ಸೋಮವಾರ, ಏಪ್ರಿಲ್ 28, 2025
Homebusinessಎಲ್‌ ಪಿಜಿ ಸಿಲಿಂಡರ್‌ ಹೋಮ್‌ ಡೆಲಿವರಿ ಇನ್ನು ಮೊದಲಿನಂತಲ್ಲ ; ನವೆಂಬರ್‌ 1 ರಿಂದಲೇ ಹೊಸ...

ಎಲ್‌ ಪಿಜಿ ಸಿಲಿಂಡರ್‌ ಹೋಮ್‌ ಡೆಲಿವರಿ ಇನ್ನು ಮೊದಲಿನಂತಲ್ಲ ; ನವೆಂಬರ್‌ 1 ರಿಂದಲೇ ಹೊಸ ನಿಯಮ ಜಾರಿ

- Advertisement -

ನವದೆಹಲಿ : ಎಲ್‌ ಪಿಜಿ ಸಿಲಿಂಡರ್‌ ಹೋಮ್‌ ಡೆಲಿವರಿ ಅದೆಷ್ಟು ಸುಲಭ ಸಾಧ್ಯವಾಗಿತ್ತು ಅಲ್ವಾ..? ಆದರೆ ಇದೊಂದೇ ತಿಂಗಳು ಈ ಸುಲಭ ವ್ಯವಸ್ಥೆ ಜನಸಾಮಾನ್ಯರ ಮುಂದಿರುವುದು. ಯಾಕಂದರೆ ನವೆಂಬರ್‌ ತಿಂಗಳಿನಿಂದ ಎಲ್‌ಪಿಜಿ ಸಿಲಿಂಡರ್‌ ಹೋಮ್‌ ಡೆಲಿವರಿಗೆ ಸಂಬಂಧಿಸಿದಂತೆ ನಿಯಮಗಳು ಬದಲಾಗಲಿವೆ.

ಮುಂದಿನ ತಿಂಗಳ 1ನೇ ತಾರೀಕಿನಿಂದಲೇ ಹೊಸ ರೂಲ್ಸ್‌ ಜಾರಿಗೆ ಬರಲಿದೆ. ಈ ಬಗ್ಗೆ ಈಗಾಗಲೇ ಸರಕಾರಿ ತೈಲ ಕಂಪನಿಗಳು ಸಿದ್ಧತೆ ಮಾಡಿಕೊಂಡಿದ್ದು, ಹೊಸ ವಿತರಣ ವ್ಯವಸ್ಥೆ ಜಾರಿಗೆ ಬರಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ತೈಲ ಕಂಪನಿಗಳು, ಸಿಲಿಂಡರ್‌ನಿಂದ ಅನಿಲ ಕದಿಯುವುದನ್ನು ತಡೆಯಲು ಮತ್ತು ಸರಿಯಾದ ಗ್ರಾಹಕರನ್ನು ಗುರುತಿಸುವ ಮುಖ್ಯ ಉದ್ದೇಶಗಳೊಂದಿಗೆ ಸಿಲಿಂಡರ್ ಹೋಂ ಡೆಲಿವರಿಯಲ್ಲಿ ಹೊಸ ವ್ಯವಸ್ಥೆ ಪರಿಚಯಿಸಲಾಗುತ್ತಿರುವುದಾಗಿ ತಿಳಿಸಿದೆ.
ತೈಲ ಕಂಪನಿಗಳು ಎಲ್‌ಪಿಜಿ (LPG) ಸಿಲಿಂಡರ್‌ಗಳ ಹೊಸ ವಿತರಣಾ ವ್ಯವಸ್ಥೆ ಜಾರಿ ಮಾಡಿದ ನಂತರ, ಸಿಲಿಂಡರ್‌ ಪಡೆಯಲು ಕೇವಲ ಗ್ಯಾಸ್‌ ಬುಕ್‌ ಮಾಡಿದರಷ್ಟೇ ಸಾಲದು. ಸಿಲಿಂಡರ್‌ ಪಡೆಯುವಾಗಲೂ ಕೆಲವು ನಿಯಮಗಳನ್ನು ಅನುಸರಿಸಬೇಕು.

ಹೊಸ ಡೆಲಿವರಿ ವ್ಯವಸ್ಥೆಯನ್ನು ಆರಂಭಿಕವಾಗಿ ದೇಶದ 100 ಸ್ಮಾರ್ಟ್‌ ಸಿಟಿಗಳಲ್ಲಿ ಜಾರಿಗೆ ತರಲಾಗುತ್ತಿದೆ. ಕ್ರಮೇಣ ಅದೇ ವ್ಯವಸ್ಥೆಯನ್ನು ದೇಶದ ಇತರ ಭಾಗಗಳಲ್ಲಿ ಜಾರಿಗೆ ತರಲಾಗುವುದು. ಈಗಾಗಲೇ ರಾಜಸ್ಥಾನದ ಜೈಪುರದಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿದೆ. ಹೊಸ ವ್ಯವಸ್ಥೆಯಲ್ಲಿ ‘ವಿತರಣಾ ದೃಢೀಕರಣ ಕೋಡ್ (ಡಿಎಸಿ) ವಿಧಾನವನ್ನು ಪರಿಚಯಿಸಿದೆ.

ಅಂದರೆ ಸಿಲಿಂಡರ್ ಬುಕ್‌ ಮಾಡಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಂದು ಕೋಡ್ ಅನ್ನು ರವಾನಿಸಲಾಗುತ್ತದೆ. ಸಿಲಿಂಡರ್ ವಿತರಣೆಯ ಸಮಯದಲ್ಲಿ ಈ ಕೋಡ್ ಅನ್ನು ಡೆಲಿವರಿ ಹುಡುಗನಿಗೆ ನೀಡಬೇಕಾಗುತ್ತದೆ. ಈ ಕೋಡ್ ಅನ್ನು ತೋರಿಸದ ಹೊರತು ವಿತರಣೆಯು ಪೂರ್ಣಗೊಳ್ಳುವುದಿಲ್ಲ ಮತ್ತು ಸಿಲಿಂಡರ್‌ ಡೆಲಿವರಿ ಸ್ಟೇಟಸ್ ಬಾಕಿ ಉಳಿಯುತ್ತದೆ.

ನೀವು ಪ್ರಸ್ತುತ ಬಳಸುತ್ತಿರುವ ಮೊಬೈಲ್‌ ಸಂಖ್ಯೆ ಹಾಗೂ ಗ್ಯಾಸ್‌ ಏಜೆನ್ಸಿಗೆ ನೀಡಿರುವ ಮೊಬೈಲ್‌ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದ್ದರೆ, ನಿಮ್ಮ ಮೊಬೈಲ್ ಸಂಖ್ಯೆಯನ್ನು ವಿತರಣೆಯ ಸಮಯದಲ್ಲಿ ನವೀಕರಿಸಲು ಸಾಧ್ಯವಿದೆ. ಇದಕ್ಕಾಗಿ ಡೆಲಿವರಿ ಹುಡುಗನಿಗೆ ಅಪ್ಲಿಕೇಶನ್ ಒದಗಿಸಲಾಗುವುದು. ವಿತರಣೆಯ ಸಮಯದಲ್ಲಿ ಆ ಅಪ್ಲಿಕೇಶನ್‌ನ ಸಹಾಯದಿಂದ ನಿಮ್ಮ ಮೊಬೈಲ್ ಸಂಖ್ಯೆಯನ್ನು ಡೆಲಿವರಿ ಬಾಯ್ ಬಳಿ ನವೀಕರಿಸಬಹುದು.

ಅಪ್ಲಿಕೇಶನ್ ಮೂಲಕ ಮೊಬೈಲ್ ಸಂಖ್ಯೆಯನ್ನು ರಿಯಲ್‌ ಟೈಮ್‌ ಆಧಾರದಲ್ಲಿ ನವೀಕರಿಸಲಾಗುತ್ತದೆ. ಇದರ ನಂತರ ಒಂದೇ ಸಂಖ್ಯೆಯಿಂದ ಕೋಡ್ ಅನ್ನು ರಚಿಸುವ ಸೌಲಭ್ಯವಿರುತ್ತದೆ. ಒಂದು ವೇಳೆ ನೀವು ತಪ್ಪು ವಿಳಾಸ ಹಾಗೂ ಮೊಬೈಲ್‌ ಸಂಖ್ಯೆ ನೀಡಿದ್ದರೆ, ನಿಮ್ಮ ಸಿಲಿಂಡರ್‌ ಅನ್ನು ತಡೆಹಿಡಿಯಲಾಗುವುದು. ಹೊಸ ವ್ಯವಸ್ಥೆಯು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಸಿಲಿಂಡರ್‌ಗಳನ್ನು ಹೊಸ ವ್ಯವಸ್ಥೆಯಿಂದ ಹೊರಗಿಡಲಾಗಿದೆ.

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular