ಸೋಮವಾರ, ಏಪ್ರಿಲ್ 28, 2025
HomeBreakingಕೊರೋನಾದಿಂದ ಕುಸಿದ ಉದ್ಯಮ….! ಚನ್ನಪಟ್ಟಣ ಆಟಿಕೆ ತಯಾರಕರ ಕಣ್ಣಿರು ಒರೆಸಲು ಮುಂದಾದ ಮಹಾರಾಣಿ ತ್ರಿಷಿಕಾದೇವಿ…!!

ಕೊರೋನಾದಿಂದ ಕುಸಿದ ಉದ್ಯಮ….! ಚನ್ನಪಟ್ಟಣ ಆಟಿಕೆ ತಯಾರಕರ ಕಣ್ಣಿರು ಒರೆಸಲು ಮುಂದಾದ ಮಹಾರಾಣಿ ತ್ರಿಷಿಕಾದೇವಿ…!!

- Advertisement -

ಮೈಸೂರು:  ಆಧುನಿಕರಣದ ಭರಾಟೆ ಹಾಗೂ ಪ್ಲ್ಯಾಸ್ಟಿಕ್ ದಾಳಿಯಿಂದ ನಲುಗಿದ ಕರ್ನಾಟಕದ ಅಪ್ಪಟ ದೇಸಿ ಚನ್ನಪಟ್ಟಣ ಆಟಿಕೆ ಉತ್ಪಾದನೆ ಹಾಗೂ ಮಾರಾಟಕ್ಕೆ ಮೈಸೂರು ಯುವರಾಣಿ ತ್ರಿಷಿಕಾದೇವಿ ಬೆಂಬಲ ಹಾಗೂ ಪ್ರೋತ್ಸಾಹ ನೀಡಿದ್ದಾರೆ. ಆ ಮೂಲಕ ಆಟಿಕೆ ತಯಾರಿಕೆಯನ್ನೇ ಬದುಕಾಗಿಸಿಕೊಂಡು ಈಗ ಸಂಕಷ್ಟದಲ್ಲಿದ್ದ ಕುಶಲಕರ್ಮಿಗಳ ಕಣ್ಣೀರು ಒರೆಸುವ ಕೆಲಸ ಮಾಡಿದ್ದಾರೆ.

ಕೊರೋನಾ ಸಂಕಷ್ಟ ಹಾಗೂ ಕಡಿಮೆ ಬೆಲೆಯಲ್ಲಿ ಆಟಿಕೆ ಉತ್ಪಾದಿಸುವ ಚೀನಾದ ಪೈಪೋಟಿಯಿಂದ ಚನ್ನಪಟ್ಟಣ ಆಟಿಕೆ ತಯಾರಿಕೆ ಉದ್ಯಮ ನಲುಗಿತ್ತು. ಈ ಬಗ್ಗೆ ಮಾಹಿತಿ ಪಡೆದ ರಾಣಿ ತ್ರಿಷಿಕಾದೇವಿ ಚನ್ನಪಟ್ಟಣ ಆಟಿಕೆ ಉದ್ಯಮದ ಸಂಕಷ್ಟವನ್ನು ಅರಿತು ಅವರಿಗೆ ನೆರವಾಗಲು ಮುಂದಾಗಿದ್ದಾರೆ.

ಪರಿಸರ ಸ್ನೇಹಿಯಾದ ಈ ಆಟಿಕೆಗಳನ್ನು ಜಗತ್ತಿಗೆ ಪರಿಚಿಸುವುದು ಹಾಗೂ ಉತ್ಪಾದಕರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ತ್ರಿಷಿಕಾಕುಮಾರಿ, ದಿ ಲಿಟಲ್ ಬಟಿಂಗ್  ವೆಬ್ ಪೋರ್ಟಲ್ ಗೆ ಚಾಲನೆ ನೀಡಿದ್ದಾರೆ. ಇದರ ಮೂಲಕ ವಿಶ್ವದಾದ್ಯಂತ ಚನ್ನಪಟ್ಟಣದ ಗೊಂಬೆಗಳಿಗೆ ಮಾರುಕಟ್ಟೆ ಒದಗಿಸುವುದು ಅವರ ಉದ್ದೇಶ.

ಚನ್ನಪಟ್ಟಣ ಸೇರಿದಂತೆ ರಾಮನಗರದ ಸುತ್ತಮುತ್ತಲು ಉತ್ಪಾದನೆಯಾಗುವ ಮರದ ಆಟಿಕೆಗಳ ಪ್ರಚಾರಕ್ಕೆ ವೇದಿಕೆ ಒದಗಿಸುವುದು. ಗೋಗ್ರೀನ್ ಕಲ್ಪನೆಯಲ್ಲಿ ಆಟಿಕೆಗಳಿಗೆ ಪರಿಸರಕ್ಕೆ ಮಾರಕವಲ್ಲದ ಬಣ್ಣ ಬಳಿಯುವುದು, ಮಾರಾಟಕ್ಕೆ ಅವಕಾಶ ಕಲ್ಪಿಸುವುದು ಈ ಪೋರ್ಟಲ್ ಉದ್ದೇಶ ಎಂದು ತ್ರಿಷಿಕಾ ಹೇಳಿದ್ದಾರೆ.

ಇದಕ್ಕಾಗಿ ಚನ್ನಪಟ್ಟಣ ಸೇರಿದಂತೆ ಆಟಿಕೆ ಉತ್ಪಾದಿಸುವ ಪ್ರದೇಶಗಳಿಗೆ ಭೇಟಿ ನೀಡಿ ಉತ್ಪಾದಕರ ಜೊತೆ ಚರ್ಚಿಸಿ ಮಾರುಕಟ್ಟೆಗೆ ಗುಣಮಟ್ಟದ ಉತ್ಪನ್ನ ಒದಗಿಸುವ ಉದ್ದೇಶದಿಂದ  ಈ ಪೋರ್ಟಲ್ ಕಾರ್ಯಾರಂಭ ಮಾಡಲಿದೆ ಎಂದು ತ್ರಿಷಿಕಾದೇವಿಹೇಳಿದ್ದು, ಏಪ್ರಿಲ್ ವೇಳೆಗೆ ಈ ಕಾರ್ಯ ಆರಂಭಗೊಳ್ಳಲಿದೆ.

RELATED ARTICLES

Most Popular