ಭಾನುವಾರ, ಜೂನ್ 15, 2025
HomeBreakingಸ್ಯಾಂಡಲ್ ವುಡ್ ಗೆ ತಟ್ಟಿದ ಕೊರೋನಾ ಎರಡನೇ ಅಲೆ ಶಾಕ್….! ಡಾರ್ಲಿಂಗ್ ಕೃಷ್ಣ-ಮಿಲನಾಗೆ ಸೋಂಕು…!!

ಸ್ಯಾಂಡಲ್ ವುಡ್ ಗೆ ತಟ್ಟಿದ ಕೊರೋನಾ ಎರಡನೇ ಅಲೆ ಶಾಕ್….! ಡಾರ್ಲಿಂಗ್ ಕೃಷ್ಣ-ಮಿಲನಾಗೆ ಸೋಂಕು…!!

- Advertisement -

ಇತ್ತೀಚಿಗಷ್ಟೇ ಹೊಸಬದುಕಿಗೆ ಕಾಲಿಟ್ಟು ಮಾಲ್ಡೀವ್ಸ್ ನಲ್ಲಿ ಹನಿಮೂನ್ ಮುಗಿಸಿ ಬಂದ ನವದಂಪತಿಗೆ ಕೊರೋನಾ ಶಾಕ್ ನೀಡಿದೆ. ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಗೆ ಕೊರೋನಾ ಸೋಂಕು ತಗುಲಿದೆ.

 ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ದಂಪತಿಗೆ  ಕೊರೋನಾ ಸೋಂಕು ತಗುಲಿರುವ ವಿಚಾರವನ್ನು ಸ್ವತಃ  ಡಾರ್ಲಿಂಗ್ ಕೃಷ್ಣ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಮ್ಮ ಸಂಪರ್ಕಕ್ಕೆ ಬಂದ ಎಲ್ಲರೂ ಟೆಸ್ಟ್ ಮಾಡಿಸಿಕೊಳ್ಳುವಂತೆ ಡಾರ್ಲಿಂಗ್  ಕೃಷ್ಣ ಮನವಿ ಮಾಡಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ಕಳೆದ ಮೂರು ಗಂಟೆಗಳ ಹಿಂದೆ ಪೋಸ್ಟ್ ಮಾಡಿರುವ ಡಾರ್ಲಿಂಗ್ ಕೃಷ್ಣಾ ನಮ್ಮ ಕೊರೋನಾ ಟೆಸ್ಟ್ ಪಾಸಿಟಿವ್ ಬಂದಿದೆ. ಸಂಪರ್ಕಕ್ಕೆ ಬಂದವರು ಎಚ್ಚರಿಕೆ ವಹಿಸಿ ಎಂದಿದ್ದಾರೆ.

https://www.instagram.com/p/CNovFpfAVEP/?igshid=w1nae9e4skwg

ಫೆ.14 ರ ಪ್ರೇಮಿಗಳ ದಿನಾಚರಣೆಯಂದು ಸಪ್ತಪದಿ ತುಳಿದಿದ್ದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ಬಳಿಕ ಮಾಲ್ಡೀವ್ಸ್ ಗೆ ಹನಿಮೂನಗೆ ತೆರಳಿದ್ದರು. ಅಲ್ಲಿಂದ ಬಂದ ಬಳಿಕ ಇಬ್ಬರೂ ಸಿನಿಮಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.

ಇದೀಗ ಇಬ್ಬರಿಗೂ ಕೊರೋನಾ ಪಾಸಿಟಿವ್ ಆಗಿದ್ದು, ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ  ಚಿಕಿತ್ಸೆ ಪಡೆದುಕೊಂಡು ಕ್ವಾರಂಟೈನ್ ಆಗಿದ್ದಾರೆ ಎನ್ನಲಾಗಿದೆ. ಇನ್ನು ನೆಚ್ಚಿನ ನಟದಂಪತಿಗೆ ಕೊರೋನಾ ತಗುಲಿರುವ ಸಂಗತಿ ತಿಳಿದ ಫ್ಯಾನ್ಸ್ ಬೇಗ ಚೇತರಿಸಿಕೊಳ್ಳಿ ಎಂದು ವಿಶ್ ಮಾಡುತ್ತಿದ್ದಾರೆ.

RELATED ARTICLES

Most Popular