ಹುಟ್ಟುತ್ತಲೇ ಸ್ಯಾಂಡಲ್ ವುಡ್ ನ ಎಲ್ಲ ಸ್ಟಾರ್ ಪರಿವಾರದ ಪ್ರೀತಿ- ಅಕ್ಕರೆಯಲ್ಲಿ ಮಿಂದು ಬೆಳೆಯುತ್ತಿರುವ ಜ್ಯೂನಿಯರ್ ಚಿರು ನಾಮಕರಣ ಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ತಂದೆ-ತಾಯಿಗಿಂತ ಒಂದು ಹೆಜ್ಜೆ ಮಂದೇ ಹೋದ ಜ್ಯೂನಿಯರ್ ಚಿರು ತೊಟ್ಟಿಲಲ್ಲೇ ಭರ್ಜರಿ ಪೋಟೋಶೂಟ್ ಗೂ ಪೋಸ್ ನೀಡಿದ್ದಾನೆ.

Photo credit-GoLucky Diaries Photography
ಎಲ್ಲ ಅಂದುಕೊಂಡಂತೆ ಆಗಿದ್ದರೇ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಜೊತೆಯಾಗಿ ನಿಂತು ತಮ್ಮ ಪ್ರೀತಿಯ ಕುಡಿಗೆ ನಾಮಕರಣ ಮಾಡಬೇಕಿತ್ತು. ಆದರೆ ವಿಧಿ ಆ ಅದೃಷ್ಟ ಕಿತ್ತುಕೊಂಡಿದೆ.

ಆದರೆ ತಂದೆ ಕಳೆದುಕೊಂಡ ಮಗುವಿಗೆ ತಂದೆ-ತಾಯಿ ಎಲ್ಲವೂ ಆಗಿ ಬೆಳೆಸುತ್ತಿರುವ ನಟಿ ಮೇಘನಾ ರಾಜ್, ಚಿರು ಆಶಯದಂತೆ ಜ್ಯೂನಿಯರ್ ಚಿರುವನ್ನು ಬೆಳೆಸುವ ವಾಗ್ದಾನ ಮಾಡಿದ್ದಾರೆ.

ಚಿರುಗೆ ಮೇಘನಾ ಸೀಮಂತದಿಂದ ಆರಂಭಿಸಿ ಮಗುವಿಗೆ ಸಂಬಂಧಿಸಿದ ಎಲ್ಲ ಆಚರಣೆಗಳು ಅದ್ದೂರಿಯಾಗಿ ನಡೆಸುವ ಆಸೆ ಇತ್ತಂತೆ. ಹೀಗಾಗಿ ಚಿರು ಆಸೆಯಂತೆ ಜ್ಯೂನಿಯರ್ ಚಿರು ನಾಮಕರಣ ಅದ್ದೂರಿಯಾಗಿ ನಡೆಯಲಿದೆ.

ಇದಕ್ಕೆ ಮೇಘನಾ ರಾಜ್ ಈಗಾಗಲೇ ಸಿದ್ಧತೆ ನಡೆಸಿದ್ದು ತಮ್ಮ ಅಭಿಮಾನಿಗಳು ಕಾತುರರಾಗಿ ಕಾಯ್ತಿರೋ ಜ್ಯೂನಿಯರ್ ಚಿರು ದರ್ಶನಕ್ಕಾಗಿ ಅದ್ದೂರಿ ಪೋಟೋ ಶೂಟ್ ಕೂಡ ಮಾಡಿಸಿದ್ದಾರೆ.

Photo credit-GoLucky Diaries Photography
ಶಿಶುಗಳ ಹಾಗೂ ಪ್ರಗೆನ್ಸಿ ಪೋಟೋಶೂಟ್ ನಲ್ಲಿ ಪ್ರಸಿದ್ಧಿ ಪಡೆದ ಅವಾರ್ಡ್ ವಿನ್ನಿಂಗ್ ಪೋಟೋಗ್ರಾಫರ್ ಭಾರ್ಗವಿ ಬಳಿ ಜ್ಯೂನಿಯರ್ ಚಿರು ಮೊದಲ ಪೋಟೋ ಶೂಟ್ ನೆರವೇರಿದೆ.

Photo credit-GoLucky Diaries Photography
ಮುದ್ದಾದ ಮಗನನ್ನು ಬೇರೆ ಬೇರೆ ರೀತಿಯ ಪೋಸ್ ನಲ್ಲಿ ಮಲಗಿಸಿ ಪೋಟೋ ತೆಗೆದು ಮೇಘನಾ ಸಂಭ್ರಮಿಸಿದ್ದಾರೆ. GoLuckyDairies photography ಮಾಲಿಕೆಯಾಗಿರುವ ಭಾರ್ಗವಿ ಖುದ್ದು ಪೋಟೋಶೂಟ್ ನಡೆಸಿದ್ದು ವಿಭಿನ್ನ ಕಾಸ್ಟ್ಯೂಮ್ ನಲ್ಲಿ ಜ್ಯೂನಿಯರ್ ಚಿರು ಪೋಸು ನೀಡಿ ಅಪ್ಪ-ಅಮ್ಮನ ದಾಖಲೆ ಮುರಿದಿದ್ದಾನೆ.

ಮೂಲಗಳ ಮಾಹಿತಿ ಪ್ರಕಾರ ಫೆ.ಮೊದಲ ವಾರದಲ್ಲಿ ಜ್ಯೂನಿಯರ್ ಚಿರು ನಾಮಕರಣ ನಡೆಯಲಿದ್ದು, ಈ ವೇಳೆ ಪೋಟೋಶೂಟ್ ಅಲ್ಬಮ್ ನ್ನು ಮೇಘನಾ ರಾಜ್ ಹಂಚಿಕೊಳ್ಳಲಿದ್ದಾರೆ.

ಮೇಘನಾ ರಾಜ್ ಹಾಗೂ ಸರ್ಜಾ ಕುಟುಂಬ ಜ್ಯೂನಿಯರ್ ಚಿರುಗೆ ಸಂಬಂಧಿಸಿದ ಎಲ್ಲ ಸಂಗತಿಗಳನ್ನು ಅದ್ದೂರಿಯಾಗಿ ನಡೆಸಿಕೊಂಡು ಬರುತ್ತಿದ್ದು ಮಗುವಿನ ಚಿಕ್ಕಪ್ಪ ಧ್ರುವ್ ಸರ್ಜಾ ಜ್ಯೂನಿಯರ್ ಚಿರು ಹುಟ್ಟುತ್ತಿದ್ದಂತೆ ಬೆಳ್ಳಿ ತೊಟ್ಟಿಲು ತಂದಿದ್ದರು .

ಮೇಘನಾರಾಜ್ ಕೂಡ ಪೋಟೋಶೂಟ್ ಗೂ ಕಾಳಜಿ ವಹಿಸಿದ್ದು ಬೇಬಿ ಪೋಟೋಗ್ರಫಿ ಎಕ್ಸಪರ್ಟ್ ಭಾರ್ಗವಿಯವರನ್ನೇ ಆಯ್ಕೆ ಮಾಡಿದ್ದಾರೆ.