Mallam Durga Parmeshwari : ತಾಯಿ, ಜಗತ್ತಿನ ಉನ್ನತ ಸ್ಥಾನ ಇದೆ. ಅದರಲ್ಲೂ ಜಗನ್ಮಾತೆ ಆಕೆ ಜಗತ್ತಿಗೆ ತಾಯಿ. ಆಕೆಯ ಬಳಿ ಕಷ್ಟ ಹೇಳಿಕೊಂಡ್ರೆ ಪರಿಹಾರ ಆಗದ ಸಮಸ್ಯೆಗಳೇ ಇಲ್ಲ. ಅದ್ರಲ್ಲೂ ಹೆಣ್ಣು ಮಕ್ಕಳಿಗಂತು ಆಕೆ ಸರ್ವ ಸುಖ ಪ್ರದಾಯಿನಿ. ಕುಂಕುಮ ನೀಡೋಕು ಆಕೆಯೇ ಬೇಕು, ಸಂತಾನ ನೀಡೋಕು ಆಕೆಯೇ ಬೇಕು. ಆಕೆಯ ಬಳಿ ಏನೇ ಕೇಳಿದ್ರು ಇಲ್ಲ ಅನ್ನೋದೇ ಇಲ್ಲ. ಯಾಕೆಂದ್ರೆ ಈಕೆ ಮಾತೆ . ಆಕೆಯನ್ನು ಅನೇಕ ರೂಪಗಳಲ್ಲೀ ಪೂಜಿಸುತ್ತಾರೆ. ಅದರಲ್ಲಿ ದುರ್ಗಾರೂಪ ಕೂಡಾ ಒಂದು.

ಈ ಕ್ಷೇತ್ರದಲ್ಲೂ ಈ ದೇವಿ ನೆಲೆಸಿರೋದು ಇದೇ ರೂಪದಲ್ಲಿ. ಇಲ್ಲಿ ಬಂದ್ರೆ ಪರಿಹಾರವಾಗದೇ ಇರೋ ಸಮಸ್ಯೆ ಇಲ್ಲ. ಭಕ್ತಿಯಿಂದ ಕೈಮುಗಿದು ಹರಕೆ ಹೊತ್ತರೆ ಈ ತಾಯಿ ಈಡೇರಿಸುತ್ತಾಳೆ ಅನ್ನೋ ನಂಬಿಕೆ ಇದೆ. ಇಲ್ಲಿ ಸಂತಾನ ಬಯಸಿ ಬರೋರು, ಮದುವೆ ಮುಂತಾದ ಸಮಸ್ಯೆಗಳಿಗೆ ಬರೋರೆ ಹೆಚ್ಚು. ಇಲ್ಲಿ ತಾಯಿಯ ದರ್ಶನ ಮಾತ್ರದಿಂದ ಎಲ್ಲ ಪರಿಹಾರವಾಗುತ್ತೆ ಎನ್ನೋದು ಇಲ್ಲಿನ ವಾಡಿಕೆ. ಇಲ್ಲಿ ಹರಿಕೆಯ ರೂಪದಲ್ಲಿ ತೀರ್ಥಸ್ನಾನ, ಉರುಳು ಸೇವೆ, ತುಲಾಭಾರ ಮುಂತಾದ ಸೇವೆಗಳನ್ನು ನೆರವೇರಿಸಲಾಗುತ್ತೆ. ಇನ್ನು ಹೊಸತಾಗಿ ವಿವಾಹವಾದ ನವದಂಪತಿಗಳು ಇಲ್ಲಿಗೆ ಬರಲೇ ಬೇಕು ಅನ್ನೋದು ಸುತ್ತಮುತ್ತಲಿನ ಊರಿನವರ ಅಭಿಪ್ರಾಯ. ಹೀಗಾಗಿ ಸುತ್ತಮುತ್ತಲಿನ ಜಿಲ್ಲೆಯ ನವದಂಪತಿ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಇನ್ನು ಮಕ್ಕಳಾಗದವರು ಕೂಡಾ ಇಲ್ಲಿಗೆ ಬಂದು ಹರಕೆ ಹೇಳುತ್ತಾರೆ. ಮಕ್ಕಳಾದ ಮೇಲೆ ತುಲಾಭಾರ ಸೇವೆಯನ್ನು ಮಾಡಿ ತಾಯಿಯ ಆಶೀರ್ವಾದ ಪಡೆಯುತ್ತಾರೆ.

ತೀರ್ಥ ಸ್ನಾನ ಇಲ್ಲಿಯ ಮತ್ತೊಂದು ವಿಶೇಷ. ಯಾಕಂದ್ರೆ ದೇವಸ್ಥಾನದ ಗರ್ಭಗುಡಿಯಲ್ಲಿನ ಬಾವಿಯ ನೀರನ್ನು ತಂದು ಇಲ್ಲಿ ಬರುವ ಭಕ್ತರ ವೇಲೆ ಎರೆಯಲಾಗುತ್ತೆ. ಇದರಿಂದ ಸರ್ವರೋಗ ಉಪಶಮನವಾಗುತ್ತೆ ಅನ್ನೋದು ಇಲ್ಲಿಯ ಭಕ್ತರ ನಂಬಿಕೆ. ಅಷ್ಟಕ್ಕೂ ಕೇರಳ ರಾಜ್ಯದ ಕಾಸರಗೋಡಿನಲ್ಲಿರುವ ಈ ಮಲ್ಲಂ ದೇವಸ್ಥಾನದಲ್ಲಿನ ದುರ್ಗಾಪರಮೇಶ್ವರಿ ದೇವಿಯ ಒಂದು ವಿಶೇಷ ದೇವಾಲಯವಾಗಿದ್ದು, ಪುರಾತನ ದೊಡ್ಡ ಭವ್ಯವಾದ ದೇವಾಲಯವಾಗಿದೆ.

ಇನ್ನು ಇಲ್ಲಿ ತಾಯಿ ನೆಲೆಸಿರೋದು ದುರ್ಗೆಯ ರೂಪದಲ್ಲಾದರೂ, ಅನ್ನವೇ ಇಲ್ಲಿಯ ಪ್ರಸಾದ. ಇಲ್ಲಿಗೆ ಬಂದ್ರೆ ಊಟ ಮಾಡಿಯೇ ತೆರಳಬೇಕು ಅನ್ನೋದು ಇಲ್ಲಿಯ ನಿಯಮ. ಹೀಗಾಗಿ ಭಕ್ತರು ಮಧ್ಯಾಹ್ನ ಅಥವಾ ರಾತ್ರೆಯ ವೇಳೆಯೇ ಇಲ್ಲಿಗೆ ಬರುತ್ತಾರೆ.ಇ ಲ್ಲಿ ನವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತೆ. ಈ ವೇಳೆಗೆ ಸುತ್ತಮುತ್ತಲ ರಾಜ್ಯದಿಂದಲೂ ಲಕ್ಷಂತರ ಮಂದಿ ಬಂದು ತಾಯಿಯ ದರ್ಶನ ಪಡೆಯುತ್ತಾರೆ.
ಇದನ್ನೂ ಓದಿ : ಈ ಮಾತೆಗೆ ಇಲಿಗಳೇ ಮಕ್ಕಳು : ಮೂಷಿಕನನ್ನು ಪೂಜಿಸಿದ್ರೆ ಇಷ್ಟಾರ್ಥ ಸಿದ್ಧಿ
ಇದನ್ನೂ ಓದಿ : ಸೌತಡ್ಕ : ವಿಘ್ನವಿನಾಶಕನಿಗಿಲ್ಲಿ ಬಯಲೇ ಆಲಯ, ಕಟ್ಟಿದ್ರೆ ಇಷ್ಟಾರ್ಥ ಈಡೇರಿಸುತ್ತಾನೆ ಗಣೇಶ
( Mallam Durga Parmeshwari Temple Kasaragod Kerala)