
ಆಟೋ ಮೊಬೈಲ್ ಉದ್ಯಮದ ಮೇಲೆ ಕೊರೊನಾ ಕರಿನೆರಳು ಬಿದ್ದಿದ್ದು, ವಿವಿಧ ಕಂಪೆನಿಗಳು ಭರ್ಜರಿ ಆಫರ್ ನೀಡುತ್ತಿವೆ. ಅದ್ರಲ್ಲೂ ದೇಶೀಯ ಗ್ರಾಹಕರ ಮನಗೆದ್ದಿರುವ ರೆನಾಲ್ಟ್ ಇಂಡಿಯಾ ವಿವಿಧ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ.

ಕೊರೊನಾದ ಜೊತೆಗೆ ಮಳೆಗಾಲದ ವಿಶೇಷ ಆಫರ್ ಆಗಿ ರೆನಾಲ್ಟ್ ಇಂಡಿಯಾ ಸಂಸ್ಥೆ ಪ್ರಮುಖವಾಗಿ ರೆನಾಲ್ಟ್ ಕ್ವಿಡ್, ಡಸ್ಟರ್, ಟ್ರೈಬರ್ ಕಾರುಗಳಿಗೆ ವಿಶೇಷ ರಿಯಾಯಿತಿಯನ್ನು ಘೋಷಣೆ ಮಾಡಿದೆ.

ರೆನಾಲ್ಟ್ ಕ್ವಿಡ್, ಡಸ್ಟರ್ ಹಾಗೂ ಟ್ರೈಬರ್ ಕಾರುಗಳು ಈಗಾಗಲೇ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈಗಾಗಲೇ ಹಲವಾರು ವಿಶೇಷತೆಗಳೊಂದಿಗೆ, ಹೊಸ ವಿನ್ಯಾಸಗಳೊಂದಿಗೆ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.

ವಿಶೇಷ ರಿಯಾಯಿತಿ, ಎಕ್ಸ್ ಚೇಂಜ್ ಹಾಗೂ ಬೋನಸ್ ಆಫರ್ ಗಳನ್ನು ನೀಡುತ್ತಿದ್ದು, ಕಾರುಕೊಳ್ಳುವವರಿಗಾಗಿಯೇ ರೆನಾಲ್ಟ್ ಸಂಸ್ಥೆ ಹೆಚ್ಚು ಅನುಕೂಲಕರವಾಗಿರುವ ಅವಕಾಶಗಳನ್ನು ಒದಗಿಸುತ್ತಿದೆ.

ವರ್ಷಂಪ್ರತಿ ಮಾನ್ಸೂನ್ ಆಫರ್ ಘೋಷಿಸುತ್ತಿದ್ದರೂ ಕೂಡ, ಈ ಬಾರಿ ವಿಶೇಷ ಆಫರ್ ನೀಡುತ್ತಿದೆ. ಹೀಗಾಗಿ ಕಾರುಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದ್ರೆ ಈಗಲೇ ರೆನಾಲ್ಟ್, ಡಸ್ಟರ್ ಹಾಗೂ ಕ್ವಿಡ್ ಕಾರುಗಳನ್ನು ಖರೀದಿಸೋದು ಒಳಿತು.

ಡಸ್ಟರ್ RxS ಕಾರು ಖರೀದಿದಾರರಿಗೆ 25 ಸಾವಿರ ರೂಪಾಯಿ ವಿಶೇಷ ಕ್ಯಾಶ್ ಬ್ಯಾಕ್ ಡಿಸ್ಕೌಂಟ್ ಘೋಷಣೆಯನ್ನು ನೀಡಿದ್ದು, ಜೊತೆಗೆ 25 ಸಾವಿರ ರೂಪಾಯಿ ಎಕ್ಸ್ಚೇಂಜ್ ಆಫರ್ ಕೂಡ ನೀಡುತ್ತಿದೆ. ಇಷ್ಟೇ ಅಲ್ಲದೇ 20 ಸಾವಿರ ರೂಪಾಯಿ ಕಾರ್ಪೋರೇಟ್ ಬೋನಸ್ ಕೂಡ ಪಡೆಯಬಹುದಾಗಿದೆ.


ರೆನಾಲ್ಟ್ ಡಸ್ಟರ್ RxE, RxZ ವೆರಿಯಂಟ್ ಕಾರು ಖರೀದಿದಾರರಿಗೂ 25,000 ರೂಪಾಯಿ ಎಕ್ಸ್ಚೇಂಜ್ ಆಫರ್ ಜೊತೆಗೆ 20 ಸಾವಿರ ರೂಪಾಯಿ ಕಾರ್ಪೋರೇಟ್ ಆಫರ್ ವನ್ನು ಘೋಷಣೆ ಮಾಡಲಾಗಿದೆ.

ಇನ್ನು ರೆನಾಲ್ಟ್ ಕಂಪೆನಿಯ ಟ್ರೈಬರ್ ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ವಿಶೇಷತೆಯನ್ನು ಹೊಂದಿರುವ ಕಾರಿನ ಮೇಲೆ 20 ಸಾವಿರ ರೂಪಾಯಿ ಎಕ್ಸ್ ಚೇಂಜ್ ಆಫರ್ ಹಾಗೂ 7,000 ರೂಪಾಯಿ ಕಾರ್ಪೋರೇಟ್ ಆಫರ್ ಘೋಷಿಸಿದೆ.

ರೆನಾಲ್ಟ್ ಟ್ರೈಬರ್ ಮಾನ್ಯುಯೆಲ್ ಕಾರು ಖರೀದಿಸುವವರು ಕೂಡ 20,000 ಸಾವಿರ ರೂಪಾಯಿ ಎಕ್ಸ್ಚೇಂಜ್ ಆಫರ್ ಜೊತೆಗೆ 7000 ಸಾವಿರ ರೂಪಾಯಿ ಕಾರ್ಪೋರೇಟ್ ಬೋನಸ್ ಅವಕಾಶವನ್ನು ನೀಡಲಾಗುತ್ತಿದೆ.

ಲಕ್ಷಾಂತರ ಜನರ ಮನ ಗೆದ್ದಿರುವ ರೆನಾಲ್ಟ್ ಕ್ವಿಡ್ ಕಾರಿನ ಮೇಲೆಯೂ ಆಫರ್ ನೀಡಲಾಗುತ್ತಿದ್ದು, 800ಸಿಸಿ ಕಾರು ಖರೀದಿ ಮಾಡುವವರಿಗೆ 5,000 ರೂಪಾಯಿ ಎಕ್ಸ್ಚೇಂಜ್ ಆಫರ್ ಜೊತೆಗೆ 10,000 ರೂಪಾಯಿ ಕಾರ್ಪೋರೇಟ್ ಆಫರ್ ಘೋಷಣೆ ಮಾಡಿದೆ.

ಇಷ್ಟೇ ಅಲ್ಲಾ ರೆನಾಲ್ಟ್ ಕ್ವಿಡ್ 1 ಲೀಟರ್ ಎಂಜಿ ಹೊಂದಿರುವ ಕಾರಿನ ಮೇಲೆಯೂ ವಿಶೇಷ 10,000 ರೂಪಾಯಿ ಕ್ಯಾಶ್ ಡಿಸ್ಕೌಂಟ್ ಘೋಷಣೆಯನ್ನು ಮಾಡಿದ್ದು, 15 ಸಾವಿರ ರೂಪಾಯಿ ಎಕ್ಸ್ಚೇಂಜ್ ಆಫರ್ ನೀಡಿದೆ.

ಅದರ ಜೊತೆಗೆ 7,000 ರೂಪಾಯಿ ಕಾರ್ಪೋರೇಟ್ ಬೋನಸನ್ನು ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.