Rakesh poojari Death : ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ನಿನ್ನೆ ರಾತ್ರಿ ನಡೆದಿದ್ದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆಯಲ್ಲಿ ಅವರಿಗೆ ಹೃದಯಾಘಾತವಾಗಿದ್ದು, ಮುಂಜಾನೆ 2 ಗಂಟೆಗೆ ಅವರು ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ರಾಕೇಶ್ ಪೂಜಾರಿ ನಿಧನದ ಸುದ್ದಿ ತಿಳಿಯುತ್ತಲೇ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಸದಾ ಎಲ್ಲರನ್ನೂ ನಗಿಸುತ್ತಾ, ಕಾಮಿಡಿ ಮಾಡುತ್ತಾ ಎಲ್ಲರ ಮನಗೆದ್ದಿದ್ದ ಉಡುಪಿ ಮೂಲದ ರಾಕೇಶ್ ಪೂಜಾರಿ ನಟರಾಗಿಯೂ ಗುರುತಿಸಿಕೊಂಡಿದ್ದಾರೆ. ಹಲವು ವರ್ಷಗಳಿಂದಲೂ ಬಣ್ಣದ ಲೋಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಆದರೆ ಕನ್ನಡ ಕಿರುತೆರೆಯ ಕಾಮಿಡಿ ಕಿಲಾಡಿಗಳು ಶೋ ಅವರ ಬದುಕನ್ನೇ ಬದಲಾಯಿಸಿತ್ತು. ಕಾಮಿಡಿ ಕಿಲಾಡಿಗಳು ಶೋ ಮೂರನೇ ಸೀಸನ್‌ನಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದರು.
Also Read : ಜೀಬ್ರಾ ಸಿನಿಮಾ ಪ್ರೀ-ರಿಲೀಸ್ ಇವೆಂಟ್ : ಡಾಲಿ ಧನಂಜಯ್-ಸತ್ಯದೇವ್ ಚಿತ್ರ ಸಲಗ ಸಾಥ್
ಕರಾವಳಿ ಮೂಲದ ರಾಕೇಶ್ ಪೂಜಾರಿ ರಂಗಭೂಮಿ, ಕಿರುತೆರೆಯ ಸೀರಿಯಲ್‌ಗಳಲ್ಲಿಯೂ ಅವರು ನಟಿಸಿದ್ದಾರೆ. ಇದು ಎಂಥಾ ಲೋಕವಯ್ಯ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ ತುಳು ಭಾಷೆಯ ಪೆಟ್ಕಮ್ಮಿ, ಅಮ್ಮೆರ್ ಪೊಲೀಸ್ ಸಿನಿಮಾಗಳಲ್ಲಿಯೂ ಅವರು ಬಣ್ಣ ಹಚ್ಚಿದ್ದಾರೆ. ಕಾಂತಾರಾ 1 ಸಿನಿಮಾದಲ್ಲಿಯೂ ಅವರು ನಟಿಸುತ್ತಿದ್ದು, ಶೂಟಿಂಗ್ ಮುಗಿಸಿಕೊಂಡು ಬಂದ ಅವರು ಸುಸ್ತಾಗಿದ್ದರು. ಮಧ್ಯರಾತ್ರಿ ಅವರಿಗೆ ಹೃದಯಾಘಾತವಾಗಿದೆ ಎಂದು ತಿಳಿದು ಬಂದಿದೆ.
Also Read : ಯಶ್ ಅಭಿಮಾನಿಗಳಿಗೆ ಸಿಹಿಸುದ್ದಿಕೊಟ್ಟ ರಾಧಿಕಾ ಪಂಡಿತ್ : ಪೋಟೋ ವೈರಲ್
Comedy Khiladigalu Actor Rakesh poojari Death in Kannada News