ಮಂಗಳವಾರ, ಜೂನ್ 17, 2025
HomeCrimeದಾಖಲೆಯಿಲ್ಲದೇ ಸಾಗಿಸುತ್ತಿದ್ದ 3.75 ಕೋಟಿ ರೂ. ವಶ : 4 ಮಂದಿಯ ಬಂಧನ

ದಾಖಲೆಯಿಲ್ಲದೇ ಸಾಗಿಸುತ್ತಿದ್ದ 3.75 ಕೋಟಿ ರೂ. ವಶ : 4 ಮಂದಿಯ ಬಂಧನ

- Advertisement -

ಹೈದರಾಬಾದ್ : ದಾಖಲೆಯಿಲ್ಲದೇ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 3.75 ಕೋಟಿ ರೂಪಾಯಿಗಳನ್ನು ಹೈದ್ರಬಾದ್ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಹಣ ಸಾಗಾಟ ಹಿಂದೆ ಪೊಲೀಸರು ಹವಾಲಾ ದಂಧೆಯ ಅನುಮಾನ ಮೂಡಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

Alvas1

ಈಶ್ವರ್ ದಿಲೀಪ್ ಸೋಲಂಕಿ (29 ವರ್ಷ ), ಹರೀಶ್ ಭಾಯ್ ಪಟೇಲ್(35 ವರ್ಷ ), ಅಜಿತ್ ಸಿಂಗ್ (34 ವರ್ಷ ) ಹಾಗೂ ರಾಥೋಡ್ ನಾನಕ್ ಸಿಂಗ್ ನಾತುಬಾ(42 ವರ್ಷ) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಹೈದರಾಬಾದ್ ಪೊಲೀಸರು ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ನಾಲ್ವರನ್ನು ಬಂಧಿಸಿ, ಹಣ ವಶಪಡಿಸಿಕೊಂಡಿದ್ದಾರೆ.

Maks Infotech Web1

ಮುಂಬೈನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವುದಾಗಿ ನಾಲ್ವರು ಆರೋಪಿಗಳು ಹೇಳಿಕೊಂಡಿದ್ದಾರೆ. ಅಹಮದಾಬಾದ್ ಮೂಲದ ವ್ಯಕ್ತಿಗೆ ಸೇರಿದ ಕಂಪೆನಿ ಎಂದು ತಿಳಿದುಬಂದಿದೆ. ಹಣವನ್ನು ಸೊಲ್ಲಾಪುರಕ್ಕೆ ಸಾಗಾಟ ಮಾಡುತ್ತಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಹೈದ್ರಾಬಾದ್ ಪೊಲೀಶರು ವಶ ಪಡಸಿಕೊಂಡಿರುವ 3,75,30,000 ರೂ. ಹಣವನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು, ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular