ಸೋಮವಾರ, ಜೂನ್ 16, 2025
HomeBreakingಸೌತ್ ಇಂಡಿಯಾ ಮಿಸ್ ಗೂ ಕಾಡಿತ್ತಂತೆ ಕೆಟ್ಟಅನುಭವ...! ಬಿಗ್ ಬಾಸ್ ನಲ್ಲಿ ಬಾಡಿಶೇಮಿಂಗ್ ಕಣ್ಣೀರ ಕಹಾನಿ..!!

ಸೌತ್ ಇಂಡಿಯಾ ಮಿಸ್ ಗೂ ಕಾಡಿತ್ತಂತೆ ಕೆಟ್ಟಅನುಭವ…! ಬಿಗ್ ಬಾಸ್ ನಲ್ಲಿ ಬಾಡಿಶೇಮಿಂಗ್ ಕಣ್ಣೀರ ಕಹಾನಿ..!!

- Advertisement -

ಬಿಗ್ ಬಾಸ್ ಮನೆಯಲ್ಲಿ ಅದಾಗಲೇ ಹುಡುಗಿಯರ ಕಣ್ಣೀರ ಕಹಾನಿ ಆರಂಭಗೊಂಡಿದೆ. ಈಗಾಗಲೇ ಮೊಗ್ಗಿನ ಮನಸ್ಸಿನ ಚೆಲುವೆ ಶುಭಾಪೂಂಜಾ ಕಣ್ಣೀರಾಗಿದ್ದರೇ, ಬಾಡಿ ಶೇಮಿಂಗ್ ಕತೆಯೊಂದಿಗೆ ಸೌತ್ ಇಂಡಿಯಾ ಮಿಸ್ ವಿಜೇತ ಮಾಡೆಲ್ ದಿವ್ಯಾ ಸುರೇಶ್ ಬಾಡಿ ಶೇಮಿಂಗ್ ನೆನೆದು ಕಣ್ಣೀರಿಟ್ಟಿದ್ದಾರೆ.

S1

ಪಿಯುಸಿ ಹಾಗೂ ಡಿಗ್ರಿ ಓದುವಾಗ ನಾನು ತುಂಬ ಮುಗ್ಧ ಹುಡುಗಿಯಾಗಿದ್ದೆ. ಸಾಮಾನ್ಯ ಹುಡುಗಿಯರಂತೆ ಚೂಡಿದಾರ ಹಾಕ್ಕೊಂಡು, ತಲೆಗೆ ಎಣ್ಣೆ ಹಚ್ಚಿಕೊಂಡು ಕಾಲೇಜಿಗೆ ಹೋಗುತ್ತಿದ್ದೆ. ಇದಕ್ಕೆ ಎಲ್ಲರೂ ನನ್ನನ್ನು ರೇಗಿಸುತ್ತಿದ್ದರು. ಹಳ್ಳಿಗುಗ್ಗು ಎಂದು ಟೀಸ್ ಮಾಡುತ್ತಿದ್ದರು ಎಂದು ಕಣ್ಣೀರಿಟ್ಟಿದ್ದಾರೆ.

S22

ಕಾಲೇಜು ದಿನಗಳಲ್ಲಿ ಇಷ್ಟು ಔಟ್ ಡೇಟ್ ಫ್ಯಾಶನ್ ಗರ್ಲ್ ಎನ್ನಿಸಿಕೊಂಡಿದ್ದ ದಿವ್ಯ ಸುರೇಶ್ 2017 ರಲ್ಲಿ ಸೌತ್ ಇಂಡಿಯಾ ಮಿಸ್ ಸ್ಪರ್ಧೆ ಗೆದ್ದಿದ್ದು ಬಳಿಕ ಮಾಡೆಲ್ ಆಗಿ ವೃತ್ತಿ ಬದುಕು ಆರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಕನ್ನಡ-ತೆಲುಗು ಸಿನಿಮಾದಲ್ಲಿ ಹಾಗೂ ಧಾರಾವಾಹಿಯಲ್ಲಿ ನಟಿಸಿ ಬೋಲ್ಡ್ ಅಫೀಯರೆನ್ಸ್ ನಿಂದ ಪ್ರೇಕ್ಷಕರ ಮನಗೆದ್ದಿದ್ದಾರೆ.

S13

ಅಷ್ಟೇ ಅಲ್ಲ ತಮ್ಮನ್ನು ರೇಗಿಸುತ್ತಿದ್ದವರಿಗೆ ನಾನು ಚೂಡಿದಾರ ಹಾಕ್ಕೊಂಡು ಅಡುಗೆನೂ ಮಾಡ್ತೀನಿ. ಚಡ್ಡಿ ಹಾಕ್ಕೊಂಡು ನಿಮ್ಮಪ್ಪನ ಗಾಡಿನೂ ಓಡಸ್ತೀನಿ ಎಂದು ಬೋಲ್ಡ್ ಆನ್ಸರ್ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ.

S17

ನಾಲ್ಕು ವರ್ಷದ ಹಿಂದೆ ನನಗೆ ಬಾಡಿ ಶೇಮಿಂಗ್ ಮಾಡಿದವರು ಈಗ ವಾವ್….ಎಷ್ಟು ಎತ್ತರದ ಮಾಡೆಲ್. ಎಂತೆಂಥ ಡ್ರೆಸ್ ಹಾಕ್ತಾಳೆ ಎಂದು ಹೊಗಳುತ್ತಾರೆ. ಹೀಗಾಗಿ ನಾನು ಎಲ್ಲರನ್ನು ಮನವಿ ಮಾಡ್ತೇನೆ. ಯಾರೂ ಇನ್ನೊಬ್ಬರಿಗೆ ಬಾಡಿ ಶೇಮಿಂಗ್ ಮಾಡಬೇಡಿ ಎಂದಿದ್ದಾರೆ.

S13 1

ನೀವು ಹೇಗಿದ್ದೀರಾ ಅನ್ನೋದು ಮುಖ್ಯವಲ್ಲ. ಹೇಗೆ ಸಾಧಿಸ್ತೀರಾ? ನಿಮ್ಮಲ್ಲಿ ಹೊಸತನ್ನು ಸಾಧಿಸುವ ಛಲ ಎಷ್ಟಿದೆ ಅನ್ನೋದು ಮುಖ್ಯ. ಅದನ್ನು ನಾನು ನನ್ನ ಬದುಕಿನ ಮೂಲಕ ಸಾಬೀತು ಮಾಡಿದ್ದೀನಿ ಎಂದು ದಿವ್ಯ ಸುರೇಶ್ ತಮ್ಮ ಕಣ್ಣೀರ ಕಹಾನಿ ಬಿಚ್ಚಿಟ್ಟಿದ್ದಾರೆ.

RELATED ARTICLES

Most Popular