ಸೋಮವಾರ, ಏಪ್ರಿಲ್ 28, 2025
HomeBreakingShivalinga : ಚೂರಾದ ಶಿವಲಿಂಗ ಮತ್ತೆ ಒಂದಾಗುತ್ತೆ, ಸಿಡಿಲಿನಿಂದ ಕಾಪಾಡ್ತಾನೆ ಶಿವ

Shivalinga : ಚೂರಾದ ಶಿವಲಿಂಗ ಮತ್ತೆ ಒಂದಾಗುತ್ತೆ, ಸಿಡಿಲಿನಿಂದ ಕಾಪಾಡ್ತಾನೆ ಶಿವ

- Advertisement -

ಶಿವ.. ಆತ ಭಕ್ತವತ್ಸಲ. ಭಕ್ತರು ಭಕ್ತಿಯಿಂದ ಹರ ಅಂದ್ರೆ ಓಡಿಬರುತ್ತಾನೆ. ಆತನಿಗೆ ರಾಕ್ಷಸರಾದ್ರು ಸರಿ ಉತ್ತಮರಾದ್ರು ಸರಿ ಭಕ್ತಿ ಒಂದಿದ್ರೆ ಸಾಕು. ಜಗತ್ತು ಸಂಕಷ್ಟದಲ್ಲಿ ದ್ದಾಗ ಕಾಪಾಡೋಕೆ ನಿಲ್ಲೋನೇ ಈ ಮಾಹಾದೇವ (Shivalinga). ಪುರಾಣಗಳಿಂದ ಹಿಡಿದು ಇಂದಿಗೂ ಕಾಯುತ್ತಾನೆ. ಜಗತ್ತನ್ನು ಅನ್ನೋ ನಂಬಿಕೆ ಭಕ್ತರಲ್ಲಿದೆ . ಇದಕ್ಕೆ ಸಾಕ್ಷಿ ಪುರಾಣದಲ್ಲಿ ಕಾಣಸಿಗುತ್ತೆ. ಈ ದೇವನ ಶಕ್ತಿಯನ್ನು ಸಾರುವ ಸಾವಿರಾರು ದೇವಾಲಯಗಳು ಭಾರತದಲ್ಲಿದೆ ಅಂತಹದ್ದೇ ಒಂದು ದೇವಾಲಯವಿದು. ಈ ದೇವಾಲಯ ವಿಸ್ಮಯಗಳ ಆಗರ ಅಂದ್ರೆ ತಪ್ಪಾಗಲ್ಲ. ಯಾಕಂದ್ರೆ ಇಲ್ಲಿ ಇಂದಿಗೂ ಶಿವನ ಪವಾಡ ನಡೆಯುತ್ತಲೇ ಇದೆ. ಶಿವ ಈ ದೇವಾಲಯದಲ್ಲಿ ನಿಂತು ವಿಪತ್ತಿನಿಂದ ಸುತ್ತಮುತ್ತಲ ಪ್ರಕೃತಿಯನ್ನು ಕಾಯುತ್ತಿದ್ದಾನೆ. ಪ್ರಕೃತಿಯ ವಿಪತ್ತನ್ನು ತನ್ನ ಮೇಲೆ ಎಳೆದುಕೊಂಡು ನಿಂತಿದ್ದಾನೆ ಶಿವ.

ಅಂತಹದ್ದು ಈ ದೇವಾಲಯದಲ್ಲಿ ಏನು ನಡೆಯುತ್ತೆ ಅಂತ ನಿಮಗೆ ಗೊತ್ತಾದ್ರೆ ಆಶ್ಚರ್ಯವಾಗದೇ ಇರದು . ಈ ದೇವಾಲಯಕ್ಕೆ 12 ವರ್ಷಕ್ಕೆ ಮಹಾ ಸಿಡಿಲೊಂದು ಬಡಿಯುತ್ತೆ. ಅದು ಗರ್ಭಗುಡಿಯಲ್ಲಿಯಲ್ಲಿರೋ ಲಿಂಗಕ್ಕೆ. ಆಗ ಆ ಶಿವಲಿಂಗ ಚೂರು ಚೂರಾಗಿ ಹೋಗುತ್ತೆ. ಆದ್ರೆ ಅಲ್ಲಿ ಮತ್ತೊಂದು ವಿಚಿತ್ರ ನಡೆಯುತ್ತೆ.ಅದು ಶಿವಲಿಂಗವನ್ನು ಮತ್ತೆ ಜೋಡಿಸೋ ಪ್ರಕ್ರಿಯೆ ಅದ್ಯಾವಾಗ ಶಿವಲಿಂಗವನ್ನು ಜೋಡಿಸ್ತಾರೋ ಮತ್ತೆ ಶಿವಲಿಂಗ ಮೂಲ ರೂಪ ಪಡೆಯುತ್ತೆ ಅನ್ನೋದೇ ವಿಶೇಷ.

ಈ ಶಿವಲಿಂಗವನ್ನು ಜೋಡಿಸೋ ಪದ್ದತಿನೂ ತುಂಬಾ ವಿಚಿತ್ರವಾಗಿದೆ. ಅದೇನಂದ್ರೆ ಶಿವಲಿಂಗಕ್ಕೆ (Shivalinga) ಸಿಡಿಲು ಬಡಿದಾಗ ಲಿಂಗ ಚೂರು ಚೂರಾಗುತ್ತೆ. ನಂತರ ದೇವಾಲಯದ ಪೂಜಾರಿ ಗಳು ಲಿಂಗದ ಭಾಗಗಳನ್ನು ಹೆಕ್ಕಿ ತಂದು ಬೆಣ್ಣೆಯ ಸಹಾಯ ಜೋಡಿಸುತ್ತಾರೆ. ಈ ಬೆಣ್ಣೆಯನ್ನು ಹಸುವಿನ ಮೊದಲ ಹಾಲಿನಿಂದಲೇ ತಯಾರಿಸಬೇಕಾಗುತ್ತೆ. ಕೆಲವು ತಿಂಗಳ ನಂತರ ಶಿವಲಿಂಗ ಮೊದಲ ರೂಪವನ್ನು ಪಡೆಯುತ್ತೆ.

ಈ ವಿಚಿತ್ರವಾದ ಘಟನೆಗೂ ಒಂದು ಪೌರಾಣಿಕ ಹಿನ್ನಲೆ ಇದೆ. ಪುರಾಣಗಳ ಪ್ರಕಾರ ಒಂದು ಬಾರಿ ವಸಿಷ್ಠ ಮುನಿಗಳು ಜಗತ್ತಿನ್ನು ಸಿಡಿಲಿನಿಂದ ಆಗುವ ಅನಾಹುತದಿಂದ ಪ್ರಪಂಚ ವನ್ನು ರಕ್ಷಿಸುವಂತೆ ಶಿವನ್ನು ಕೇಳಿದ್ರು. ಆಗ ಇಂದ್ರನನ್ನು ಕರೆದ ಶಿವ ಸಿಡಿಲು ಬರದಂತೆ ಮಾಡುವಂತೆ ಹೇಳಿದ್ದಾರೆ. ಆದ್ರೆ ಅದು ಪ್ರಕೃತಿ ಸಹಜ ಪ್ರಕ್ರಿಯೆ ಆದ್ದರಿಂದ ಅದು ಸಾದ್ಯವಿಲ್ಲ ಅಂತ ಶಿವನಿಗೆ ಇಂದ್ರ ಮನವಿ ಮಾಡಿದ್ದಾರೆ. ಅದಕ್ಕೆ ತಾನು ಬೆಟ್ಟದ ಮೇಲೆ ನೆಲೆಸೋದಾಗಿ ಹೇಳಿ ಅಲ್ಲಿ ತನ್ನ ಮೇಲೆ ಸಿಡಿಲು ಬೀಳಲಿ ಅಂತ ಆದೇಶಿಸಿದ್ದಾರೆ. ಅಂದಿನಿಂದ ಶಿವ ವಿಪತ್ತನ್ನು ತನ್ನ ಮೇಲೆಳೆದು ಪ್ರಕೃತಿಯನ್ನು ರಕ್ಷಿಸುತ್ತಾನೆ ಅನ್ನೋದು ಭಕ್ತರ ನಂಬಿಕೆ.

ಇನ್ನು ಈ ದೇವಾಲಯ ಇರೋದು ನಾಗನ ರೀತಿ ಕಾಣುವ ಬೆಟ್ಟದಲ್ಲಿ ಇದಕ್ಕೂ ಒಂದು ಕಥೆ ಇದೆ. ಶಿವ ರಾಕ್ಷಸನೊಬ್ಬನ್ನು ಸಂಹರಿಸಿದ ನಂತರ ರಾಕ್ಷಸ ಬೆಟ್ಟವಾಗಿ ಬದಲಾದ. ಇದೇ ಬೆಟ್ಟದಲ್ಲಿ ಶಿವ ನೆಲೆಸಿದ ಅನ್ನೋದ ಸ್ಥಳ ಪುರಾಣ. ಇನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ದೇವಾಲಯದ ಧ್ವಜಕ್ಕೆಸಿಡಿಲು ಬಡಿಯುತ್ತೆ. ಆದ್ರೆ ಈ ವರೆಗೆ ದೇವಾಲಯದ ಉಳಿದ ಯಾವುದೇ ಭಾಗಕ್ಕೆ ಹಾನಿಯಾಗಿಲ್ಲ ಅನ್ನೋದೇ ಅದ್ಬುತ.

ಅಂದ ಹಾಗೆ ಈ ದೇವಾಲಯ ಇರೋದು ನಮ್ಮ ರಾಜ್ಯದಲ್ಲಲ್ಲ. ಬದಲಾಗಿ ಶಿವನ ಆವಸ ಸ್ಥಾನ ಅನ್ನಿಸಿಕೊಂಡಿರೋ ಹಿಮಾಲಯದ ತಪ್ಪಲಿನ ರಾಜ್ಯ ಹಿಮಾಚಲ ಪ್ರದೇಶದಲ್ಲಿ. ಹಿಮಾಚಲಪ್ರದೇಶದ ಪುಲು ಜಿಲ್ಲೆಯಿಂದ 20 ಕಿಲೋ ಮೀಟರ್ ದೂರದಲ್ಲಿದೆ ಈ ಮಹಾದೇವನ (Bijli Mahadev) ಮಂದಿರ. ಇಲ್ಲಿ ಸಿಡಿಲು ಬೀಳೋದ್ರಿಂದ ಇದಕ್ಕೆ ಬಿಜಲಿ ಮಹಾದೇವ್ ಅನ್ನೋ ಹೆಸರಿನಿಂದ ಕರೆಯಲಾಗುತ್ತೆ, ಇಂತ ವಿಸ್ಮಯದ ದೇವಾಲಯಗಳು ಭಾರತದಲ್ಲಿ ಸಾಕಷ್ಟಿವೆ ಸಾದ್ಯವಾದ್ರೆ ಒಂದು ಸಾರಿ ಬೇಟಿ ಮಾಡಿ.

ಇದನ್ನೂ ಓದಿ : volcano Ganesh : ಜ್ವಾಲಾಮುಖಿಯ ತುದಿಯಲ್ಲಿ ನೆಲೆಸಿದ್ದಾನೆ ಗಣಪ

ಇದನ್ನೂ ಓದಿ : ಸಕಲ ರೋಗಕ್ಕೂ ಇಲ್ಲಿದೆ ಪರಿಹಾರ : ನಾಗದೋಷ ಪರಿಹರಿಸುತ್ತಾನೆ ಶಾಸ್ತಾರ ಸುಬ್ರಹ್ಮಣ್ಯೇಶ್ವರ

(Shivalinga reunited with Shura, Shiva rescued from Siddily )

Vandana kommunje | ವಂದನಾ ಕೊಮ್ಮುಂಜೆ
Vandana Kommunje Senior Content Writer. Working in more than 10 Years in Kannada Famous News Channesl. Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular