ತಿರುಪತಿ : ಶ್ರೀಮಂತ ದೇಗುಲವೆಂಬ ಖ್ಯಾತಿಗೆ ಪಾತ್ರವಾಗಿರುವ ತಿರುಪತಿ ತಿರುಮಲ ದೇವಸ್ಥಾನದಲ್ಲೀಗ ಭಕ್ತರಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ತಿರುಪತಿ ತಿಮ್ಮಪ್ಪನ ಸನ್ನಿಧಾನದ ಬೆಟ್ಟವನ್ನೇರುವ ವೇಳೆಯಲ್ಲಿ ಭಕ್ತರನ್ನು ಬೆದರಿಸಿ ದರೋಡೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಭಕ್ತರು ಬೆಚ್ಚಿಬಿದ್ದಿದ್ದಾರೆ.

ಕರ್ನೂಲ್ ಮೂಲದ ಸುನಿಲ್ ಹಾಗೂ ಅವರ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ತಡರಾತ್ರಿ ಅಲಿಪಿರಿಯಿಂದ ತಿರುಮಲ ಬೆಟ್ಟವನ್ನೇರು ತ್ತಿದ್ದರು. ಈ ವೇಳೆಯಲ್ಲಿ ಕಳ್ಳರ ಗುಂಪೊಂದು ಕಟುಂಬವನ್ನು ಅಡ್ಡಗಟ್ಟಿ ದರೋಡೆಗೆ ಯತ್ನಿಸಿದೆ. ದೇವಸ್ಥಾನವನ್ನು ತಲುಪಲು ಇನ್ನೂ 2,830 ಮೆಟ್ಟಿಲು ದೂರದಲ್ಲಿರುವಾಗಲೇ ಈ ಘಟನೆ ನಡೆದಿದೆ. ಕುಟುಂಬದವರ ಬಳಿಯಲ್ಲಿದ್ದ ಚಿನ್ನಾಭರಣಗಳನ್ನು ದೋಚಲು ದರೋಡೆಕೋರರ ತಂಡ ಮುಂದಾಗಿದೆ. ಈ ವೇಳೆಯಲ್ಲಿ ಸಹಾಯವಾಣಿ 100ಕ್ಕೆ ಕರೆ ಮಾಡಿದ ಕುಟುಂಬ ದರೋಡೆಕೋರರಿಂದ ಪಾರಾಗಿದೆ.

ಕೊರೊನಾ ವೈರಸ್ ಸೋಂಕಿನ ನಂತರದಲ್ಲಿ ತಿರುಪತಿ ತಿರುಮಲ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಭಕ್ತರನ್ನೇ ಟಾರ್ಗೆಟ್ ಮಾಡಿ ದರೋಡೆಕೋರರ ತಂಡ ದುಷ್ಕೃತ್ಯವನ್ನೆಸಗುತ್ತಿದೆ ಎನ್ನಲಾಗುತ್ತಿದೆ. ಈ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.