ಬೆಂಗಳೂರು : ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ (PUC Result 2025 ) ನಾಳೆ ( ಎಪ್ರಿಲ್ 8ರಂದು ) ಪ್ರಕಟವಾಗಲಿದೆ. ಈ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಅಧಿಕೃತ ಆದೇಶ ಹೊರಡಿಸಿದೆ. ಈ ಕುರಿತು ನಾಳೆ ಮಧ್ಯಾಹ್ನ 12.30ಕ್ಕೆ ಸುದ್ದಿಗೋಷ್ಠಿ ಕರೆಯಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲು ಎಲ್ಲಾ ಸಿದ್ದತೆ ಮಾಡಿಕೊಂಡಿದೆ. ನಾಳೆ ಮಧ್ಯಾಹ್ನ 1.30 ರಿಂದಲೇ ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ https://karresults.nic.in/ ಮೂಲಕ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.
ಮಾರ್ಚ್1 ರಿಂದ ಮಾರ್ಚ್20ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸಲಾಗಿತ್ತು. ಕಳೆದ ಬಾರಿಗೆ ಹೋಲಿಸಿದ್ರೆ ಈ ಬಾರಿಗೆ ಹೋಲಿಸಿದ್ರೆ ಈ ಬಾರಿ ಎರಡು ದಿನಗಳ ಮುಂಚಿತವಾಗಿ ಫಲಿತಾಂಶ ಪ್ರಕಟವಾಗುತ್ತಿದೆ. ವಿದ್ಯಾರ್ಥಿಗಳು
Also Read : ಕರ್ನಾಟಕದಲ್ಲಿ ಬೇಸಿಗೆ ರಜೆ ಯಾವಾಗ ಆರಂಭ : ಈ ಬಾರಿ ಎಷ್ಟು ದಿನ ರಜೆ
PUC Result 2025 : ದ್ವಿತೀಯ ಪಿಯುಸಿ ಫಲಿತಾಂಶ 2025 ಪರಿಶೀಲಿಸುವ ಹಂತ
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: carresults.nic.in ಅಥವಾ kseab.karnataka.gov.in.
- “2ನೇ ಪಿಯುಸಿ ಫಲಿತಾಂಶ 2025” ಲಿಂಕ್ ಅನ್ನು ಕ್ಲಿಕ್ ಮಾಡಿ.
- ನಿಮ್ಮ ನೋಂದಣಿ ಸಂಖ್ಯೆ; ರೋಲ್ ಸಂಖ್ಯೆ ಮತ್ತು ಪರದೆಯ ಮೇಲೆ ಪ್ರದರ್ಶಿಸಲಾದ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
- ನಿಮ್ಮ ಸ್ಟ್ರೀಮ್ ಅನ್ನು ಆರಿಸಿ – ವಿಜ್ಞಾನ, ವಾಣಿಜ್ಯ ಅಥವಾ ಕಲೆ.
- ನಿಮ್ಮ ಫಲಿತಾಂಶವನ್ನು ವೀಕ್ಷಿಸಲು ಸಲ್ಲಿಸು ಬಟನ್ ಅನ್ನು ಕ್ಲಿಕ್ ಮಾಡಿ.
- ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಪರಿಶೀಲಿಸಿದ ನಂತರ, ಸುರಕ್ಷತೆಗಾಗಿ ತಾತ್ಕಾಲಿಕ ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಮುದ್ರಿಸಲು ಸೂಚಿಸಲಾಗುತ್ತದೆ.
Also Read : 50 ರೂ. ಹೂಡಿಕೆ ಮಾಡಿ 35 ಲಕ್ಷ ರೂ. ಪಡೆಯಿರಿ : ಅಂಚೆ ಇಲಾಖೆಯ ಗ್ರಾಮ ಸುರಕ್ಷಾ ಯೋಜನೆ
PUC Result 2025 announced Karnataka Tomorrow April 8 in Kannada News