ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಂಬಾನಿ ಕುಟುಂಬಕ್ಕೆ ಮೂರನೆ ತಲೆಮಾರಿನ ಎಂಟ್ರಿಯಾಗಿದ್ದು ವಾರಸುದಾರನ ಆಗಮನಕ್ಕೆ ಅಂಬಾನಿ ಕುಟುಂಬ ಫುಲ್ ಖುಷಿಯಾಗಿದೆ.
ರಿಲಯನ್ಸ್ ಉದ್ಯಮಿ ಮುಖೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಹಾಗೂ ಶ್ಲೋಕಾ ಅಂಬಾನಿ ದಂಪತಿಗೆ ಗಂಡು ಮಗು ಜನಿಸಿದ್ದು, ಮುಖೇಶ್ ಅಂಬಾನಿ ಮೊಮ್ಮಗನ ಜೊತೆ ಪೋಸ್ ನೀಡಿ ಖುಷಿ ಹಂಚಿಕೊಂಡಿದ್ದಾರೆ.
ಶ್ಲೋಕಾ ಅಂಬಾನಿ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಆರೋಗ್ಯವಾಗಿದ್ದಾರೆ. ಮೊದಲ ಬಾರಿಗೆ ಅಜ್ಜಿ-ತಾತನಾದ ನೀತಾ ಹಾಗೂ ಮುಖೇಶ್ ಅಂಬಾನಿ ಸಂಭ್ರಮಿಸುತ್ತಿದ್ದಾರೆ ಎಂದು ಅಂಬಾನಿ ಕುಟುಂಬದ ವಕ್ತಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಕಾಶ್ ಅಂಬಾನಿ ಹಾಗೂ ಶ್ಲೋಕಾ ಅಂಬಾನಿ ವಿವಾಹ 2019 ರಲ್ಲಿ ಅದ್ದೂರಿಯಾಗಿ ನಡೆದಿತ್ತು. ರೋಸಿ ಬ್ಲೂ ಎಂಡಿ ರಸ್ಸೆಲ್ ಮೆಹ್ತಾ ಪುತ್ರಿ ಶ್ಲೋಕಾ ಲಂಡನ್ ನ ಸ್ಕೂಲ್ ಆಫ್ ಎಕಾನಾಮಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು 2014 ರಲ್ಲಿ ಭಾರತಕ್ಕೆ ಮರಳಿ ತಂದೆಯ ಉದ್ಯಮದಲ್ಲಿ ಕೈಜೋಡಿಸಿದ್ದರು.
ಆಕಾಶ್ ಕೂಡ ಅಂಬಾನಿ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟು 7820 ಸಾವಿರ ಕೋಟಿ ಆಸ್ತಿ ಹೊಂದಿರುವ ಮುಖೇಶ್ ಅಂಬಾನಿ ವಿಶ್ವದ 10 ಪ್ರಮುಖ ಶ್ರೀಮಂತರಲ್ಲಿ ಸ್ಥಾನ ಪಡೆದಿದ್ದಾರೆ. ಭಾರತದಲ್ಲಿ ರಿಲಯನ್ಸ್ ಉದ್ಯಮವನ್ನು ಕಟ್ಟಿ ಬೆಳೆಸಿದ್ದಾರೆ.