ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ನಂದಕಿಶೋರ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾದ ಬರೋದು ಫಿಕ್ಸ್ ಆಗಿದೆ. ಧ್ರುವ ಸರ್ಜಾ ನಟನೆಯ ಹೊಸ ಸಿನಿಮಾಕ್ಕೆ ಟೈಟಲ್ ಫಿಕ್ಸ್ ಆಗಿದ್ದು, ಪೋಸ್ಟರ್ ಕೂಡ ಚಿತ್ರತಂಡ ರಿಲೀಸ್ ಮಾಡಿದೆ. ಮಾತ್ರವಲ್ಲ ಸಿನಿಮಾದ ಮೂಹೂರ್ತವನ್ನೂ ಅದ್ದೂರಿಯಾಗಿ ನಡೆಸಲಾಗಿದೆ.

ಚಿರಂಜೀವಿ ಸರ್ಜಾ ಅಗಲಿಕೆಯ ನಂತರದಲ್ಲಿ ಸಿನಿಮಾದಿಂದ ದೂರ ಉಳಿದಿದ್ದ ಧ್ರುವ ಸರ್ಜಾ ನೋವಲ್ಲೇ ಪೊಗರು ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದ್ದರು. ಪೊಗರು ಸಿನಿಮಾದ ತೆರೆಗೆ ಬರಲು ಸಿದ್ದವಾಗಿದ್ದು, ಸಿನಿಮಾದ ಹಾಡುಗಳು ಈಗಾಗಲೇ ಭರ್ಜರಿ ಸೌಂಡ್ ಮಾಡ್ತಿವೆ. ಅದ್ರಲ್ಲೂ ಟಾಲಿವುಡ್ ನಲ್ಲಿ ಹಾಡು ಅತೀ ಹೆಚ್ಚು ವೀಕ್ಷಣೆಯನ್ನು ಕಂಡಿದೆ.

ರಶ್ಮಿಕಾ ನಾಯಕಿಯಾಗಿ ನಟಿಸಿರುವ ಪೊಗರು ಸಿನಿಮಾದಲ್ಲಿ ಧ್ರುವ ಸರ್ಜಾ ಡಿಫ್ರೆಂಟ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಡೈಲಾಗ್, ಟೀಸರ್, ಹಾಡು, ಪೋಸ್ಟರ್ ಹಾಗೂ ಟೀಸರ್ ಈಗಾಗಲೇ ಸಖತ್ ಸೌಂಡ್ ಮಾಡ್ತಿದೆ. ಸಿನಿಮಾ ಪ್ರೇಕ್ಷಕರಲ್ಲಿಯೂ ಕುತೂಹಲವನ್ನು ಮೂಡಿಸಿದೆ.

ಇದರ ನಡುವಲ್ಲೇ ಧ್ರುವ ಸರ್ಜಾ ಹಾಗೂ ಖ್ಯಾತ ನಿರ್ದೇಶಕ ನಂದಕಿಶೋರ್ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾದ ಸೆಟ್ಟೇರಿದೆ. ಧ್ರುವ ಸರ್ಜಾ ಹೊಸ ಸಿನಿಮಾಕ್ಕೆ ದುಬಾರಿ ಅಂತಾ ಟೈಟಲ್ ಫಿಕ್ಸ್ ಮಾಡಲಾಗಿದೆ.

ಸಿನಿಮಾದ ಪೋಸ್ಟರ್ ನ್ನು ಕೂಡ ಚಿತ್ರ ತಂಡ ರಿಲೀಸ್ ಮಾಡಿದೆ. ಚಿರು ಹುಟ್ಟು ಹಬ್ಬದ ದಿನದಂದೇ ಧ್ರುವ ಸರ್ಜಾ ನಂದಕಿಶೋರ್ ಜೊತೆಗೆ ಮತ್ತೊಂದು ಸಿನಿಮಾ ಮಾಡೋದಾಗಿ ಘೋಷಿಸಿದ್ದರು.ಅಲ್ಲದೇ ಅಂದೇ ಹೊಸ ಸಿನಿಮಾದ ಸ್ಕ್ರಿಫ್ಟ್ ಪೂಜೆಯನ್ನು ನೆರವೇರಿಸಲಾಗಿತ್ತು.

ಉದಯ್ ಮೆಹ್ತಾ ನಿರ್ಮಾಣದಲ್ಲಿ , ನಂದಕಿಶೋರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ದುಬಾರಿ ಸಿನಿಮಾದ ಮುಹೂರ್ತ ಇಂದು ಬೆಳಿಗ್ಗೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ನೆರವೇರಿದೆ. ಈ ಕುರಿತು ನಟಿ ತಾರಾ ತಮ್ಮ ಪೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಸಿನಿಮಾದಲ್ಲಿ ನಟಿಸುತ್ತಿರುವ ಹಿರಿಯ ನಟಿ ತಾರಾ ಅವರೇ ಸಿನಿಮಾಕ್ಕೆಕ್ಲ್ಯಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಅಲ್ಲದೇ ದುಬಾರಿ ಸಿನಿಮಾಗೆ ಐ ಆ್ಯಮ್ ವೆರಿ ಕಾಸ್ಟ್ಲಿ ಎನ್ನುವ ಟ್ಯಾಗ್ ಲೈನ್ ಇಡಲಾಗಿದೆ.