ಬೆಂಗಳೂರು : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕಾಲೇಜುಗಳು ಪುನರಾರಂಭ ವಿಳಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪಠ್ಯಕ್ರಮದಲ್ಲಿ ಶೇ.30 ರಷ್ಟು ಪಠ್ಯ ಕಡಿತಕ್ಕೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಬಾರದು ಅನ್ನೋ ಕಾರಣಕ್ಕೆ ವಿದ್ಯಾರ್ಥಿಗಳಿಗೆ ನೀಡುವ ಸಲುವಾಗಿ ಪ್ರೀ ರೆಕಾರ್ಡೆಡ್ ವಿಡಿಯೋ ತರಗತಿಗಳನ್ನುಯೂ ಟ್ಯೂಬ್ ನಲ್ಲಿ ಆರಂಭಿಸಲಾಗಿದೆ. ಅಲ್ಲದೇ
ಕೇಂದ್ರ ಸರಕಾರ ಈಗಾಗಲೇ 1 ರಿಂದ 12ನೇ ತರಗತಿ ವರೆಗೆ ಶೇ.30ರಷ್ಟು ಪಠ್ಯ ಕಡಿತಗೊಳಿಸಿದೆ.ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಸೂಚನೆಯಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಸಹ ಪಠ್ಯ ಕಡಿತ ಮಾಡಲು ಕ್ರಮಕೈಗೊಂಡಿದೆ.

ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳ ಪಠ್ಯ ಕಡಿತವನ್ನು ಸಿಬಿಎಸ್ ಈ ಶಿಕ್ಷಣ ಮಂಡಳಿಯು ನಿಗದಿ ಪಡಿಸಿದಂತೆ ಯಥವತ್ತಾಗಿ ಅಳವಡಿಸಿಕೊಂಡಿದೆ. ಉಳಿದ ವಿಯಷಗಳಲ್ಲಿ ಇಲಾಖೆಯು ಪಠ್ಯ ಪುಸ್ತಕ ರಚನಾ ಸಮಿತಿ ಹಾಗೂ ಪರಿಷ್ಕರಣಾ ಸಮಿತಿಯ ಸದಸ್ಯರನ್ನು ಸಂಪರ್ಕಿಸಿ ಶೇ.30ರಷ್ಟು ಪಠ್ಯವನ್ನು ಕಡಿತಗೊಳಿಸಿದೆ.

ಪದವಿಪೂರ್ವ ತರಗತಿಗಳ ವಿಜ್ಞಾನ ವಿಷಯಗಳನ್ನು ಹೊರತುಪಡಿಸಿ ಉಳಿದ 33 ವಿಷಯಗಳಲ್ಲಿ ಶೇಕಡಾ 30 ರಷ್ಟು ಪಠ್ಯವನ್ನು ಈ ಪಠ್ಯ ಕ್ರಮದಲ್ಲಿ ಕಡಿತಗೊಳಿಸಲಾಗಿರುವುದು ಕೇವಲ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಮಾತ್ರವೇ ಸೀಮಿತವಾಗಿರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
