ಶನಿವಾರ, ಏಪ್ರಿಲ್ 26, 2025
HomeSportsCricketಲಕ್ನೋ ವಿರುದ್ದದ ಪಂದ್ಯದಲ್ಲಿ ದಾಖಲೆ ಬರೆದ ಹಾರ್ದಿಕ್‌ ಪಾಂಡ್ಯ

ಲಕ್ನೋ ವಿರುದ್ದದ ಪಂದ್ಯದಲ್ಲಿ ದಾಖಲೆ ಬರೆದ ಹಾರ್ದಿಕ್‌ ಪಾಂಡ್ಯ

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

- Advertisement -

ನವದೆಹಲಿ: ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2025 ರ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ ಐದು ವಿಕೆಟ್‌ ಪಡೆದಿದ್ದಾರೆ. 36 ರನ್‌ ನೀಡಿ 5 ವಿಕೆಟ್ ಪಡೆಯುವ ಮೂಲಕ ಪಾಂಡ್ಯ ವಿಶಿಷ್ಟ ದಾಖಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್‌ ತಂಡವನ್ನು ಮುನ್ನೆಡೆಸುತ್ತಿದ್ದಾರೆ. ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ದದ ಪಂದ್ಯದಲ್ಲಿ ಪಾಂಡ್ಯ ಆಲ್ರೌಂಡರ್‌ ಆಟವನ್ನು ಪ್ರದರ್ಶಿಸಿದ್ದಾರೆ. ಎಲ್‌ಎಸ್‌ಜಿ ತಂಡದ ಆಟಗಾರರಾದ ಹಾರ್ದಿಕ್ ನಿಕೋಲಸ್ ಪೂರನ್, ರಿಷಭ್ ಪಂತ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್ ಮತ್ತು ಆಕಾಶ್ ದೀಪ್ ಅವರನ್ನು ಔಟ್ ಮಾಡುವ ಮೂಲಕ ಪಾಂಡ್ಯ ವಿನೂತನ ದಾಖಲೆ ನಿರ್ಮಿಸಿದ್ದಾರೆ.

ಭಾರತೀಯ ಕ್ರಿಕೆಟ್‌ ತಂಡದ ಆಲ್ರೌಂಡರ್‌ ಆಗಿರುವ ಹಾರ್ದಿಕ್‌ ಪಾಂಡ್ಯ ಈ ಹಿಂದೆ ನ್ಯೂಜಿಲೆಂಡ್‌ ವಿರುದ್ದ ಪಂದ್ಯದಲ್ಲಿ 16ಕ್ಕೆ 4 ವಿಕೆಟ್‌ ಪಡೆದಿದ್ದರು. ಆದ್ರೀಗ ಐಪಿಎಲ್‌ನಲ್ಲಿ ಲಕ್ನೋ ವಿರುದ್ದದ ಪಂದ್ಯದಲ್ಲಿ ಅವರು 36ಕ್ಕೆ 5 ವಿಕೆಟ್ ಪಡೆಯುವ ಮೂಲಕ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಐಪಿಲ್‌ ತಿಹಾಸದಲ್ಲಿಯೇ ಐದು ವಿಕೆಟ್‌ ಪಡೆದ ಮೊದಲ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Also Read : IPL 2025 : ಐಪಿಎಲ್‌ ನಿಂದ ಬಿಸಿಸಿಐ ಎಷ್ಟು ಆದಾಯ ತೆರಿಗೆ ಪಾವತಿಸುತ್ತೆ ಗೊತ್ತಾ ?

ಐಪಿಎಲ್‌ನಲ್ಲಿ ನಾಯಕನಾಗಿ ಅತೀ ಹೆಚ್ಚು ವಿಕೆಟ್‌ ಪಡೆದ ನಾಯಕರ ಪೈಕಿ ಹಾರ್ದಿಕ್ ಪಾಂಡ್ಯ ಶೇನ್ ವಾರ್ನ್‌ಗಿಂತ ಹಿಂದುಳಿದಿದ್ದಾರೆ. ವಾರ್ನ್ 57 ವಿಕೆಟ್‌ಗಳಿಸಿದ ದಾಖಲೆಯನ್ನು ಹೊಂದಿದ್ದರೆ, ಹಾರ್ದಿಕ್‌ ಪಾಂಡ್ಯ 30 ವಿಕೆಟ್‌ ಪಡೆದ ದಾಖಲೆಯನ್ನು ಬರೆದಿದ್ದಾರೆ. ಹಾರ್ದಿಕ್ ಪಾಂಡ್ಯ 9ನೇ ಓವರ್‌ನಲ್ಲಿ ಬೌಲಿಂಗ್ ದಾಳಿಗೆ ಇಳಿದು ನಿಕೋಲಸ್ ಪೂರನ್ ಮತ್ತು ರಿಷಭ್ ಪಂತ್ ಅವರನ್ನು ಬೇಗನೆ ಔಟ್ ಮಾಡಿದ್ದರು.

ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ಡೇವಿಡ್ ಮಿಲ್ಲರ್ ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ದಾಳಿಯನ್ನು ಶ್ಲಾಘಿಸಿದ್ದರು. ಅವರು ಒಳ್ಳೆಯ ಬೌಲರ್. ನೀವು ಊಹಿಸುವುದಕ್ಕಿಂತ ಸ್ವಲ್ಪ ವೇಗಿ. ಅವರಲ್ಲಿ ಉತ್ತಮ ವ್ಯತ್ಯಾಸಗಳಿವೆ, ಅವರು ಲೆಂಗ್ತ್ ಅನ್ನು ನಿಜವಾಗಿಯೂ ಚೆನ್ನಾಗಿ ಹಿಡಿದಿಟ್ಟುಕೊಳ್ಳುತ್ತಾರೆ. ಅವರು ಇಂದು ರಾತ್ರಿ ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದರು. ನಮ್ಮ ಬೌಲರ್‌ಗಳಲ್ಲಿ ಒಬ್ಬರು ಅದೇ ರೀತಿ ಮಾಡಬಹುದು ಎಂದು ಆಶಿಸುತ್ತೇವೆ ಎಂದಿದ್ದಾರೆ.

Also Read : ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿಶೇಷ ಚೇತನ ವಿದ್ಯಾರ್ಥಿ ಶಶಿಕಾಂತ ಹಿರೇಮಠ್‌

ಲಖನೌ ಸೂಪರ್ ಜೈಂಟ್ಸ್ ನಾಯಕ ರಿಷಭ್ ಪಂತ್ ಐಪಿಎಲ್ 2025 ರಲ್ಲಿ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದರು, ಆರು ಎಸೆತಗಳಲ್ಲಿ ಕೇವಲ ಎರಡು ರನ್‌ಗಳನ್ನು ಮಾತ್ರ ಗಳಿಸಿದರು. ಈ ಮೂಲಕ ಮತ್ತೊಮ್ಮೆ ಅವರು ನಿರಾಸೆ ಮೂಡಿಸಿದ್ದಾರೆ. ಮುಂಬೈ ವಿರುದ್ದದ ಪಂದ್ಯದಲ್ಲಾದ್ರೂ ಪಂತ್‌ ಫಾರ್ಮ್‌ಗೆ ಮರಳುತ್ತಾರೆ ಎಂದು ಭಾವಿಸಿಕೊಂಡಿದ್ದರು. ಆದ್ರೆ ಪಂತ್‌ ನಾಲ್ಕನೇ ಪಂದ್ಯದಲ್ಲಿಯೂ ಎಡವಿದ್ರು.

IPL 2025 Hardik pandya Creates Records Against LSG

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular