ಮಂಗಳವಾರ, ಜೂನ್ 17, 2025
HomeBreakingಒಳ್ಳೆ ಬಟ್ಟೆ ಹಾಕ್ಕೊಳಿ….ಮನೆಯಲ್ಲೇ ಇರಿ….! ಬಾಲಿವುಡ್ ಬೆಡಗಿ ವಿದ್ಯಾಬಾಲನ್ ಹೊಸ ಸ್ಲೋಗನ್….!!

ಒಳ್ಳೆ ಬಟ್ಟೆ ಹಾಕ್ಕೊಳಿ….ಮನೆಯಲ್ಲೇ ಇರಿ….! ಬಾಲಿವುಡ್ ಬೆಡಗಿ ವಿದ್ಯಾಬಾಲನ್ ಹೊಸ ಸ್ಲೋಗನ್….!!

- Advertisement -

ಸಾಲು ಸಾಲು ಸಮಾರಂಭಗಳು, ಹಬ್ಬಗಳನ್ನು ಎಂಜಾಯ್ ಮಾಡೋಕೆ ತರೇಹವಾರಿ ಬಟ್ಟೆ ಧರಿಸುತ್ತಿದ್ದವರಿಗೆ ಕರೋನಾ ಕಂಟಕ ತಂದೊಡ್ಡಿದೆ. ಹೀಗಾಗಿ ಹೊಸಬಟ್ಟೆಗಳು ಬೀರುವಿನಲ್ಲೇ ಬಿದ್ದಿವೆ. ಬಾಲಿವುಡ್ ನಟಿಮಣಿಯರು ಇದೇ ಕಾರಣಕ್ಕೆ ಕೊರಗುತ್ತಿದ್ದಾರಂತೆ. ಆದರೆ ಬಾಲಿವುಡ್ ನಟಿ ವಿದ್ಯಾಬಾಲನ್ ಮಾತ್ರ ಹೊಸ ಸ್ಲೋಗನ್ ಜೊತೆ ಪೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ.

A1a

ಹೌದು ಬಾಲಿವುಡ್ ನಟಿ ವಿದ್ಯಾಬಾಲನ್ ಗೆ ಹೊಸ ಹೊಸ ಮಾಡ್ರನ್ ಡ್ರೆಸ್ ಗಳನ್ನು ಹಾಕ್ಕೊಂಡು ಪಾರ್ಟಿ,ಫಂಕ್ಷನ್ ಅಟೆಂಡ್ ಮಾಡದೇ ಬೇಸರವಾಗಿದೆಯಂತೆ. ಹೀಗಾಗಿ ಅಚ್ಚೆ ಕಫಡೆ ಪೆಹನೋ ಔರ್ ಘರ್ ಪೇ ರಹೋ(ಒಳ್ಳೊಳ್ಳೆ ಬಟ್ಟೆ ಧರಿಸಿ ಮನೆಯಲ್ಲೇ ಇರಿ) ಎಂಬ ಸ್ಲೋಗನ್ ಜೊತೆ ಪೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/balanvidya/?utm_source=ig_embed

42 ವರ್ಷದ ವಿದ್ಯಾಬಾಲನ್ ಪಾರ್ಟಿವೇರ್ ಗೌನ್ ಗಳನ್ನು ತೊಟ್ಟು ಸಖತ್ ಪೋಟೋಶೂಟ್ ಮಾಡಿಸಿ ಪೋಟೋ ಹಾಗೂ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಸದಾ ಸೀರೆಯಂತಹ ಸಾಂಪ್ರದಾಯಿಕ ಬಟ್ಟೆಯಲ್ಲೇ ಕಾಣಿಸಿಕೊಳ್ಳುತ್ತೀರಿ ಎಂಬ ಕಮೆಂಟ್ ಗೆ ಇಲ್ಲಿದೆ ಉತ್ತರ ಎಂದಿದ್ದಾರೆ.

https://www.instagram.com/balanvidya/?utm_source=ig_embed

ನೀತಾಲುಲಾ ವಿನ್ಯಾಸಗೊಳಿಸಿದ ಬ್ಲಾಕ್ ಡೀಪ್ ನೆಕ್ ಗೌನ್ ಗಳನ್ನು ಧರಿಸಿದ ವಿದ್ಯಾಬಾಲನ್ ಅಭಿಮಾನಿಗಳ ಹೃದಯಬಡಿತ ಹೆಚ್ಚಿಸುವಂತೆ ಪೋಸ್ ನೀಡಿದ್ದು, ವಿದ್ಯಾಬಾಲನ್ ಪೋಟೋಶೂಟ್ ಕಂಡು ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

A33

ಕಳೆದ ವರ್ಷ ತೆರೆಕಂಡ ಗಣಿತಜ್ಞೆ  ಶಕುಂತಲಾ ದೇವಿ ವಿದ್ಯಾಬಾಲನ್ ಕೊನೆಯ ಚಿತ್ರವಾಗಿದ್ದು, ಅಮಿತ್ ನಿರ್ದೇಶನದ ಚಿತ್ರವೊಂದರಲ್ಲಿ ವಿದ್ಯಾಬಾಲನ್ ಅರಣ್ಯಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಕೊರೋನಾದಿಂದ ಶೂಟಿಂಗ್ ವಿಳಂಬವಾಗಿದೆ. ಡರ್ಟಿ ಪಿಕ್ಚರ್ ನ ಬೋಲ್ಡ್ ಪಾತ್ರದಿಂದ ಹೆಸರು ಗಳಿಸಿದ ವಿದ್ಯಾಬಾಲನ್ ಹಲವು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ.

RELATED ARTICLES

Most Popular