ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭೋಜನ ಶಾಲೆಯಲ್ಲಿ ಅಗ್ನಿಅವಘಡ ಸಂಭವಿಸಿದೆ. ತಡರಾತ್ರಿ ಮಸಾಲೆ ಹುರಿದಿಟ್ಟ ಕಟಾರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ಸ್ಥಳೀಯರ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಬಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಬೆಂಕಿ ಬೀಳುತ್ತಿದ್ದಂತೆಯೇ ಮಸಾಲೆ ಸಹಿತ ಕಟಾರಗಳನ್ನು ಭೋಜನ ಶಾಲೆಯಿಂದ ಹೊರಗೆ ತೆಗೆಯಲಾಗಿದೆ. ಅಗ್ನಿ ಅವಘಡ ನಡೆಯುತ್ತಿದ್ದಂತೆಯೇ ನೂಚಿಲದ ಭೂತನೇಮೋತ್ಸವದಲ್ಲಿ ಪಾಲ್ಗೊಂಡಿದ್ದವರೆಲ್ಲಾ ಓಡೋಡಿ ಬಂದಿದ್ದಾರೆ. ಕೂಡಲೇ ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ. ಆದರೆ ಯಾವ ಕಾರಣಕ್ಕೆ ಅಗ್ನಿ ಅವಘಡ ಸಂಭವಿಸಿದೆ ಅನ್ನೋದು ಇನ್ನಷ್ಟೇ ತಿಳಿದುಬರಕೇಕಿದೆ.