ಸೋಮವಾರ, ಏಪ್ರಿಲ್ 28, 2025
HomeBreakingಎಲೆಯಲ್ಲೇ ಮಾನಮುಚ್ಚಿಕೊಂಡ ಜೋಡಿ....! ಇದು ನೀವೆಂದೂ ನೋಡಿರದ ಪೋಟೋಶೂಟ್...!!

ಎಲೆಯಲ್ಲೇ ಮಾನಮುಚ್ಚಿಕೊಂಡ ಜೋಡಿ….! ಇದು ನೀವೆಂದೂ ನೋಡಿರದ ಪೋಟೋಶೂಟ್…!!

- Advertisement -

ಎಲ್ಲವೂ ಒಂದು ಚೌಕಟ್ಟಿನಲ್ಲಿದ್ದರೇ ಚೆಂದ. ಅತಿಯಾದರೇ ಅಮೃತವೂ ವಿಷ ಎನ್ನುವಂತೆ ಪೋಟೋಶೂಟ್ ಎಂಬ ಟ್ರೆಂಡ್ ಈಗ ಸಭ್ಯತೆಯ ಗೆರೆ ದಾಟಿ ಅಸಭ್ಯತೆಯ,ಅಶ್ಲೀಲತೆಯ ಅಂಗಳದಲ್ಲಿ ನಿಂತಿದೆ.

ಜೋಡಿಯೊಂದು ಎಲೆಯಲ್ಲಿ ಮಾನ ಮುಚ್ಚಿಕೊಂಡು ಪೋಟೋಶೂಟ್ ಮಾಡಿಸಿಕೊಂಡಿದ್ದು ಪೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಬಾನೋ ಬೆಂಗಾಲಿ ಎಂಬ ಪೇಸ್ ಬುಕ್ ಪೇಜ್ ಮೂಲಕ ಸೋಷಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟ ಈ ಪೋಟೋಶೂಟ್ ನಲ್ಲಿ ಹುಡುಗ-ಹುಡುಗಿ ಕೇವಲ ಬಾಳೆಎಲೆ,ಕೆಸುವಿನ ಎಲೆ ಬಳಸಿ ಮಾನ ಮುಚ್ಚಿಕೊಂಡು ರೋಮಾನ್ಸ್ ಮಾಡುತ್ತ ಪೋಟೋಗೆ ಪೋಸು ನೀಡಿದ್ದಾರೆ.

Asterise photography ಕಲ್ಪನೆಯಲ್ಲಿ ಮೂಡಿಬಂದ ಈ ಪೋಟೋಶೂಟ್ ಈಗ ಸಭ್ಯಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದು, ಜನ ಪೋಟೋಗಳಿಗೆ ಮನಬಂದಂತೆ ಕಮೆಂಟ್ ಮಾಡ್ತಿದ್ದಾರೆ.

ಹಾಗೇ ನೋಡಿದರೇ ಈ ಸಾಹಸ ಇದೇ ಮೊದಲಲ್ಲ. ಹಿಂದೊಮ್ಮೆ ಬಾಲಿವುಡ್ ನಟಿ ಕಿಯಾರಾ ಇಂತಹುದೇ ಪೋಟೋಶೂಟ್ ಮಾಡಿಸಿ ಕೊಂಡು ಜನರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇನ್ನೂ ಈ ಪೋಟೋಶೂಟ್ ಕಾನ್ಸಪ್ಟ್ ಯಾರದ್ದು ಅನ್ನೋದು ಗೊತ್ತಿಲ್ಲ. ಆದರೆ ಪೋಟೋಶೂಟ್ ಮಾಡಿಸಿಕೊಂಡ ಜೋಡಿ ಮಾತ್ರ ಸೋಷಿಯಲ್ ಮೀಡಿಯಾ ದಲ್ಲಿ ಸಖತ್ ಟ್ರೋಲ್ ಆಗಿದ್ದು, ಪೋಟೋ ನೋಡಿದ ಹಿರಿಯರೊಬ್ಬರು ನೀವಿರುವ ಜಾಗಕ್ಕೆ ಒಂದು ಆಡು,ಹಸು ಅಥವಾ ಮೇಕೆ‌ ಬರಬಾರದೇಕೆ ಎಂದು ಪ್ರಶ್ನಿಸಿದ್ದಾರೆ.

ಇನ್ನೊಬ್ಬರು ನೀವು ಪೂರ್ತಿ ಬಟ್ಟೆ ಕಳೆದುಕೊಂಡಿದ್ದಾದರೂ ಹೇಗೆ? ಬನ್ನಿ ಪೊಲೀಸ್ ಸ್ಟೇಶನ್ ಗೆ ಹೋಗೋಣ ಎಂದಿದ್ದಾರೆ.

ಯುವಕನೊರ್ವ ಇದು ಫ್ರೀ ವೆಡ್ಡಿಂಗ್ ಅಲ್ಲ ಫ್ರೀ ಹನಿಮೂನ್ ಶೂಟ್ ತರ ಇದೆ. ಇನ್ನು ಮುಂದಿನ ದೃಶ್ಯಾವಳಿಗೆ ಕಾದಿದ್ದೇವೆ ಎಂದಿದ್ದಾನೆ.


ಒಟ್ಟಿನಲ್ಲಿ ಎಕ್ಸ್ ಪೋಸ್ ಹೆಸರಿನಲ್ಲಿ, ವಿಭಿನ್ನವಾಗಿ ಪೋಟೋಶೂಟ್ ನಡೆಸೋ ಹುಚ್ಚಿನಲ್ಲಿ ಈ ಜೋಡಿಗೆ ಸಖತ್ ಟ್ರೋಲ್ ಗೆ ಒಳಗಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಜನರು ಮನಬಂದಂತೆ ಟ್ರೋಲ್ ಮಾಡ್ತಿದ್ದಾರೆ.

RELATED ARTICLES

Most Popular