ನವದೆಹಲಿ : ಬಜೆಟ್ ಘೋಷಣೆಯ ಬೆನ್ನಲ್ಲೇ ವಾಹನ ಸವಾರರಿಗೆ ಕೇಂದ್ರ ಸರಕಾರ ಬಿಗ್ ಶಾಕ್ ಕೊಟ್ಟಿದೆ. ಸೆಸ್ ದರ ಏರಿಕೆಯ ಬೆನ್ನಲ್ಲೇ ಡಿಸೇಲ್ 4 ರೂಪಾಯಿ ಹಾಗೂ ಪೆಟ್ರೋಲ್ ದರದಲ್ಲಿ 2.50 ರೂಪಾಯಿ ಏರಿಕೆಯಾಗಲಿದೆ.
ಕೇಂದ್ರ ಸರಕಾರ ಬಂಡವಾಳ ಕ್ರೂಢಿಕರಣಕ್ಕೆ ಪೆಟ್ರೋಲ್, ಡಿಸೇಲ್ ಮೇಲಿನ ಸೆಸ್ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲ್, ಡಿಸೇಲ್ ದರ ಇಳಿಕೆಯಾಗಲಿದೆ ಅಂತಾ ನಿರೀಕ್ಷೆಯಲ್ಲಿದ್ದ ವಾಹನ ಸವಾರರಿಗೆ ಬಿಗ್ ಶಾಕ್ ಕೊಟ್ಟಿದೆ.
ಕಳೆದ ಕೆಲ ತಿಂಗಳಿನಿಂದಲೂ ಏರಿಕೆಯನ್ನು ಕಾಣುತ್ತಿದ್ದ ಡಿಸೇಲ್, ಪೆಟ್ರೋಲ್ ದರ ಇನ್ನಷ್ಟು ಏರಿಕೆಯಾಗಲಿದೆ. ಈ ಮೂಲಕ ದೇಶದಾದ್ಯಂತ ಪೆಟ್ರೋ ಹಾಗೂ ಡಿಸೇಲ್ ದುಬಾರಿಯಾಗಲಿದೆ. ನೂತನ ದರ ಇಂದು ಮಧ್ಯ ರಾತ್ರಿಯಿಂದಲೇ ಜಾರಿಗೆ ಬರುತ್ತಿದೆ.