ಬುಧವಾರ, ಏಪ್ರಿಲ್ 30, 2025
HomeCinemaರಾಬರ್ಟ್ ಬೆಡಗಿಯ ಸಾಹಸಕ್ಕೆ ಸಲಾಂ ಎಂದ ಮಲೆನಾಡು…! ಅಪರೂಪಕ್ಕೆ ಅಜ್ಜಿಮನೆಗೆ ಬಂದ ಹುಡುಗಿ ಮಾಡಿದ್ದೇನು ಗೊತ್ತಾ..!?

ರಾಬರ್ಟ್ ಬೆಡಗಿಯ ಸಾಹಸಕ್ಕೆ ಸಲಾಂ ಎಂದ ಮಲೆನಾಡು…! ಅಪರೂಪಕ್ಕೆ ಅಜ್ಜಿಮನೆಗೆ ಬಂದ ಹುಡುಗಿ ಮಾಡಿದ್ದೇನು ಗೊತ್ತಾ..!?

- Advertisement -

ಮಿಸ್ ಸುಪ್ರಾಇಂಟರ್ ನ್ಯಾಷನಲ್ ಖ್ಯಾತಿಯ ಆಶಾ ಭಟ್ ಸದ್ಯ ರಾಬರ್ಟ್ ಬೆಡಗಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಜೋಡಿ ಯಾಗಿ ನಟಿಸಿದ ಆಶಾ ಭಟ್ ಶೂಟಿಂಗ್ ಮುಗಿಸಿದ ಖುಷಿಯಲ್ಲಿ ಮಲೆನಾಡಿನತ್ತ ಮುಖ ಮಾಡಿದ್ದು. ಸಖತ್ ಎಂಜಾಯ್ ಮಾಡ್ತಿದ್ದಾರೆ.

ಮೂಲತಃ ಮಲೆನಾಡಿನ ಬೆಡಗಿ ಆಶಾ ಭಟ್ ಸದ್ಯ ಸ್ಯಾಂಡಲ್ ವುಡ್ ಹಾಗೂ ಇತರ ಭಾಷೆಗಳಲ್ಲಿ ಬಹುಬೇಡಿಕೆಯ ನಟಿ. ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ರಾಬರ್ಟ್ ಸಿನಿಮಾ ಶೂಟಿಂಗ್ ಮುಗಿಸಿರುವ ಆಶಾ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.

ತಮ್ಮ ಫ್ರೀ ಟೈಂನಲ್ಲಿ ಮಲೆನಾಡಿನ ಮಡಿಲಲ್ಲಿರೋ ತಾಯಿಯ ತವರು ಅಂದ್ರೇ ಅಜ್ಜನ ಮನೆಗೆ ಬಂದಿರೋ ಆಶಾ ಭಟ್ ಅಲ್ಲಿಯ ಅಡಿಕೆ ಕೊಯ್ಲಿನ ಸಂದರ್ಭವನ್ನು ಸಖತ್ ಎಂಜಾಯ್ ಮಾಡಿದ್ದಾರೆ.

ಅಜ್ಜನ ಮನೆಯ ಅಂಗಳದಲ್ಲಿ ಕೂತು ಇತರ ಅಡಿಕೆ ಸುಲಿಯುವ ಹೆಂಗಸರ ಜೊತೆ ಆಶಾ ಭಟ್ ಕೂಡ ಅಡಿಕೆ ಸುಲಿದಿದ್ದು ವೀಡಿಯೋ ವನ್ನು ಇನ್ ಸ್ಟಾ ಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಕೇವಲ ಅಡಿಕೆ ಸುಲಿದಿದ್ದು ಮಾತ್ರವಲ್ಲ ಚಿಕ್ಕಮಕ್ಕಳಂತೆ ಭತ್ತದ ಗದ್ದೆಯಲ್ಲೂ ಓಡಾಡಿ ಆಟವಾಡಿದ ಆಶಾ ತಮ್ಮ ಬಾಲ್ಯದ ನೆನಪುಗಳನ್ನು ಹಸಿರಾಗಿಸಿಕೊಂಡಿದ್ದಾರೆ.

ಈ ಎಲ್ಲ ಪೋಟೋಗಳನ್ನು ಇನ್ ಸ್ಟಾಗ್ರಾಂ ನಲ್ಲಿ ಆಶಾ ಭಟ್ ಹಂಚಿಕೊಂಡಿದ್ದಾರೆ. ಮೂಲತಃ ಮಲೆನಾಡಿನ ಭದ್ರಾವತಿ ಮೂಲದವರಾದ ಆಶಾ ಭಟ್ ತಮ್ಮ ತಾಯ್ನೆಲದ ಸೊಗಡನ್ನು ಸಖತ್ ಎಂಜಾಯ್ ಮಾಡಿದ್ದು ಪೋಟೋ ಈ ವಿಡಿಯೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

2014 ರಲ್ಲಿ ನಡೆದ ಮಿಸ್ ಸುಪ್ರಾ ಇಂಟರ್ ನ್ಯಾಷನಲ್ ನಲ್ಲಿ ಆಶಾ ಭಟ್ ವಿಜೇತರಾಗಿದ್ದು, ಇದಾದ ಬಳಿಕ ನಟನೆಯತ್ತ ಮುಖಮಾಡಿದರು. ಆಶಾ ಉತ್ತಮ ಹಾಡುಗಾರ್ತಿ ಕೂಡ ಆಗಿದ್ದು ನೃತ್ಯಾಭ್ಯಾಸವನ್ನು ಅಧ್ಯಯನ ಮಾಡಿದ್ದಾರೆ. ಆಶಾ ನಟಿಸಿರುವ ರಾಬರ್ಟ್ ಸಿನಿಮಾಗೆ ಅಭಿಮಾನಿಗಳು ಕಾದಿದ್ದು ಜನವರಿಗೆ ರಿಲೀಸ್ ಆಗೋ ಸಾಧ್ಯತೆ ಇದೆ.

https://www.instagram.com/p/CJIrSDDgpRT/
RELATED ARTICLES

Most Popular