಿಲ್ಲ. ಹಿಂದುತ್ವವನ್ನು ಸಂಪೂರ್ಣವಾಗಿ ಬಿಜೆಪಿಯತ್ತ ಸೆಳೆಯೋದಕ್ಕೆ ಯೋಗಿಯೇ ಬೆಸ್ಟ್‌ ಅನ್ನೋದು ಆರ್‌ಎಸ್‌ಎಸ್‌ ಲೆಕ್ಕಾಚಾರ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಮಹಾಕುಂಭ ಮೇಳದ ಮೂಲಕ ಅಖಂಡ ಭಾರತದ ಹಿಂದೂಗಳನ್ನು ಒಗ್ಗೂಡಿಸಿದ ಖ್ಯಾತಿ ಯೋಗಿ ಆದಿತ್ಯನಾಥ್‌ ಅವರಿಗೆ ಸಲ್ಲುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಯೋಗಿ ಹೆಸರು ಪ್ರಧಾನಿಯ ಹುದ್ದೆಗೆ ಬಲವಾಗಿ ಕೇಳಿಬರುತ್ತಿದೆ. ಒಂದೊಮ್ಮೆ ಎಲ್ಲವೂ ಅಂದುಕೊಂಡಂತೆ ಆದ್ರೆ ಸಂತನೋರ್ವ ಭಾರತದ ಪ್ರಧಾನಿ ಆಗೋದು ಪಕ್ಕಾ. ಇದು ಭಾರತದ ಇತಿಹಾಸದಲ್ಲಿಯೇ ಮೊದಲು ಎನಿಸಿಕೊಳ್ಳಲಿದೆ. ಯುಪಿ ಸಿಎಂ ಆಗಿ ಸಕ್ಸಸ್‌ ಕಂಡಿರುವ ಯೋಗಿ ದೇಶದ ಪ್ರಧಾನಿ ಆದ್ರೂ ಅಚ್ಚರಿಯಿಲ್ಲ.

Will Uttar Pradesh Chief Minister Yogi Adityanath become the Prime Minister of India in 2026 ? Kannada News

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular