ಸೋಮವಾರ, ಏಪ್ರಿಲ್ 28, 2025
HomeBreakingಜ್ಯೂನಿಯರ್ ರಾಜ್ ಕುಮಾರ್ ಖ್ಯಾತಿಯ ಜಯಕುಮಾರ್ ಇನ್ನಿಲ್ಲ…!

ಜ್ಯೂನಿಯರ್ ರಾಜ್ ಕುಮಾರ್ ಖ್ಯಾತಿಯ ಜಯಕುಮಾರ್ ಇನ್ನಿಲ್ಲ…!

- Advertisement -

ದಾವಣಗೆರೆ: ಜ್ಯೂನಿಯರ್ ಡಾ.ರಾಜಕುಮಾರ್ ಎಂದೇ ಖ್ಯಾತಿಗಳಿಸಿದ್ದ ನಟ ಹಾಗೂ ರಂಗಕರ್ಮಿ  ಕೊಡಗನೂರು ಜಯಕುಮಾರ್ ನಿಧನರಾಗಿದ್ದಾರೆ. ದಾವಣಗೆರೆಯಲ್ಲಿ ಹೃದಯಾಘಾತದಿಂದ ಜಯಕುಮಾರ್ ವಿಧಿವಶರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.

ತಮ್ಮ ಮುಖಭಾವ, ಅಭಿನಯದಿಂದ ಜ್ಯೂನಿಯರ್ ರಾಜ್ ಕುಮಾರ್ ಎಂದೇ ಪ್ರಸಿದ್ಧಿಯಾಗಿದ್ದ ಜಯಕುಮಾರ್  ಇದುವರೆಗೂ ನಾಡಿನಾದ್ಯಂತ 100 ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರನಿರ್ವಹಿಸಿದ್ದು, ಕಳೆದ ವರ್ಷ ನಾಟಕದಲ್ಲಿ ಅಭಿನಯಿಸುವ ವೇಳೆ ಅವರಿಗೆ ಹೃದಯಾಘಾತವಾಗಿತ್ತು.

ವಿಷ್ಣುವರ್ಧನ್, ಶಿವರಾಜಕುಮಾರ್ ಸೇರಿದಂತೆ ಹಲವು ಹಿರಿ ನಟರ ಜೊತೆ ಚಲನಚಿತ್ರದಲ್ಲಿ ನಟಿಸಿರುವ  ಅವರು ಕನ್ನಡದ 30ಕ್ಕೂ ಹೆಚ್ಚು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕಳೆದ ವರ್ಷ ಹೃದಯದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಜಯಕುಮಾರ್ ಬಳಿಕ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದರು.

ಹಿರಿತೆರೆಯಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೂ ಆರ್ಥಿಕ ಸಮಸ್ಯೆಯಿಂದ ನರಳುತ್ತಿದ್ದ  ಅವರ ಚಿಕಿತ್ಸೆಗಾಗಿ ಜಯಕುಮಾರ್ ಪತ್ನಿ ಹಾಗೂ ಪುತ್ರ ಮಾಧ್ಯಮಗಳ ನೆರವು ಕೋರಿದ್ದರು. ಬಳಿಕ ಚೇತರಿಸಿಕೊಂಡಿದ್ದ ಜಯಕುಮಾರ್ ಇಂದು ದಾವಣೆಗೆರೆಯಲ್ಲಿ ನಿಧನರಾಗಿದ್ದಾರೆ.

ದಾವಣಗೆರೆಯ ಕೊಡಗನೂರಿನ ಜಯಕುಮಾರ್ ಜ್ಯೂನಿಯರ್ ರಾಜ್ ಕುಮಾರ್ ಎಂದೇ ಖ್ಯಾತಿಗಳಿಸಿ ನೂರಾರು ಸ್ಟೇಜ್ ಪ್ರೋಗ್ರಾಂಗಳಲ್ಲಿ ರಾಜ್ ಕುಮಾರ್ ಹಾಡುಗಳಿಗೆ ಅಭಿನಯ ನೀಡಿ ಪ್ರಸಿದ್ಧಿ ಗಳಿಸಿದ್ದರು. ಕಿರುತೆರೆಯ ಫೇಮಸ್ ಹಾಸ್ಯ ಧಾರಾವಾಹಿ ಪಾಪಾ ಪಾಂಡುದಲ್ಲಿಯೂ ಜಯಕುಮಾರ್ ನಟಿಸಿದ್ದರು

RELATED ARTICLES

Most Popular