
ಕುಂದಾಪುರ : ಈ ಬಾರಿಯ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬ್ರಸೂರು ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರಾವ್ಯ ಮೊಗವೀರ 625 ಅಂಕಗಳಲ್ಲಿ 621 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 5 ರಾಂಕ್ ಪಡೆದಿದ್ದಾಳೆ.

ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸದಾನಂದ ಬಳ್ಕೂರು ಅವರ ನೇತೃತ್ವದಲ್ಲಿ ಬಳ್ಖೂರಿನ ಗ್ರಾಮಸ್ಥರ ವತಿಯಿಂದ ಶ್ರಾವ್ಯ ಮೊಗವೀರ ಅವರ ಮನೆಗೆ ತೆರಳಿ ಅಭಿನಂದನೆ ಸಲ್ಲಿಸಲಾಯಿತು.

ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ನಾಗೇಶ್ ಸೇರಿಗಾರ್ ಸೇರಿದಂತೆ ಬಳ್ಕೂರು ಗ್ರಾಮದ ಹಲವ ಮುಖಂಡರು ಉಪಸ್ಥಿತರಿದ್ದರು.