ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಶೀಘ್ರದಲ್ಲೇ ಏಪ್ರಿಲ್ ಅಂತ್ಯದ ವೇಳೆಗೆ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಲಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್, ಎಸ್ಎಂಎಸ್ ಹಾಗೂ ಡಿಜಿಲಾಕರ್ ಮೂಲಕವೂ ಫಲಿತಾಂಶವನ್ನು ಪಡೆಯಬಹುದಾಗಿದೆ.
ಕರ್ನಾಟಕದಲ್ಲಿ ಮಾರ್ಚ್ 21 ರಿಂದ ಆರಂಭಗೊಂಡು, ಏಪ್ರಿಲ್ 4 2025 ರವರೆಗೆ ಎಸ್ಎಸ್ಎಲ್ ಸಿ ಪರೀಕ್ಷೆಗಳನ್ನು ನಡೆಸಲಾಯಿತು. ಅಲ್ಲದೇ ಎಪ್ರಿಲ್ 15ರಂದು ಮೌಲ್ಯಮಾಪನ ಪ್ರಕ್ರಿಯೆ ಆರಂಭಗೊಂಡಿತ್ತು. ಕರ್ನಾಟಕ ರಾಜ್ಯದಲ್ಲಿ ಒಟ್ಟು 240 ಮೌಲ್ಯಮಾಪನ ಕೇಂದ್ರಗಳಲ್ಲಿ 65,000 ಮೌಲ್ಯಮಾಪಕರು ಮೌಲ್ಯಮಾಪನ ಕಾರ್ಯವನ್ನು ನಡೆಸಿದ್ದರು. 4,61,563 ವಿದ್ಯಾರ್ಥಿಗಳು ಮತ್ತು 4,34,884 ವಿದ್ಯಾರ್ಥಿನಿಯರು ಸೇರಿದಂತೆ ಒಟ್ಟು 8,96,447 ವಿದ್ಯಾರ್ಥಿಗಳು SSLC ಪರೀಕ್ಷೆಗಳಿಗೆ ಹಾಜರಾಗಿದ್ದರು.
ಆನ್ಲೈನ್ನಲ್ಲಿ SSLC Result 2025 ಪರಿಶೀಲಿಸುವುದು ಹೇಗೆ ?
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: karresults.nic.in/
ಎಸ್ಎಸ್ಎಲ್ಸಿ ಫಲಿತಾಂಶ 2025 ಲಿಂಕ್ ಕ್ಲಿಕ್ ಮಾಡಿ
ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ಪ್ರಮುಖ ವಿವರಗಳನ್ನು ನಮೂದಿಸಿ.
ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿ
ಫಲಿತಾಂಶವನ್ನು ಪ್ರದರ್ಶಿಸಲಾಗುತ್ತದೆ. ಭವಿಷ್ಯದ ಉಲ್ಲೇಖಕ್ಕಾಗಿ ನೀವು ಅದನ್ನು ಡೌನ್ಲೋಡ್ ಮಾಡಬಹುದು.
SSLC Result 2025 ಫಲಿತಾಂಶವನ್ನು ಪರಿಶೀಲಿಸುವ ಮಾರ್ಗಗಳು
ವಿದ್ಯಾರ್ಥಿಗಳು ಕರ್ನಾಟಕ ಮಂಡಳಿಯ 10 ನೇ ತರಗತಿಯ ಫಲಿತಾಂಶವನ್ನು ಈ ಕೆಳಗಿನವುಗಳ ಸಹಾಯದಿಂದ ಪರಿಶೀಲಿಸಬಹುದು
ವೆಬ್ಸೈಟ್ಗಳು:karresults.nic.in
ವೆಬ್ಸೈಟ್
SMS
Digilocker
ಎಸ್ಎಸ್ಎಲ್ಸಿ ಫಲಿತಾಂಶ ವೀಕ್ಷಿಸಲು ಈ ದಾಖಲೆಗಳು ಕಡ್ಡಾಯ :
ನೋಂದಣಿ ಸಂಖ್ಯೆ
ಹುಟ್ಟಿದ ದಿನಾಂಕ
ಇತರ ಸಂಬಂಧಿತ ಲಿಂಕ್ಗಳು
SSLC ಫಲಿತಾಂಶ 2025 ಡಿಜಿಲಾಕರ್ ಮೂಲಕ ಪರಿಶೀಲಿಸುವುದು ಹೇಗೆ ?
ಹಂತ 1: digilocker.gov.in ಗೆ ಹೋಗಿ
ಹಂತ 2: ಸೈನ್ ಅಪ್ ಮೇಲೆ ಕ್ಲಿಕ್ ಮಾಡಿ. ಹೆಸರು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಆಧಾರ್ ಸಂಖ್ಯೆಯನ್ನು ನಮೂದಿಸಿ
ಹಂತ 3. ಆರು-ಅಂಕಿಯ ಭದ್ರತಾ ಪಿನ್ ರಚಿಸಿ. ಸಲ್ಲಿಸಿ
ಹಂತ 4: ಬಳಕೆದಾರಹೆಸರು ಮತ್ತು ಪಾಸ್ವರ್ಡ್ ಹೊಂದಿಸಿ
ಹಂತ 5: ‘ಶಿಕ್ಷಣ’ ಟ್ಯಾಬ್ ಕರ್ನಾಟಕ ಬೋರ್ಡ್ ಕ್ಲಿಕ್ ಮಾಡಿ
ಹಂತ 6: SSLC ಪರೀಕ್ಷೆಯ ಫಲಿತಾಂಶ 2025 ಕರ್ನಾಟಕದ ಮೇಲೆ ಕ್ಲಿಕ್ ಮಾಡಿ
ಹಂತ 7: ಆಧಾರ್ ಕಾರ್ಡ್ ಬಳಸಿ ಸೈನ್ ಇನ್ ಮಾಡಿ
ಹಂತ 8: SSLC ಅಂಕಪಟ್ಟಿಯನ್ನು ಪಡೆಯಬಹುದಾಗಿದೆ.
How to check SSLC result 2025 Karnataka in Online Kannada News