- ವಂದನಾ ಕೊಮ್ಮುಂಜೆ
ಮೋದಿ ಆರಂಭಿಸಿದ ಫಿಟ್ ಇಂಡಿಯಾ ಆಂದೋಲನ ಎಲ್ಲರಿಗೂ ಗೊತ್ತೇ ಇದೆ. ಇಂಡಿಯಾವನ್ನು ಫಿಟ್ ಆಗಿ ಇಟ್ಟುಕೊಳ್ಳಿ ಅಂತ ಹೇಳಿ ಆರಂಭಿಸಿ ದ ಆಂದೋಲನವಿದು . ಇದಕ್ಕೆ ಪ್ಯಾಪಕ ಬೆಂಬಲ ಕೂಡಾ ವ್ಯಕ್ತವಾಗಿತ್ತು.

ಈ ಆಂದೋಲನಕ್ಕೆ ಇವತ್ತಿಗೆ 1 ವರ್ಷವಾಗಿದೆ . ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ವಿಡಿಯೋ ಕಾಫರೆಸ್ಸ್ ಕೂಡಾ ಹಮ್ಮಿಕೊಂಡಿದ್ರು.
ಇದರಲ್ಲಿ ಭಾರತ ತಂಡದ ಎನೆರ್ಜೆಟಿಕ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೂಡಾ ಭಾಗಿಯಾಗಿದ್ರು ಐಪಿಎಲ್ ನ ಹಿನ್ನೆಲೆಯಲ್ಲಿ ದುಬೈನಲ್ಲಿದ್ದ ವಿರಾಟ್ ಅಲ್ಲಿಂದಲೇ ಮೋದಿಯವರ ಫಿಟ್ನೆಸ್ ಪ್ರಶ್ನೆಗಳಿಗೆ ಉತ್ತರ ನೀಡಿದರು.

ನೀವು ಹೇಗೆ ಫಿಟ್ ಆಗಿರುತ್ತಿರಿ ಅಂತನೇ ಪ್ರಶ್ನೆ ಆರಂಭಿಸಿದ ಮೋದಿ ಕಿಚಾಯಿಸುತ್ತಲೇ ವಿರಾಟ್ ಫಿಟ್ ನೆಸ್ ಬಗ್ಗೆ ಮಾಹಿತಿ ಪಡೆದ್ರು .
ಇನ್ನು ಯೋ- ಯೋ ಟೆಸ್ಟ್ ಅಂದ್ರೆ ಏನು ಅಂತ ನಗುನಗುತ್ತಲೇ ಕೇಳಿದ ಪ್ರಶ್ನೆಗೆ ವಿರಾಟ್ ಕೂಡಾ ನಗುತ್ತಲೇ ಉತ್ತರಿಸಿದ್ರು.

ಇನ್ನು ಡಯಟ್ ಬಗ್ಗೆ ಕೇಳಿದ ಮೋದಿ , ಚೋಲೆ ಬಟೂರೆ ಮಿಸ್ ಮಾಡಿಕೊಳ್ಳುದಿಲ್ವಾ ಅಂತ ಕಾಲೆಳೆದ್ರು. ಜೊತೆಗೆ ಅನುಷ್ಕ ಹಾಗು ವಿರಾಟ್ ಗೆ ತಂದೆ ತಾಯಿಯಾಗುತ್ತಿರೋದಕ್ಕೆ ಶುಭ ಕೂಡಾ ಹಾರೈಸಿದ್ರು.

ಇನ್ನು ಚೋಲೆ ಭಟೂರೆ ಪ್ರಶ್ನೆ ಗೆ ಕೊಹ್ಲಿ ಅಭಿಮಾನಿಗಳು ಪುಲ್ ಖುಷ್ ಆಗಿದ್ದಾರೆ . ಮೋದಿಗೂ ಕೊಹ್ಲಿಗೆ ಚೋಲೆ ಭಟೂರೆ ಇಷ್ಟ ಅಂತ ಗೊತ್ತು ಅಂತ ಟ್ರೋಲ್ ಮಾಡ್ತಿದ್ದಾರೆ .

ಇನ್ನು ಈ ಕಾಫರೆನ್ಸ ನಲ್ಲಿ ಬಾಲಿವುಡ್ ನಟ ಮಿಲಿಂದ್ ಸೋಮನ್ ಸೇರಿದಂತೆ ಹಲವರು ಭಾಗಿಯಾಗಿದ್ರು.