ಮೇಷರಾಶಿ
ಆರ್ಥಿಕ ಅನುಕೂಲ, ಶುಭ ಕಾರ್ಯಗಳಿಗೆ ಚಾಲನೆ, ಶತ್ರುಗಳ ಕಾಟ, ಮನೆಯಲ್ಲಿ ಧರ್ಮ ಕಾರ್ಯ, ಲಾಭದ ಪ್ರಮಾಣದಲ್ಲಿ ಚೇತರಿಕೆ, ಗೃಹ ನಿರ್ಮಾಣದ ಮನಸ್ಸು, ಸಂಗಾತಿಯಿಂದ ಅನುಕೂಲ, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಅನಾರೋಗ್ಯ ಸಮಸ್ಯೆ
ವೃಷಭರಾಶಿ
ಸಹೋದ್ಯೋಗಿಗಳೊಂದಿಗೆ ಅಸಮಾಧಾನ, ಸಮಸ್ಯೆಯನ್ನು ಎಚ್ಚರಿಕೆಯಿಂದ ನಿಭಾಯಿಸಿ, ವ್ಯಾಪಾರದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಒತ್ತಡ, ಸಂಗಾತಿಯೊಂದಿಗೆ ವಾಗ್ವಾದ, ಆರೋಗ್ಯದಲ್ಲಿ ಏರುಪೇರು, ಕಿರಿಕಿರಿಗಳು.
ಮಿಥುನರಾಶಿ
ತಾಯಿಯ ಆರೋಗ್ಯದ ಬಗ್ಗೆ ಚಿಂತೆ ನಿಮ್ಮನ್ನು ಕಾಡುವುದು, ದುಶ್ಚಟಗಳು ಅಧಿಕ, ಅನಗತ್ಯ ವಿಷಯಗಳ ಚರ್ಚೆ, ಜೀವನದಲ್ಲಿ ಮೂರನೇ ವ್ಯಕ್ತಿಗಳ ಪ್ರವೇಶ, ಹೆಣ್ಣುಮಕ್ಕಳಿಂದ ಲಾಭ, ಗುಪ್ತ ಆಲೋಚನೆಗಳು, ಸಹೋದರರ ಆರೋಗ್ಯಕ್ಕೆ ಕುತ್ತು.
ಕಟಕರಾಶಿ
ವಾಹನ ಅಪಘಾತದ ಭೀತಿ, ಆಪ್ತರ ಜೊತೆಗೆ ಅನಾವಶ್ಯಕ ವಿರಸ, ಗೃಹೋಪಕರಣ ಖರೀದಿ, ನೋವು ಮತ್ತು ಭಾದೆ, ಸ್ತ್ರೀಯರಿಂದ ನೋವು, ವಾಹನ ಮತ್ತು ಗೃಹ ಖರೀದಿ ಆಸೆ, ತಾಯಿಂದ ಧನಾಗಮನ, ಸ್ಥಿರಾಸ್ತಿಯಿಂದ ಲಾಭ, ಅಲಂಕಾರಿಕ ವಸ್ತುಗಳಿಂದ ಲಾಭ, ಮೋಜುಮಸ್ತಿಯಲ್ಲಿ ತೊಡಗುವಿರಿ, ಇಚ್ಛೆಗಳ ಬಯಕೆ.
ಸಿಂಹರಾಶಿ
ನಿರೀಕ್ಷೆಗೂ ಮೀರಿದ ಸಹಾಯ, ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸದಲ್ಲಿ ಪ್ರಗತಿ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ, ಹೆಣ್ಣು ಮಕ್ಕಳ ನಡವಳಿಕೆಯಿಂದ ಬೇಸರ, ನೆರೆಹೊರೆಯವರಿಂದ ಅನುಕೂಲ, ಉದ್ಯೋಗ ಬದಲಾವಣೆ ಆಲೋಚನೆ, ಶೀತ ಮತ್ತು ಕೆಮ್ಮು. ಕೈ ಹಾಕಿದ ಕೆಲಸದಲ್ಲಿ ಯಶಸ್ಸು.
ಕನ್ಯಾರಾಶಿ
ಪತ್ನಿಗೆ ಅನಾರೋಗ್ಯ ಕಂಡುಬರಲಿದೆ, ವೃತ್ತಿನಿರತರಿಗೆ ಶ್ಲಾಘನೆ, ಮಿತ್ರರಿಂದ ವಿರೋಧಧ ಭಯ, ಅದೃಷ್ಟದ ದಿವಸ, ಸ್ತ್ರೀಯರಿಂದ ಅನುಕೂಲ, ಮಹಿಳಾ ಮಿತ್ರರಿಂದ ಸಹಕಾರ, ಮನಸ್ತಾಪ ಮತ್ತು ಕಿರಿಕಿರಿ ಪ್ರಯಾಣದಲ್ಲಿ ಅಡ್ಡಿ-ಆತಂಕ, ಆಕಸ್ಮಿಕ ಧನಾಗಮನ.
ತುಲಾರಾಶಿ
ದೂರ ಪ್ರಯಾಣ, ಮುಂಗೋಪ ಮತ್ತು ಸಿಡುಕಿನಿಂದ ಕಾರ್ಯಹಾನಿ, ಅನಿರೀಕ್ಷಿತ ಧನಾಗಮನ, ಪಾಲುದಾರಿಕೆಯಲ್ಲಿ ಅನುಕೂಲ, ಮಾನಸಿಕ ಚಂಚಲತೆ, ಶೃಂಗಾರ ವಸ್ತುಗಳ ಬಗ್ಗೆ ಒಲವು, ಸಂಗಾತಿಯಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಮಕ್ಕಳ ಭವಿಷ್ಯದ ಚಿಂತೆ.
ವೃಶ್ಚಿಕರಾಶಿ
ದೂರ ಪ್ರಯಾಣದಿಂದ ಕಾರ್ಯಾನುಕೂಲ, ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಲಾಭ, ಸಂಸಾರಿಕ ಜೀವನದ ಬಗ್ಗೆ ಬೇಸರ, ಸ್ನೇಹಿತರು ಶತ್ರುಗಳಾಗುವರು, ಪಾಲುದಾರಿಕೆಯಲ್ಲಿ ಮೋಸ, ಅನಾರೋಗ್ಯ ಸಮಸ್ಯೆ, ಮಾನಸಿಕ ಒತ್ತಡ ಅಕ್ರಮದ ಆಲೋಚನೆಗಳು.
ಧನಸ್ಸುರಾಶಿ
ವ್ಯವಹಾರದಲ್ಲಿ ಯಶಸ್ಸು, ದೇವತಾ ದರ್ಶನ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ, ಗೊಂದಲಗಳಿಂದ ಅವಕಾಶ ಕಳೆದುಕೊಳ್ಳುವಿರಿ, ವಿದ್ಯಾಭ್ಯಾಸದಲ್ಲಿ ಸಮಸ್ಯೆ, ರೋಗ ಬಾಧೆಗಳು, ನೆರೆಹೊರೆಯವರೊಂದಿಗೆ ಶತ್ರುತ್ವ, ಮಕ್ಕಳಿಂದ ಲಾಭ.
ಮಕರರಾಶಿ
ಮನೆಯಲ್ಲಿ ಸಂತಸದ ವಾತಾವರಣ, ವ್ಯಾಪಾರ ವ್ಯವಹಾರದಲ್ಲಿ ಉನ್ನತಿ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಅಪವಾದಗಳು, ಭಾವನಾತ್ಮಕ ವಿಷಯಗಳಿಂದ ಭಾದೆ, ಸ್ಪರ್ಧಾತ್ಮಕ ವಿಷಯಗಳಲ್ಲಿ ಜಯ, ಕಲಾ ದೇವತೆಯ ಆರಾಧನೆ, ಮಹಿಳೆಯರಿಂದ ಅದೃಷ್ಟ ಉದ್ಯೋಗದಲ್ಲಿ ಯಶಸ್ಸು.
ಕುಂಭರಾಶಿ
ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ತಾಯಿಯಿಂದ ಧನಾಗಮನ, ಭಾವನಾತ್ಮಕ ವಿಷಯಗಳಲ್ಲಿ ಯಶಸ್ಸು, ಗುಪ್ತ ಇಚ್ಛೆಗಳಲ್ಲಿ ಜಯ, ಪ್ರಯಾಣದಲ್ಲಿ ಅನುಕೂಲ, ಗುರುಗಳ ಉಪದೇಶ ಪ್ರಾಪ್ತಿ, ತಂದೆಯಿಂದ ಅದೃಷ್ಟ.
ಮೀನರಾಶಿ
ಆರ್ಥಿಕ ಚಿಂತೆ ಕಾಡುವುದು, ವ್ಯಾಪಾರ ವ್ಯವಹಾರದಲ್ಲಿ ನಷ್ಟ, ದೂರ ಪ್ರಯಾಣ, ಕುಟುಂಬದಲ್ಲಿ ಗೊಂದಲ, ಉದ್ಯೋಗ ಮತ್ತು ಗೃಹ ಬದಲಾವಣೆಯಲ್ಲಿ ಯಶಸ್ಸು, ತಂದೆಯ ನಡವಳಿಕೆಯಿಂದ ಬೇಸ, ಎಚ್ಚರಿಕೆಯಿಂದ ಹೆಜ್ಜೆಯನ್ನಿಡಿ.